ಗುಜರಾತ್‌ನಲ್ಲಿ ದೇಶಿ ವಿಮಾನ ಘಟಕ..? ಎಂಬ್ರೇಯರ್‌, ಸುಖೋಯ್‌ ವಿಮಾನ ಕಂಪನಿಗಳ ಜತೆ ಮಾತುಕತೆ

ಗುಜರಾತ್‌ನಲ್ಲಿ ಮೇಡ್‌ ಇನ್‌ ಇಂಡಿಯಾ ವಿಮಾನ ಘಟಕ ಆರಂಭವಾಗಲಿದ್ದು, ಈ ಸಂಬಂಧ ಎಂಬ್ರೇಯರ್‌, ಸುಖೋಯ್‌ ವಿಮಾನ ಕಂಪನಿಗಳ ಜತೆ ಮಾತುಕತೆ ನಡೆಯುತ್ತಿದೆ. 100ಕ್ಕಿಂತ ಕಡಿಮೆ ಆಸನ ಸಾಮರ್ಥ್ಯದ ವಿಮಾನ ಉತ್ಪಾದನೆಗೆ ಒಲವು ವ್ಯಕ್ತವಾಗಿದೆ. ಸ್ವದೇಶಿ ವಿಮಾನ ದೂರವಿಲ್ಲ ಎಂದು ಮೋದಿ ಶಿವಮೊಗ್ಗದಲ್ಲಿ ಹೇಳಿದ್ದರು. 

india in talks with embraer sukhoi to make small planes locally ash

ನವದೆಹಲಿ (ಮಾರ್ಚ್‌ 6, 2023): ಭಾರತದಲ್ಲೇ ನಿರ್ಮಾಣವಾದ ವಿಮಾನದಲ್ಲಿ ಭಾರತೀಯರು ಓಡಾಡುವ ದಿನ ದೂರವಿಲ್ಲ ಎಂದು ಕಳೆದ ವಾರ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಲ್ಲೇ, ‘ಮೇಡ್‌ ಇನ್‌ ಇಂಡಿಯಾ’ ವಿಮಾನ ಉತ್ಪಾದನೆಗೆ ಕೇಂದ್ರ ಸರ್ಕಾರ ಕಸರತ್ತು ಆರಂಭಿಸಿದೆ. ಇದರ ಫಲವಾಗಿ, ದೇಶದ ಮೊದಲ ಸಣ್ಣ ಪ್ರಯಾಣಿಕ ವಿಮಾನಗಳ ಉತ್ಪಾದನೆ ಘಟಕ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ತಲೆ ಎತ್ತುವ ಸಾಧ್ಯತೆ ಇದೆ.

ಈ ಸಂಬಂಧ ಜಾಗತಿಕ ವಿಮಾನ ಉತ್ಪಾದನಾ ಕಂಪನಿಗಳಾದ ಬ್ರೆಜಿಲ್‌ನ (Brazil) ಎಂಬ್ರೇಯರ್‌ (Embraer) ಹಾಗೂ ರಷ್ಯಾದ (Russia) ಸುಖೋಯ್‌ (Sukhoi) ಸೇರಿದಂತೆ ಹಲವು ಕಂಪನಿಗಳ ಜತೆ ಸರ್ಕಾರ (Government) ಮಾತುಕತೆಯಲ್ಲಿ ನಿರತವಾಗಿದೆ. ದೇಶದ ಸಣ್ಣ ಪಟ್ಟಣಗಳು ಹಾಗೂ ದೂರದ ಸ್ಥಳಗಳಿಗೆ ವಿಮಾನ ಸಂಪರ್ಕ (Flight Connectivity) ಕಲ್ಪಿಸುವ ಉದ್ದೇಶದಿಂದ ಸಣ್ಣ ವಿಮಾನಗಳನ್ನು (Small Flights) ದೇಶೀಯವಾಗಿ ಉತ್ಪಾದಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ.

