ಯಾರಿಂದ ಹೆಚ್ಚಾಯ್ತು ಭಾರತದ ಸಾಲ..? ಮೋದಿ ಸರ್ಕಾರ ಮಾಡಿದ್ದೆಷ್ಟು, ಮನಮೋಹನ್ ಸಿಂಗ್ ಮಾಡಿದ ಸಾಲವೆಷ್ಟು?

ಭಾರತದ ಬಳಿಯಲ್ಲೇ ಇರುವ ಪುಟ್ಟ ರಾಷ್ಟ್ರ ವಿದೇಶಿ ಸಾಲದ ಸುಳಿಗೆ ಸಿಲುಕಿಕೊಂಡು ನರಳಾಡುತ್ತಿರುವುದು ಗೊತ್ತೇ ಇದೆ. ಶ್ರೀಲಂಕಾ ದಿವಾಳಿಯಾದ ಬೆನ್ನಲ್ಲಿಯೇ ಭಾರತದ ವಿದೇಶಿ ಸಾಲದ ಬಗ್ಗೆಯೋ ದೊಡ್ಡ ಮಟ್ಟದ ಚರ್ಚೆ ಆಗುತ್ತಿದೆ. ಭಾರತಕ್ಕೆ ಪ್ರಸ್ತುತ ಬರೋಬ್ಬಿ 49 ಲಕ್ಷ ಕೋಟಿ ವಿದೇಶಿ ಸಾಲವಿದೆ.
 

India debt explainer Who increased it How much debt made Modi government and previous Manmohan Singh government san

ನವದೆಹಲಿ (ಜುಲೈ 20): ಸಾಲದ ಸುಳಿಗೆ ಸಿಲುಕಿ ಶ್ರೀಲಂಕಾ ದಿವಾಳಿಯಾದ ಮೇಲೆ ಭಾರತ ಮಾಡಿರೋ ವಿದೇಶಿ ಸಾಲದ ಬಗ್ಗೆಯೂ ಚರ್ಚೆಯಾಗುತ್ತಿದೆ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದ ಸಾಲ ಹೆಚ್ಚಾಗಿದೆ ಅನ್ನೋ ಟೀಕೆಯನ್ನ ವಿರೋಧ ಪಕ್ಷಗಳು ಮಾಡುತ್ತಿವೆ. ಸದ್ಯಕ್ಕೆ ಭಾರತ 620 ಬಿಲಿಯನ್ ಡಾಲರ್ ಅಂದ್ರೆ 49 ಲಕ್ಷ ಕೋಟಿಯಷ್ಟು ವಿದೇಶಿ ಸಾಲ ಹೊಂದಿದೆ. ಈ ಎಂಟು ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿದ ಸಾಲ ಎಷ್ಟು..? 10 ವರ್ಷ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಮಾಡಿದ ಸಾಲ ಎಷ್ಟು..? ಅದಕ್ಕೂ ಮೊದಲು ವಾಜಪೇಯಿ ಸರ್ಕಾರದ ಅವಧಿಯಲ್ಲಿದ್ದ ಸಾಲ ಎಷ್ಟು..? 2004 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಅವಧಿ ಮುಗಿದಾಗ ಭಾರತದ ಒಟ್ಟು ವಿದೇಶಿ ಸಾಲ 5 ಲಕ್ಷ ಕೋಟಿ ರೂಪಾಯಿ ಇತ್ತು. 2004ರ ಚುನಾವಣೆಯ ನಂತರ ಕಾಂಗ್ರೆಸ್ ನ ಮನಮೋಹನ್ ಸಿಂಗ್ ಪ್ರಧಾನಿಯಾದಾಗ  5 ಲಕ್ಷ ಕೋಟಿಯಿದ್ದ ಭಾರತದ ವಿದೇಶಿ ಸಾಲ ಮನಮೋಹನ್ ಸಿಂಗ್ ಅವರ ಮೊದಲ ಅವಧಿ ಮುಗಿಯುವಷ್ಟರಲ್ಲಿ ದುಪ್ಪಟ್ಟಾಗಿತ್ತು. 2009ರಲ್ಲಿ ಭಾರತದ ಸಾಲ 10.08 ಲಕ್ಷ ಕೋಟಿಗೆ ತಲುಪಿತ್ತು. ಅಂದ್ರೆ 2004ರಲ್ಲಿ 5 ಲಕ್ಷ ಕೋಟಿಯಿದ್ದ ದೇಶದ ಒಟ್ಟು ವಿದೇಶಿ ಸಾಲ 2009ರ ಹೊತ್ತಿಗೆ 10 ಲಕ್ಷ ಕೋಟಿ ದಾಟಿತ್ತು. ಅಂದ್ರೆ ಕೇವಲ 5 ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 5 ಲಕ್ಷ ಕೋಟಿ ಸಾಲ ಮಾಡಿತ್ತು.


ಹತ್ತು ವರ್ಷಗಳಲ್ಲಿ 21.7 ಲಕ್ಷ ಕೋಟಿ ಸಾಲ ಮಾಡಿದ ಎಂಎಂಎಸ್: 2009ರ ಚುನಾವಣೆಯ ನಂತರ ಮನಮೋಹನ್ ಸಿಂಗ್ (Manmohan singh) ಮತ್ತೊಮ್ಮೆ ದೇಶದ ಪ್ರಧಾನಿಯಾದರು. 2014ರಲ್ಲಿ ಭಾರತದ ಒಟ್ಟು ವಿದೇಶಿ ಸಾಲ 26.7 ಲಕ್ಷ ಕೋಟಿ ಮುಟ್ಟಿತ್ತು. ಅಂದ್ರೆ 2009ರಿಂದ 2014ರವರೆಗೆ 5 ವರ್ಷಗಳಲ್ಲಿ ಮನಮೋಹನ್ ಸಿಂಗ್ ಸರ್ಕಾರ 16.7 ಲಕ್ಷ ಕೋಟಿ ಸಾಲ ಮಾಡಿತ್ತು. ಅಟಲ್ ಬಿಹಾರಿ ವಾಜಪೇಯಿ (atal bihari vajpayee) ಸರ್ಕಾರದ ಅವಧಿ ಅಂತ್ಯವಾದಾಗ ದೇಶದ ವಿದೇಶಿ ಸಾಲ 5 ಲಕ್ಷ ಕೋಟಿಯಿದ್ರೆ, ಮನಮೋಹನ್ ಸಿಂಗ್ ಸರ್ಕಾರದ ಅವಧಿ ಮುಗಿಯುವುದರೊಳಗೆ 26.7 ಲಕ್ಷ ಕೋಟಿ ತಲುಪಿತ್ತು. ಈ ಸಾಲದ ಪ್ರಮಾಣ ನಮ್ಮ ಒಟ್ಟಾರೆ ಜಿಡಿಪಿಯ ಶೇ.24 ರಷ್ಟಿತ್ತು. ಹತ್ತು ವರ್ಷಗಳಲ್ಲಿ ಪ್ರಧಾನಿ ಮನಮೋಹನ್ ಸಿಂಗ್  ಸರ್ಕಾರ ಮಾಡಿದ ಸಾಲವೇ ಬರೊಬ್ಬರಿ 21.7 ಲಕ್ಷ ಕೋಟಿ!

8 ವರ್ಷಗಳಲ್ಲಿ ನಮೋ ಸರ್ಕಾರದಿಂದ 22.3 ಲಕ್ಷ ಕೋಟಿ ಸಾಲ: 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ (Narendra Modi) ಪ್ರಧಾನಿಯಾಗಿ ಆಯ್ಕೆಯಾದರು. 2014ರಲ್ಲಿ 26.7 ಲಕ್ಷ ಕೋಟಿಯಿದ್ದ ಭಾರತದ ವಿದೇಶಿ ಸಾಲ 2019ರ ಹೊತ್ತಿಗೆ 37.46 ಲಕ್ಷ ಕೋಟಿಗೆ ಮುಟ್ಟಿತ್ತು. ಐದು ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರ ಮಾಡಿದ ಒಟ್ಟು ವಿದೇಶಿ ಸಾಲ 10.76 ಲಕ್ಷ ಕೋಟಿ.  ಮೋದಿ 2019ರಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ 3 ವರ್ಷಗಳಾಗಿವೆ. ಈಗಿನ ಭಾರತದ ವಿದೇಶಿ ಸಾಲ 49 ಲಕ್ಷ ಕೋಟಿಗೆ ತಲುಪಿದೆ.

