ಇದೇ ದೇಶ ಕಟ್ಟೋದು ಅಂದ್ರೆ: ಐಟಿಆರ್ ಸಲ್ಲಿಕೆ ದ್ವಿಗುಣ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Aug 2018, 4:03 PM IST
Income Tax Return Filings Double to 3 Crore, Refund up by 81 per cent
Highlights

ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ ದ್ವಿಗುಣ!  ಒಟ್ಟು 3.7 ಕೋಟಿ ಆದಾಯ ತೆರಿಗೆ ಸಲ್ಲಿಕೆ!  ಕಳೆದ ಬಾರಿಗಿಂತ ದುಪ್ಪಟ್ಟು ಐಟಿಆರ್ ಸಲ್ಲಿಕೆ!  ವೇಗ ಪಡೆದುಕೊಂಡ ರಿಫಂಡ್ ಪ್ರಕ್ರಿಯೆ!  !ಜನತೆಗೆ ಹರ್ಷ ತಂದ ಗಡುವು ವಿಸ್ತರಣೆ

 

ನವದೆಹಲಿ(ಆ.1): ಕೇಂದ್ರ ಸರ್ಕಾರ ಆದಾಯ ತೆರಿಗೆ ನಿಯಮದಲ್ಲಿ ಭಾರೀ ಬದಲಾವಣೆ ತಂದಿದೆ. ಜೊತೆಗೆ ಆದಾಯ ತೆರಿಗೆ ಸಲ್ಲಿಕೆಗೆ ನಿಗದಿ ಮಾಡಲಾಗಿದ್ದ ಗಡುವನ್ನೂ ವಿಸ್ತರಿಸಿದೆ. ಇದರಿಂದ ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ ದ್ವಿಗುಣಗೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಚುರುಕುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಜನರು ಭಾರೀ ಪ್ರಮಾಣದಲ್ಲಿ ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆಯಲ್ಲಿ ಕೈ ಜೋಡಿಸಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಅಧಿಕ ಜನ ಈ ಬಾರಿ ಐಟಿಆರ್ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಬಾರಿ ಒಟ್ಟು 3.7 ಕೋಟಿ ಜನ ಐಟಿಆರ್ ಸಲ್ಲಿಸಿದ್ದಾರೆ.

ಇದೇ ವೇಳೆ ತೆರಿಗೆ ರಿಫಂಡ್ ಪ್ರಮಾಣ ಕೂಡ ಹೆಚ್ಚಾಗಿದ್ದು, ಆನ್ ಲೈನ್ ಮೂಲಕ ಸಲ್ಲಿಕೆಯಾಗಿರುವ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಈಗಾಗಲೇ ಶೇ. 60 ರಷ್ಟು ರಿಫಂಡ್ ಪ್ರಕ್ರಿಯೆ ಪ್ರಾರಂಭವಾಗಿದೆ.

ರಿಫಂಡ್ ನಲ್ಲಿ ಯಾವುದೇ ವಿಳಂಬವಾಗದಂತೆ ಈಗಾಗಲೇ ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆ ನೀಡಿದ್ದು, ಅದರಂತೆ ಐಟಿಆರ್ ಸಲ್ಲಿಕೆಯ ಪ್ರಕ್ರಿಯೆ ಆರಂಭವಾಗಿರುವಾಗಲೇ ರಿಫಂಡ್ ಪ್ರಕ್ರಿಯೆ ಕೂಡ ಶುರುವಾಗಿದೆ. ಇನ್ನು ಈ ಬಾರಿ ಒಟ್ಟು 3.7 ಆದಾಯ ತೆರಿಗೆ ಸಲ್ಲಿಕೆಯಾಗಿದ್ದು, ಕಳೆದ ವರ್ಷ ಅಂದರೆ ಜುಲೈ 26, 2017ರಲ್ಲಿ ಕೇವಲ 1.7 ಕೋಟಿ ಆದಾಯ ತೆರಿಗೆ ಸಲ್ಲಿಕೆಯಾಗಿತ್ತು.

loader