ಫ್ರಾನ್ಸ್ ಹಿಂದಿಕ್ಕಿದ ಭಾರತ ವಿಶ್ವದ 6ನೇ ದೊಡ್ಡ ಅರ್ಥವ್ಯವಸ್ಥೆ
ಭಾರತ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಆರ್ಥಿಕ ಅಭಿವೃದ್ಧಿ ವಿಚಾರದಲ್ಲಿ ಫ್ರಾನ್ಸ್ ನ್ನು ಹಿಂದೆ ಹಾಕಿದ್ದು ವಿಶ್ವದ 6ನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ಹೊರ ಹೊಮ್ಮಿದೆ. ವಿವರ ಏನೇನು ಮುಂದೆ ಓದಿ...
ನವದೆಹಲಿ[ಜು.11] 2017ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ 2.597 ಟ್ರಿಲಿಯನ್ ಡಾಲರ್ ನಷ್ಟಾಗಿದ್ದು, 2.582 ಟ್ರಿಲಿಯನ್ ಜಿಡಿಪಿ ಹೊಂದಿರುವ ಫ್ರಾನ್ಸ್ ನ್ನು ಹಿಂದಿಕ್ಕುವ ಮೂಲಕ ವಿಶ್ವದ 6 ನೇ ಅತಿ ದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ವಿಶ್ವ ಬ್ಯಾಂಕ್ ನ ಈ ಅಂಕಿ ಅಂಶಗಳು ಇದನ್ನು ಪುಷ್ಠಿಕರೀಸಿವೆ. ಹಲವು ತ್ರೈಮಾಸಿಕಗಳಲ್ಲಿ ಕುಂಠಿತವಾಗಿದ್ದ ಭಾರತದ ಜಿಡಿಪಿ 2017 ರ ಜುಲೈ ನಂತರ ಚೇತರಿಕೆ ಕಂಡಿದ್ದು ಈ ಸಾಧನೆ ಮಾಡಲು ಕಾರಣವಾಗಿದೆ.
67 ಮಿಲಿಯನ್ ಜನಸಂಖ್ಯೆಯುಳ್ಳ ಫ್ರಾನ್ಸ್ ನ ಜಿಡಿಪಿ 2.582 ಟ್ರಿಲಿಯನ್ ಡಾಲರ್ ನಷ್ಟಿತ್ತು, ಭಾರತದ ತಲಾದಾಯಕ್ಕಿಂತ 20 ರಷ್ಟು ಹೆಚ್ಚಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಯುಎಸ್ ಮೊದಲನೇ ಸ್ಥಾನ ಪಡೆದುಕೊಂಡಿದ್ದರೆ ಚೀನಾ ಮತ್ತು ಜಪಾನ್ ಹಾಗೂ ಜರ್ಮನಿ ನಂತರದ ಸ್ಥಾನದಲ್ಲಿವೆ.ಇಂಟರ್ ನ್ಯಾಶನಲ್ ಮಾನಿಟರಿ ಫಂಡ್ ಹೇಳುವಂತೆ ಮುಂದಿನ 2018ರಲ್ಲಿ ಭಾರತದ ಜಿಡಿಪಿ ಶೇ.7.4ರಷ್ಟು ಏರಿಕೆ ಕಣಲಿದ್ದು 2019ರಲ್ಲಿ ಶೇ. 7.8ಕ್ಕೆ ತಲುಪಲಿದೆ ಎಂದು ಅಂದಾಜಿಸಿದೆ.