ವಿಮಾನ ಪ್ರಯಾಣದ ದರ ಏರಿಕೆ ಬಿಸಿ ಜನರಿಗೆ ತಟ್ಟಿದೆ. ಮುಂಬೈ – ದೆಹಲಿ ವಿಮಾನ ಪ್ರಯಾಣದ ದರದಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡು ಬಂದಿದೆ. ಎಲ್ಲ ದೇಶಗಳೂ ದರ ಏರಿಕೆ ಮಾಡಿದ್ದು, ಭಾರತದ ಪಾಲೆಷ್ಟು ಗೊತ್ತಾ?
ಕೊರೊನಾ ನಂತ್ರ ಸಾಕಷ್ಟು ಬದಲಾವಣೆ ಆಗಿರೋದನ್ನು ನಾವು ನೋಡಬಹುದು. ಅನೇಕ ವಸ್ತುಗಳ ಬೆಲೆ ದುಬಾರಿಯಾಗಿದೆ. ಹಾಗೆ ವಿಮಾನ ಹಾರಾಟ ಕೂಡ ದುಬಾರಿಯಾಗಿದೆ. ಭಾರತ ಮಾತ್ರವಲ್ಲ ವಿಶ್ವದ ಅನೇಕ ದೇಶಗಳಲ್ಲಿ ವಿಮಾನ ಪ್ರಯಾಣ ದರದಲ್ಲಿ ಏರಿಕೆ ಕಂಡು ಬಂದಿದೆ. ಆದ್ರೆ ವಿಮಾನ ಟಿಕೆಟ್ ದರ ಏರಿಕೆ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.
ಅಧ್ಯಯನ (Study) ದಲ್ಲಿ ಹೇಳೋದೇನು? : ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ ಏಷ್ಯಾ-ಪೆಸಿಫಿಕ್ ಈ ಬಗ್ಗೆ ಅಧ್ಯಯನ ನಡೆಸಿದೆ. ಈ ಅಧ್ಯಯನದ ಪ್ರಕಾರ, ಭಾರತ (India) ದಲ್ಲಿ ವಿಮಾನ ದರಗಳು ಶೇಕಡಾ 41 ರಷ್ಟು ಹೆಚ್ಚಾಗಿದೆ. ಯುಎಇಯಲ್ಲಿ ಶೇಕಡಾ 34ರಷ್ಟು ವಿಮಾನ (Plane) ದರ ಏರಿಕೆಯಾದ್ರೆ ಸಿಂಗಾಪುರದಲ್ಲಿ ಶೇಕಡಾ 30ರಷ್ಟು ಏರಿಕೆ ಕಂಡು ಬಂದಿದೆ. ಇನ್ನು ಆಸ್ಟ್ರೇಲಿಯಾ ವಿಮಾನ ಪ್ರಯಾಣ ದರದಲ್ಲಿ ಶೇಕಡಾ 23ರಷ್ಟು ಹೆಚ್ಚಳ ಮಾಡಿದೆ.
Personal Finance : ಇಎಸ್ಐ ಕಾರ್ಡ್‌ನಿಂದ ಇದೆ ಇಷ್ಟು ಲಾಭ
2023ರ ಮೊದಲ ತ್ರೈಮಾಸಿಕದಲ್ಲಿ ಇಂಡೋನೇಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ, ಭಾರತ ಮತ್ತು ಜಪಾನ್ ಸೇರಿದಂತೆ ಅನೇಕ ದೇಶಗಳು ವಿಮಾನ ಪ್ರಯಾಣ ದರವನ್ನು ಏರಿಸಿವೆ. ಆದ್ರೆ ಅಂತರಾಷ್ಟ್ರೀಯ ಪ್ರಯಾಣ ದರದಲ್ಲಿ ಸ್ವಲ್ಪಮಟ್ಟಿಗೆ ಇಳಿಕೆ ಕೂಡ ಕಂಡು ಬಂದಿದೆ ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ. ಕೊರೊನಾ ಹಾಗೂ ಅದೇ ಸಮಯದಲ್ಲಿ ಕಡಿಮೆಯಾಗಿದ್ದ ಸ್ಪರ್ಧೆಯಿಂದಾಗಿ ನಷ್ಟವಾಗಿದೆ. ಈ ನಷ್ಟವನ್ನು ಸರಿದೂಗಿಸಿಕೊಳ್ಳಲು ವಿಮಾನ ಪ್ರಯಾಣ ದರದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಅಧ್ಯಯನ ಹೇಳಿದೆ. ಹೆಚ್ಚಿದ ಕಾರ್ಯಾಚರಣೆ, ಹೆಚ್ಚಾದ ಬಂಡವಾಳದ ವೆಚ್ಚದ ಮಧ್ಯೆಯೂ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ವಿಮಾನ ನಿಲ್ದಾಣಗಳು ಪ್ರಯತ್ನ ನಡೆಸುತ್ತಿವೆ ಎಂದು ಅಧ್ಯಯನದ ವರದಿ ಹೇಳಿದೆ. ಲ್ಯಾಂಡಿಂಗ್, ಪಾರ್ಕಿಂಗ್ ಮತ್ತು ಪ್ರಯಾಣಿಕರ ಶುಲ್ಕಗಳು ಸೇರಿದಂತೆ ವಿಮಾನ ನಿಲ್ದಾಣದ ಶುಲ್ಕಗಳನ್ನು ಆಗ ಕಡಿಮೆ ಮಾಡಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಸುಲಭ ನಿಯಮಗಳು : ಭಾರತೀಯ ವಿಮಾನಯಾನ ನಿಯಂತ್ರಕ ಡಿಜಿಸಿಎ, ಭಾರತದ ವಿಮಾನಗಳಿಗೆ ಅಂತಾರಾಷ್ಟ್ರೀಯ ಹಾರಾಟ ಆರಂಭಿಸಲು ನಿಯಮಗಳನ್ನು ಸಡಿಲಿಸಿದೆ. ಹಿಂದಿದ್ದ 33 ಪಾಯಿಂಟ್ ಗಳನ್ನು ಈಗ 10ಕ್ಕೆ ಇಳಿಕೆ ಮಾಡಿ, ಹಾರಾಟವನ್ನು ಸುಗಮಗೊಳಿಸಲಾಗಿದೆ.
