Asianet Suvarna News Asianet Suvarna News

ಏನಿದು ಕ್ಲೌಡ್ ಸ್ಟೋರೆಜ್?: ಅಮೆಜಾನ್, ಮೈಕ್ರೋಸಾಫ್ಟ್‌ಗೇಕೆ ತಲೆನೋವು?

ಕ್ಲೌಡ್ ಕಂಪ್ಯೂಟಿಂಗ್‌ ನೀತಿಯ ಕರಡು! ದೇಶದಲ್ಲಿ ಉತ್ಪಾದಿಸಲಾದ ಡೇಟಾ ಸಂಗ್ರಹಣೆ! ಜಾಗತಿಕ ತಂತ್ರಜ್ಞಾನ ದೈತ್ಯರಿಗೆ ಹೊಡೆತ?! ಡೇಟಾ ಸಂಗ್ರಹಣಾ ಕೇಂದ್ರ ಹೆಚ್ಚಳ ಅನಿವಾರ್ಯ! ಅಮೆಜಾನ್, ಮೈಕ್ರೋಸಾಫ್ಟ್‌ಗೆ ತಲೆನೋವು

India panel wants localisation of cloud storage data
Author
Bengaluru, First Published Aug 5, 2018, 2:50 PM IST

ನವದೆಹಲಿ(ಆ.4): ಭಾರತದಲ್ಲಿ ಉತ್ಪಾದಿಸಲಾದ ಡೇಟಾಗಳನ್ನು ದೇಶದೊಳಗೇ ಸಂಗ್ರಹಿಸಿ ಇಡಬೇಕು ಎಂದು ಕೇಂದ್ರ ಸರ್ಕಾರದ ಕ್ಲೌಡ್ ಕಂಪ್ಯೂಟಿಂಗ್‌ ನೀತಿಯ ಕರಡಿನಲ್ಲಿ ಸ್ಪಷ್ಟಪಡಿಸಲಾಗಿದೆ. ಅಮೆಜಾನ್‌ ಮತ್ತು ಮೈಕ್ರೋಸಾಫ್ಟ್‌ನಂತಹ ಜಾಗತಿಕ ತಂತ್ರಜ್ಞಾನ ದೈತ್ಯರಿಗೆ ಈ ಪ್ರಸ್ತಾವ ಭಾರೀ ಹೊಡೆತ ನೀಡುವ ಸಾಧ್ಯತೆಯಿದೆ ಎಂದು ರಾಯ್ಟರ್ಸ್‌ ವರದಿ ಮಾಡಿದೆ. 

ಈ ನೀತಿ ಜಾರಿಗೆ ಬಂದರೆ, ಭಾರತದಲ್ಲಿರುವ ಡೇಟಾ ಸಂಗ್ರಹಣಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಈ ದೈತ್ಯ ಸಂಸ್ಥೆಗಳಿಗೆ ಬರಲಿದ್ದು, ಅವುಗಳು ಹೆಚ್ಚಿನ ಹೂಡಿಕೆ ಮಾಡಬೇಕಾಗುತ್ತದೆ. ಆದರೆ, ಭಾರತೀಯ ಕಾರ್ಪೊರೇಟ್‌ ಸಂಸ್ಥೆಗಳು ಮತ್ತು ಹಲವು ಸ್ಟಾರ್ಟಪ್‌ಗಳಿಗೆ ಈ ನೀತಿ ವರದಾನವಾಗಲಿದೆ. 

ಸರ್ಕಾರ ಡೇಟಾ ಸುರಕ್ಷತಾ ಕಾಯ್ದೆಯನ್ನು ಅಂತಿಮಗೊಳಿಸುತ್ತಿದ್ದು, ದೇಶದೊಳಗಿನ ಡೇಟಾವನ್ನು ಸ್ಥಳೀಯವಾಗಿಯೇ ಸಂಗ್ರಹಿಸಿಡುವ ಅನಿವಾರ್ಯತೆ ಸೃಷ್ಟಿಸಲಿದೆ. ಡಿಜಿಟಲ್‌ ಪಾವತಿಗಳು ಮತ್ತು ಇ-ಕಾಮರ್ಸ್‌ ವಲಯಗಳಿಗೂ ಸ್ಥಳೀಯವಾಗಿಯೇ ಡೇಟಾ ಸಂಗ್ರಹಿಸಿಡುವುದನ್ನು ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ.

ಸ್ಥಳೀಯವಾಗಿಯೇ ಡೇಟಾ ಸಂಗ್ರಹವಾಗಿದ್ದರೆ, ಅಪರಾಧ ತನಿಖೆಗಳ ಸಂದರ್ಭದಲ್ಲಿ ಅಧಿಕಾರಿಗಳು ಸುಲಭವಾಗಿ ಅವುಗಳನ್ನು ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕ್ಲೌಡ್ ಸ್ಟೋರೆಜ್ ನೀತಿಯಲ್ಲಿ ಸರ್ಕಾರ ಬದಲಾವಣೆಗೆ ಮುಂದಾಗಿದೆ.  

Follow Us:
Download App:
  • android
  • ios