ನವ​ದೆ​ಹ​ಲಿ(ಜೂ.01): ಮಹಾ​ಮಾರಿ ಕೊರೋನಾ ವೈರ​ಸ್‌ನ 2ನೇ ಅಲೆ​ಯಿಂದಾಗಿ ದೇಶಾ​ದ್ಯಂತ ಸೆಮಿ ಲಾಕ್‌​ಡೌನ್‌, ನಿಷೇ​ಧಾಜ್ಞೆ ಹಾಗೂ ಕಫä್ರ್ಯ ಜಾರಿ ಹೊರ​ತಾ​ಗಿಯೂ, 2022ನೇ ಸಾಲಿನ ಹಣ​ಕಾಸು ವರ್ಷ​ದಲ್ಲಿ ವಿಶ್ವ​ದ ಇತರೆ ರಾಷ್ಟ್ರ​ಗ​ಳಿ​ಗಿಂತಲೂ ಭಾರ​ತದ ಆರ್ಥಿ​ಕ​ತೆಯು ವೇಗ​ವಾಗಿ ಅಭಿ​ವೃ​ದ್ಧಿ​ ಪ​ಥ​ದಲ್ಲಿ ಸಾಗ​ಲಿದೆ ಎಂದು ಅಂದಾ​ಜಿ​ಸ​ಲಾ​ಗಿದೆ.

ಜಿಡಿಪಿ 7.3ರಷ್ಟುಕುಸಿತ: 4 ದಶಕದ ಕನಿಷ್ಠ!

2021-22ನೇ ಸಾಲಿ​ನ ಹಣ​ಕಾಸು ವರ್ಷ​ದಲ್ಲಿ ಭಾರ​ತದ ಆರ್ಥಿ​ಕ​ತೆಯು ಶೇ.10ರಷ್ಟು ವೃದ್ಧಿ​ಯಾ​ಗುವ ಪಥ​ದ​ಲ್ಲಿದೆ. ಬ್ಲೂಮ್‌​ಬ​ರ್ಗ್‌ ನ್ಯೂಸ್‌ ಸಂಗ್ರ​ಹಿ​ಸಿದ 12 ಮಾಧ್ಯ​ಮ​ಗಳ ವರ​ದಿಯ ಸರಾ​ಸ​ರಿಯ ಅಂದಾ​ಜು​ಗ​ಳಿಂದ ಗೊತ್ತಾ​ಗಿದೆ.

ಏಷ್ಯಾ ಶ್ರೀಮಂತ ವ್ಯಕ್ತಿ ಪಟ್ಟಿ ಬಿಡುಗಡೆ; ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟ ಗೌತಮ್ ಅದಾನಿ!

ಆದಾಗ್ಯೂ, ಭಾರ​ತದ ಆರ್ಥಿ​ಕ​ತೆಯ ಸುಧಾ​ರಣೆ ಮತ್ತು ವಾರ್ಷಿಕ ಅಭಿ​ವೃದ್ಧಿ ದರವು ಬೇಡಿಕೆ ಮತ್ತು ಕೊರೋನಾ ನಿಯಂತ್ರ​ಣ​ಕ್ಕಾಗಿ ಹೇರ​ಲಾದ ಲಾಕ್‌​ಡೌನ್‌ಗಳನ್ನು ಅವ​ಲಂಬಿಸಿದೆ. ಕೊರೋನಾ ವೈರ​ಸ್‌ನ 2ನೇ ಅಲೆಯ ನಿಯಂತ್ರ​ಣ​ಕ್ಕಾಗಿ ಸ್ಥಳೀಯ ಮಟ್ಟದ ಲಾಕ್‌​ಡೌನ್‌, ಕಂಟೈ​ನ್‌​ಮೆಂಟ್‌, ನಿಷೇ​ಧಾ​ಜ್ಞೆಗೆ ಹೆಚ್ಚು ಒತ್ತು​ ನೀಡ​ಲಾ​ಗಿತ್ತು. ಇದ​ರಿಂದಾಗಿ ಆರ್ಥಿ​ಕ​ತೆಯ ಮೇಲೆ 2ನೇ ಅಲೆಯ ಪರಿ​ಣಾಮ ಅಷ್ಟಾಗಿ ಆಗ​ಲಿಲ್ಲ ಎನ್ನ​ಲಾ​ಗಿದೆ.