ಇದನ್ನು ಓದಿ: ಮಲೆನಾಡು ಹಾಡಿ ಹೊಗಳಿದ ಮೋದಿ: ಡಬಲ್‌ ಎಂಜಿನ್‌ ಸರ್ಕಾರದಿಂದ ರಾಜ್ಯ ಅಭಿವೃದ್ಧಿ ಪಥದಲ್ಲಿದೆ ಎಂದ ಪ್ರಧಾನಿ

ಎಂಬ್ರೇಯರ್‌ ಜತೆ ಈಗಾಗಲೇ ಪ್ರಾಥಮಿಕ ಹಂತದ ಮಾತುಕತೆಯನ್ನು ಸರ್ಕಾರ ಪೂರ್ಣಗೊಳಿಸಿದೆ. ಭಾರತದಲ್ಲಿ ಪ್ರಾದೇಶಿಕ ವಿಮಾನಗಳ ತಯಾರಿಕಾ ಘಟಕ ತೆರೆಯಲು ರಷ್ಯಾದ ಸುಖೋಯ್‌ ಕೂಡ ಆಸಕ್ತಿ ವ್ಯಕ್ತಪಡಿಸಿದೆ. ಇದಲ್ಲದೆ ಏರ್‌ಬಸ್‌ ಹಾಗೂ ಇಟಲಿಯ ಲಿಯೋನಾರ್ಡೋ ಸ್ಪಾ ಕಂಪನಿಯ ಜಂಟಿ ಸಹಭಾಗಿತ್ವದ ‘ಎಟಿಆರ್‌’ ಅನ್ನೂ ಭಾರತ ಸಂಪರ್ಕಿಸಿದೆ ಎಂದು ಈ ಮಾತುಕತೆಯಲ್ಲಿ ತೊಡಗಿರುವ ವ್ಯಕ್ತಿಗಳು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವೇ ಶೇ. 51ರಷ್ಟು ಪಾಲು ಹೊಂದಿರುವ ಭಾರತೀಯ ಕಂಪನಿಗೆ ವಿದೇಶಿ ವಿಮಾನ ಉತ್ಪಾದಕ ಸಂಸ್ಥೆಗಳು ತಂತ್ರಜ್ಞಾನ ವರ್ಗಾವಣೆ ಮಾಡುವ ಯೋಜನೆ ಇದಾಗಿದೆ. 100ಕ್ಕಿಂತ ಕಡಿಮೆ ಪ್ರಯಾಣ ಸಾಮರ್ಥ್ಯದ ವಿಮಾನ ಘಟಕ ಸ್ಥಾಪಿಸುವ ಯೋಜನೆ ಇದ್ದು, ಇಂತಹ ಘಟಕ ಗುಜರಾತ್‌ನಲ್ಲಿ ನಿರ್ಮಾಣವಾಗುವ ಸಂಭವವಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮೇಡ್‌ ಇನ್‌ ಇಂಡಿಯಾ ವಿಮಾನ ಶೀಘ್ರ, ಹವಾಯಿ ಚಪ್ಪಲಿ ಹಾಕಿದವರೂ ಈಗ ವಿಮಾನದಲ್ಲಿ ಓಡಾಟ, ಮೋದಿ

ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಬೋಯಿಂಗ್‌ ಹಾಗೂ ಏರ್‌ಬಸ್‌ನಂತಹ ಸಣ್ಣ ವಿಮಾನಗಳನ್ನು ಇಳಿಸಲು ಆಗುವುದಿಲ್ಲ. ಹೀಗಾಗಿ ಪ್ರವಾಸೋದ್ಯಮ ಉತ್ತೇಜನ ಹಾಗೂ ಸೂಕ್ಷ್ಮ ಪ್ರದೇಶಗಳಿಗೆ ಬೇಗನೆ ತಲುಪುವುದಕ್ಕೆ ಅನುಕೂಲವಾಗುವಂತೆ ಮಾಡಲು ಸಣ್ಣ ವಿಮಾನಗಳ ಸೇವೆಗೆ ಭಾರತ ಉತ್ತೇಜನ ನೀಡುತ್ತಿದೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios