*1.97 ಕೋಟಿ ತೆರಿಗೆದಾರರಿಗೆ ಸಿಕ್ಕಿದೆ ತೆರಿಗೆ ರೀಫಂಡ್ *ಟ್ವೀಟ್ ಮೂಲಕ ಆದಾಯ ತೆರಿಗೆ ಇಲಾಖೆ ಮಾಹಿತಿ* 53,158 ಕೋಟಿ ರೂ. ಕಾರ್ಪೋರೇಟ್ ತೆರಿಗೆ ರೀಫಂಡ್
Business Desk:ಈ ವರ್ಷದ ಹಣಕಾಸು ಸಾಲಿನ ಪ್ರಾರಂಭದ ಐದು ತಿಂಗಳಲ್ಲಿ ಸುಮಾರು 1.97 ಕೋಟಿ ತೆರಿಗೆದಾರರು ಆದಾಯ ತೆರಿಗೆ ಇಲಾಖೆಯಿಂದ ಒಟ್ಟು 1.14ಲಕ್ಷ ಕೋಟಿ ರೂ. ತೆರಿಗೆ ಮರುಪಾವತಿ (ರೀಫಂಡ್) ಪಡೆದಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಟ್ವೀಟ್ ಮೂಲಕ ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ. ' 1.97 ಕೋಟಿಗೂ ಅಧಿಕ ತೆರಿಗೆದಾರರಿಗೆ ಸಿಬಿಡಿಟಿ 1.14ಲಕ್ಷ ಕೋಟಿ ರೂ.ಕ್ಕಿಂತಲೂ ಹೆಚ್ಚಿನ ತೆರಿಗೆಯನ್ನು 2022ರ ಏಪ್ರಿಲ್ 1 ಹಾಗೂ 2022ರ ಆಗಸ್ಟ್ 31ರ ನಡುವೆ ಮರುಪಾವತಿಸಿದೆ. 1,96,00,998 ಪ್ರಕರಣಗಳಲ್ಲಿ 61,252ಕೋಟಿ ರೂ. ಆದಾಯ ತೆರಿಗೆ ರೀಫಂಡ್ ಮಾಡಲಾಗಿದೆ. ಇನ್ನು 1,46,871 ಪ್ರಕರಣಗಳಲ್ಲಿ 53,158 ಕೋಟಿ ರೂ. ಕಾರ್ಪೋರೇಟ್ ತೆರಿಗೆ ರೀಫಂಡ್ ಮಾಡಲಾಗಿದೆ. ಒಂದು ವೇಳೆ ನೀವು ಈ ಆರ್ಥಿಕ ಸಾಲಿನಲ್ಲಿ ನಿಮ್ಮ ವಾರ್ಷಿಕ ಆದಾಯದ ಮೇಲೆ ವಿಧಿಸಲ್ಪಡೋ ತೆರಿಗೆಗಿಂತ ಹೆಚ್ಚಿನ ಮೊತ್ತದ ತೆರಿಗೆಯನ್ನು ಪಾವತಿಸಿದ್ರೆ ಆದಾಯ ತರಿಗೆ ರಿಟರ್ನ್ (ITR) ಸಲ್ಲಿಕೆ ಮಾಡಿದ ಬಳಿಕ ಆದಾಯ ತೆರಿಗೆ ಮರುಪಾವತಿಯನ್ನು (Refund) ಪಡೆಯಲು ಅರ್ಹರಾಗುತ್ತೀರಿ. ಈ ಬಗ್ಗೆ ನಿಮಗೆ ಆದಾಯ ತೆರಿಗೆ ಕಾಯ್ದೆ (Income Tax Act) 1961ರ ಸೆಕ್ಷನ್ 143 (1) ಅಡಿಯಲ್ಲಿ ನೋಟಿಸ್ (Notice) ಕಳುಹಿಸಲಾಗುತ್ತದೆ. ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಡೆಸುತ್ತದೆ ಹಾಗೂ ಈ ಹಣ ತೆರಿಗೆದಾರರು ಐಟಿಆರ್ ನಲ್ಲಿ ನಮೂದಿಸಿರೋ ಬ್ಯಾಂಕ್ (Bank) ಖಾತೆಗೆ (Account) ಜಮಾ ಮಾಡಲಾಗುತ್ತದೆ.
ಆದಾಯ ತೆರಿಗೆ ಮರುಪಾವತಿ ಸ್ಟೇಟಸ್ ಚೆಕ್ ಮಾಡೋದು ಹೇಗೆ?
ನೀವು ಐಟಿಆರ್ ಸಲ್ಲಿಕೆ ಮಾಡಿದ್ರೆ ಆದಾಯ ತೆರಿಗೆ ಮರುಪಾವತಿ ಸ್ಟೇಟಸ್ ಅನ್ನು ಹೊಸ ಆದಾಯ ತೆರಿಗೆ ಪೋರ್ಟಲ್ (new income tax portal) ಅಥವಾ ಎನ್ ಎಸ್ ಡಿಎಲ್ (NSDL) ವೆಬ್ ಸೈಟ್ ಮೂಲಕ ಪರಿಶೀಲಿಸಬಹುದು.
