ಮೋದಿ 2.0 ಸರ್ಕಾರಕ್ಕೆ ಅಧಿಕೃತ ಚಾಲನೆ| ಅಧಿಕಾರ ಸ್ವೀಕರಿಸಿದ ಮರುಕ್ಷಣದಲ್ಲೇ ಮೋದಿಗೆ ಹೊಸ ಸವಾಲು| ಮೋದಿ 2.0 ಸರ್ಕಾರಕ್ಕೆ ಎದುರಾಯ್ತು ಮೊದಲ ಕಹಿ ಅನುಭವ| ಅತ್ಯಂತ ವೇಗವಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬ ಹಣೆಪಟ್ಟಿ ಕಳಚಿದ ಭಾರತ| ಒಂದುವರೆ ವರ್ಷದ ಬಳಿಕ ಮತ್ತೆ ಅಧಿಪತ್ಯ ಸಾಧಿಸಿದ ಚೀನಾ| ಜನೆವರಿ-ಮಾರ್ಚ್ ಅವಧಿಯಲ್ಲಿ ಕೇವಲ ಶೇ. 5.8ರಷ್ಟು ಜಡಿಪಿ ಬೆಳವಣಿಗೆ| ಇದೇ ಅವಧಿಯಲ್ಲಿ ಶೇ. 6.8ರಷ್ಟು ಜಿಡಿಪಿ ದಾಖಲಿಸಿದ ಚೀನಾ|

ನವದೆಹಲಿ(ಮೇ.31): ಇಡೀ ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯನ್ನು ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಿದೆ. ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ, ಮೋದಿ 2.0 ಸರ್ಕಾರಕ್ಕೆ ಅಧಿಕೃತ ಚಾಲನೆಯೂ ದೊರೆತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮಧ್ಯೆ ಹೊಸ ಸರ್ಕಾರಕ್ಕೆ ಮೊದಲ ಕಹಿ ಅನುಭವವೊಂದು ಎದುರಾಗಿದ್ದು, ಇಡೀ ವಿಶ್ವದಲ್ಲೇ ಅತ್ಯಂತ ವೇಗವಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬ ಪಟ್ಟವನ್ನು ಭಾರತ ಕಳೆದುಕೊಂಡಿದೆ.

ಕಳೆದ ಜನೆವರಿ-ಮಾರ್ಚ್ ಅವಧಿಯ ಜಡಿಪಿ ಬೆಳವಣಿಗೆ ಕುರಿತು ಕೇಂದ್ರ ಸರ್ಕಾರ ಅಂಕಿ ಅಂಶ ಪ್ರಕಟಿಸಿದ್ದು, ಈ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಕೇವಲ ಶೇ. 5.8ರಷ್ಟು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಕಳೇದ ಒಂದುವರೆ ವರ್ಷದಿಂದ ಇಡೀ ವಿಶ್ವದಲ್ಲೇ ಅತ್ಯಂತ ವೇಗವಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆದಿದ್ದ ಭಾರತ, ಇದೀಗ ಈ ಪಟ್ಟವನ್ನು ಚೀನಾಗೆ ಬಿಟ್ಟು ಕೊಟ್ಟಿದೆ.

ಇದೇ ಅವಧಿಯಲ್ಲಿ ಚೀನಾದ ಜಿಡಿಪಿ ಬೆಳವಣಿಗೆ ಶೇ. 6.8ರಷ್ಟು ದಾಖಲಾಗಿದ್ದು, ಒಂದುವರೆ ವರ್ಷದ ಬಳಿಕ ಇಡೀ ವಿಶ್ವದಲ್ಲೇ ಅತ್ಯಂತ ವೇಗವಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬ ಪಟ್ಟವನ್ನು ಚೀನಾ ಮರಳಿ ಪಡೆದಿದೆ.