Personal Finance: ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇಡ್ಬಹುದು ಗೊತ್ತಾ?
ರಾಜಕೀಯ ಕಿತ್ತಾಟ : ವಿಮಾನ ದರ ಏರಿಕೆಗೆ ಸಂಬಂಧಿಸಿದಂತೆ ರಾಜಕೀಯ ನಾಯಕರ ಮಧ್ಯೆ ವಾಗ್ವಾದ ಶುರುವಾಗಿದೆ. ಏರುತ್ತಿರುವ ವಿಮಾನ ದರವನ್ನು ಟೀಕಿಸಿದ್ದ ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್, ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಅದಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿರುಗೇಟು ನೀಡಿದ್ದಾರೆ. ಯುಪಿಎ ಸರ್ಕಾರ, ವಿಮಾನಯಾನ ಸಂಸ್ಥೆಗೆ ನೀಡಿದ್ದ ಮಲತಾಯಿ ಧೋರಣೆಯನ್ನು ಮರೆತು, ತಪ್ಪನ್ನು ಮುಚ್ಚಿಟ್ಟು ಮಾತನಾಡ್ತಿದೆ ಎಂದು ಸಿಂಧಿಯಾ ಟೀಕಿಸಿದ್ದಾರೆ.
ವೇಣುಗೋಪಾಲ್ ಹಾಗೂ ಸಿಂಧಿಯಾ ಮಧ್ಯೆ ಟ್ವೀಟರ್ ವಾಗ್ವಾದ ನಡೆಯುತ್ತಿದೆ. ವೇಣುಗೋಪಾಲ್, ವಿಮಾನಯಾನ ಸಂಸ್ಥೆಗಳು ಪರಭಕ್ಷಕ ವ್ಯವಹಾರ ಮಾಡ್ತಿದ್ದರೂ ಅದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ಲೂಟಿಗೆ ಅವಕಾಶ ಮಾಡಿಕೊಡ್ತಿದೆ ಎಂದು ವೇಣುಗೋಪಾಲ್ ಟೀಕಿಸಿದ್ದರು.
ಮಧ್ಯಮ ವರ್ಗದ ಕಠೋರ ಸಂಗತಿಗಳು ಮತ್ತು ದೈನಂದಿನ ನೋವನ್ನು ಅಂಕಿಅಂಶದಲ್ಲಿ ತಿರುಚಲಾಗುವುದು. ನೈಜ ಸಂಗತಿಗಳನ್ನು ತಪ್ಪಾಗಿ ನಿರೂಪಿಸುವ ಸಾಧ್ಯತೆ ಹೆಚ್ಚು ಎಂದು ವೇಣುಗೋಪಾಲ್ ಹೇಳಿದ್ದರು. ಇದಕ್ಕೆ ಸಿಂಧಿಯಾ ಪ್ರತ್ಯಾರೋಪ ಮಾಡಿದ್ದಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಸತ್ಯ ಮುಚ್ಚಿಡುವ ಕೆಲಸವನ್ನು ಅವರು ಮುಂದುವರೆಸಿದ್ದಾರೆಂದು ಸಿಂಧಿಯಾ ಹೇಳಿದ್ದಾರೆ.
ವಿಮಾನ ದರ ಏರಿಕೆಗೆ ಕಾರಣ : ವಿಮಾನ ದರ ಹೆಚ್ಚಳಕ್ಕೆ ಮುಖ್ಯ ಕಾರಣ ಇಂಧನ ಬೆಲೆಗಳು ಮತ್ತು ಹಣದುಬ್ಬರ ಕಾರಣವಾಗಿದೆ. 2019 ಕ್ಕೆ ಹೋಲಿಸಿದರೆ, 2022 ರಲ್ಲಿ ಇಂಧನ ಬೆಲೆಗಳು ಶೇಕಡಾ 76 ರಷ್ಟು ಹೆಚ್ಚಾಗಿದೆ.