ಮುಂದಿನ 10 ವರ್ಷಗಳಲ್ಲಿ ಇಂಟರ್ನೆಟ್ ಕಂಪನಿಗಳಿಂದ ಭಾರತದ ಸಂಪತ್ತಿನಲ್ಲಿ ಭಾರೀ ಹೆಚ್ಚಳ?
ಆದಾಯ ತೆರಿಗೆ ಪೋರ್ಟಲ್ ನಲ್ಲಿ ಪರಿಶೀಲಿಸೋದು ಹೇಗೆ?
ಹಂತ 1: www.incometax.gov.in ಭೇಟಿ ನೀಡಿ. ನಿಮ್ಮ ಪ್ಯಾನ್ (PAN ) ಸಂಖ್ಯೆ ಹಾಗೂ ಪಾಸ್ ವರ್ಡ್ ( password)ಬಳಸಿ ನಿಮ್ಮ ಖಾತೆಗೆ ಲಾಗಿ ಇನ್ ಆಗಿ.
ಹಂತ 2: e-file ಆಯ್ಕೆ ಆರಿಸಿ. ಆ ಬಳಿಕ e-file ಆಯ್ಕೆ ಅಡಿಯಲ್ಲಿರೋ 'Income tax returns'ಆಯ್ಕೆ ಮಾಡಿ. ನಂತರ 'View Filed
returns'ಆರಿಸಿ.
ಹಂತ 3: ಆ ಬಳಿಕ ಅಂದಾಜು ವರ್ಷ (AY) ಆಯ್ಕೆ ಮಾಡಬೇಕು. 2020-21ನೇ ಆರ್ಥಿಕ ಸಾಲಿಗೆ ಅಂದಾಜು ವರ್ಷ 2021-22 ಆಗಿರುತ್ತದೆ.
ಹಂತ 4: ಆ ನಂತರ 'View Details'ಆಯ್ಕೆ ಮಾಡಿ. ಈಗ ನಿಮಗೆ ನಿಮ್ಮ ಐಟಿಆರ್ ಸ್ಟೇಟಸ್ ಕಾಣಿಸುತ್ತದೆ.
PF Update:ಪಿಎಫ್ ಖಾತೆಗೆ ಶೀಘ್ರದಲ್ಲೇ ಬರಲಿದೆ ಬಡ್ಡಿ ಹಣ; ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
ಐಟಿಆರ್ ಸ್ಟೇಟಸ್ ನಲ್ಲಿ ನಿಮಗೆ ‘processed’ ಎಂದು ಕಾಣಿಸಿದ್ರೆ ರಿಟರ್ನ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರ್ಥ. ಒಂದು ವೇಳೆ ‘Submitted and pending for e-verification/verification’ ಎಂದಿದ್ರೆ ತೆರಿಗೆದಾರ ಐಟಿಆರ್ ಫೈಲ್ ಮಾಡಿದ್ದಾನೆ, ಆದ್ರೆ ಇ-ದೃಢೀಕರಣ ಮಾಡಿಲ್ಲ ಅಥವಾ ಸಹಿ ಮಾಡಿರುವ ಐಟಿಆರ್-V ಅರ್ಜಿ ಇನ್ನೂ ಐಟಿ ಇಲಾಖೆಯ ಸೆಂಟ್ರಲೈಸ್ಡ್ ಪ್ರೊಸೆಸಿಂಗ್ ಕೇಂದ್ರಕ್ಕೆ ಬಂದಿಲ್ಲ. ಇನ್ನು ವೆಬ್ ಸೈಟ್ ನಲ್ಲಿ ‘Successfully e-verified/verified’ ಎಂಬ ಸ್ಟೇಟಸ್ ಇದ್ರೆ ತೆರಿಗೆದಾರ ಐಟಿಆರ್ ಸಲ್ಲಿಕೆ ಮಾಡಿ, ದೃಢೀಕರಣ ಕೂಡ ಮಾಡಿದ್ದಾನೆ, ಆದ್ರೆ ಐಟಿ ಅಧಿಕಾರಿಗಳು ಇದನ್ನು ಇನ್ನೂ ಮುಂದುವರಿಸಿಲ್ಲ. ಇನ್ನು 'ತಪ್ಪಿರುವ' ಹಾಗೂ 'ಅವಧಿ ಮುಗಿದಿರುವ' ಸ್ಟೇಟಸ್ ಅನ್ನು ಕೂಡ ನೋಡಬಹುದು. ತಪ್ಪಿದೆ ಅಂದ್ರೆ ನಿಮ್ಮ ಐಟಿಆರ್ ನಲ್ಲಿ ಆದಾಯ ತೆರಿಗೆ ಇಲಾಖೆ ಯಾವುದೋ ದೋಷವನ್ನು ಹುಡುಕಿದೆ ಎಂದರ್ಥ. ಇನ್ನು ಅವಧಿ ಮುಗಿದಿದ್ರೆ ಅಂದ್ರೆ 90 ದಿನಗಳ ಅಂತಿಮ ಅವಧಿಯೊಳಗೆ ರೀಫಂಡ್ ಕ್ಲೇಮ್ ಮಾಡಲಾಗಿದೆ ಎಂದು ಅರ್ಥ.