ಪೆಟ್ರೋಲ್, ಡೀಸೆಲ್ ರಫ್ತಿನ ಮೇಲೆ ವಿಂಡ್ ಫಾಲ್ ತೆರಿಗೆ ಕಡಿತಗೊಳಿಸಿದ ಕೇಂದ್ರ ಸರ್ಕಾರ, ಕಾರಣವೇನು?

ದೇಶದ ಒಟ್ಟಾರೆ ಜಿಡಿಪಿಯಲ್ಲಿ ವಿದೇಶಿ ಸಾಲದ ಪ್ರಮಾಣ ಶೇ.20ರಷ್ಟಿದೆ. ಅಂದ್ರೆ ಕಳೆದ ಮೂರು ವರ್ಷಗಳಲ್ಲಿ ಭಾರತದ ವಿದೇಶಿ ಸಾಲ 11.54 ಲಕ್ಷ ಕೋಟಿ ಹೆಚ್ಚಳವಾಗಿದೆ. 2014ರಲ್ಲಿ ಮನಮೋಹನ್ ಸಿಂಗ್ ಸರ್ಕಾರದ ಅವಧಿ ಮುಗಿದಾಗ 26.7 ಲಕ್ಷ ಕೋಟಿಯಿದ್ದ ಸಾಲ ಮೋದಿ ಸರ್ಕಾರದ 8 ವರ್ಷಗಳಲ್ಲಿ 49 ಲಕ್ಷ ಕೋಟಿಗೆ ಬಂದು ಮುಟ್ಟಿದೆ. ಅಂದ್ರೆ ಮೋದಿ ಸರ್ಕಾರ 8 ವರ್ಷಗಳಲ್ಲಿ 22.3 ಲಕ್ಷ ಕೋಟಿ ಸಾಲ ಮಾಡಿದೆ.

ದುಡ್ಡೇ ದೊಡ್ಡಪ್ಪ..! ಒಂದೂವರೆ ಲಕ್ಷಕ್ಕೆ Instagram ಖಾತೆಗೆ ಬ್ಲ್ಯೂಟಿಕ್‌, 10 ಸಾವಿರ ರೂಪಾಯಿಗೆ 10 ಲಕ್ಷ ವೀವ್ಸ್‌!

ಮೋದಿ ಸರ್ಕಾರದ ಅವಧಿಯ ವಿದೇಶಿ ಸಾಲ ಶೇ.20: ಹತ್ತು ವರ್ಷ ಕಾಲ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಸರ್ಕಾರ 21.7 ಲಕ್ಷ ಕೋಟಿಯಷ್ಟು ಸಾಲ ಮಾಡಿದರೆ. 8 ವರ್ಷಗಳಿಂದ ಅಧಿಕಾರದಲ್ಲಿರೋ ಮೋದಿ ಸರ್ಕಾರ 22.3 ಲಕ್ಷ ಕೋಟಿ ಸಾಲ ಮಾಡಿದೆ. ಮನಮೋಹನ್ ಸಿಂಗ್ ಸರ್ಕಾರದ ಅವಧಿ ಮುಗಿದಾಗ ಒಟ್ಟು ಜಿಡಿಪಿಯಲ್ಲಿ ವಿದೇಶಿ ಸಾಲದ ಪ್ರಮಾಣ ಶೇ.24 ರಷ್ಟಿದ್ರೆ, ಮೋದಿ ಸರ್ಕಾರದ ಈ ಅವಧಿಯಲ್ಲಿ ವಿದೇಶಿ ಸಾಲ ಜಿಡಿಪಿಯ ಶೇ.20ರಷ್ಟಿದೆ.
 

Latest Videos
Follow Us:
Download App:
  • android
  • ios