Asianet Suvarna News Asianet Suvarna News

ITR: ನೀವಿನ್ನೂ 2020-21ನೇ ಆರ್ಥಿಕ ಸಾಲಿನ ಐಟಿಆರ್ ಫೈಲ್ ಮಾಡಿಲ್ವ? ಹಾಗಾದ್ರೆ ದುಪ್ಪಟ್ಟು ಟಿಡಿಎಸ್ ಕಟ್ಟಲು ಸಿದ್ಧರಾಗಿ!

* ಐಟಿಆರ್ ಸಲ್ಲಿಕೆ ಮಾಡದವರ ಪಟ್ಟಿ ಸಿದ್ಧಪಡಿಸಿರುವ ಆದಾಯ ತೆರಿಗೆ ಇಲಾಖೆ
* ದುಪ್ಪಟ್ಟು ಟಿಡಿಎಸ್ /ಟಿಸಿಎಸ್ ಹೇರಲು ಸಿದ್ಧತೆ
*ಟಿಡಿಎಸ್/ಟಿಸಿಎಸ್ ವಾರ್ಷಿಕ 50,000 ರೂ.ಗಿಂತ ಕಡಿಮೆಯಿದ್ರೆ ಅಂಥವರಿಗೆ ತೊಂದರೆಯಿಲ್ಲ
 

Income Tax Payers ALERT File ITR Or You Will Have To Pay Double TDS/TCS Know Details
Author
Bangalore, First Published May 20, 2022, 6:49 PM IST

ನವದೆಹಲಿ (ಮೇ 20): 2020-21ನೇ ಹಣಕಾಸಿನ ಸಾಲಿನ (Financial Year) ಆದಾಯ ತೆರಿಗೆ ರಿಟರ್ನ್ಸ್ (ITR) ನೀವಿನ್ನೂ ಸಲ್ಲಿಕೆ ಮಾಡಿಲ್ಲವೆಂದ್ರೆ ನೀವು ದೊಡ್ಡ ಸಮಸ್ಯೆಯಲ್ಲಿ ಸಿಲುಕುವ ಸಾಧ್ಯತೆಯಿದೆ. ಈ ರೀತಿ ಐಟಿಆರ್ ಸಲ್ಲಿಕೆ ಮಾಡದವರ ಪಟ್ಟಿಯನ್ನು ಸಿದ್ಧಪಡಿಸಿ ಅಂಥವರಿಗೆ ದುಪ್ಪಟ್ಟು ಟಿಡಿಎಸ್ (TDS) /ಟಿಸಿಎಸ್ (TCS)ಹೇರಲು ಆದಾಯ ತೆರಿಗೆ ಇಲಾಖೆ (I-T Department) ನಿರ್ಧರಿಸಿದೆ. ಆದಾಯ ತೆರಿಗೆ ಕಾಯ್ದೆಯ (Income Tax Act) ಸೆಕ್ಷನ್ 206 ಎಬಿ ಹಾಗೂ 206 ಸಿಸಿಎಗಳಿಗೆ ಸಂಬಂಧಿಸಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ  (CBDT) ಸುತ್ತೋಲೆ ಹೊರಡಿಸಿದೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ (Business Standard) ವರದಿ ಹೇಳಿದೆ. ಹೆಚ್ಚು ಜನರನ್ನು ತೆರಿಗೆ ವ್ಯಾಪ್ತಿಯೊಳಗೆ ತರಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

ಹೊಸ ಬದಲಾವಣೆಗಳೇನು?
ಒಂದು ವೇಳೆ ಒಬ್ಬ ವ್ಯಕ್ತಿ ನಿಗದಿತ ದಿನಾಂಕ ಅಥವಾ ಗಡುವಿನೊಳಗೆ ಐಟಿಆರ್ (ITR) ಫೈಲಿಂಗ್ (Filing) ಮಾಡದಿದ್ರೆ ಅಂಥವರಿಗೆ ಸಂಬಂಧಿತ ಸ್ಲ್ಯಾಬ್ ಗಳ ಅಡಿಯಲ್ಲಿ ದುಪ್ಪಟ್ಟು ಟಿಡಿಎಸ್ /ಟಿಸಿಎಸ್ ವಿಧಿಸಲಾಗುತ್ತದೆ. ಒಂದು ವೇಳೆ ಟಿಡಿಎಸ್ (TDS) ಲೆಕ್ಕಾಚಾರ ಕಡಿಮೆ ಮೊತ್ತದಲ್ಲಿದ್ದರೆ ಆಗ ಶೇ.5ರಷ್ಟು ಟಿಡಿಎಸ್ ವಿಧಿಸಲಾಗುತ್ತದೆ. ಹೀಗಾಗಿ ದುಪ್ಪಟ್ಟು ಅಥವಾ ಶೇ.5., ಇವೆರಡರಲ್ಲಿ ಯಾವುದು ಅಧಿಕವೋ ಅದನ್ನು ವಿಧಿಸಲಾಗುತ್ತದೆ. ಹಿಂದಿನ ಎರಡು ವರ್ಷಗಳ ಐಟಿಆರ್ ಫೈಲ್ ಮಾಡದವರಿಗೆ ಈ ಹಿಂದೆ ದಂಡ ವಿಧಿಸಲಾಗುತ್ತಿತ್ತು. ಆದ್ರೆ ಈಗ ಈ ನಿಯಮ ಬದಲಾಗಿದ್ದು, ಒಂದು ವರ್ಷ ಐಟಿಆರ್ ಪಾವತಿಸದಿದ್ರೂ ದಂಡ ವಿಧಿಸಲಾಗುತ್ತದೆ. 

Repo Rate:ಏರುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಮತ್ತೆ ರೆಪೋ ದರ ಹೆಚ್ಚಿಸಲಿದೆಯಾ RBI?

ವಿನಾಯ್ತಿ ಇದೆಯಾ?
ಒಂದು ವೇಳೆ ಟಿಡಿಎಸ್/ಟಿಸಿಎಸ್ ವಾರ್ಷಿಕ 50,000 ರೂ.ಗಿಂತ ಕಡಿಮೆಯಿದ್ರೆ ಅಂಥವರಿಗೆ ಈ ನಿಯಮ ಅನ್ವಯಿಸೋದಿಲ್ಲ. ಇನ್ನು ಇಪಿಎಫ್ ನಿಂದ ಅವಧಿಗೆ ಮುನ್ನ ವಿತ್ ಡ್ರಾ, ವೇತನದ ತೆರಿಗೆ ಕಡಿತ ಅಥವಾ ಲಾಟರಿ, ಕಾರ್ಡ್ ಆಟ ಅಥವಾ ಕುದುರೆ ವ್ಯವಹಾರದಿಂದ ಗಳಿಸಿದ ಹಣಕ್ಕೆ ಈ ನಿಯಮ ಅನ್ವಯಿಸುವುದಿಲ್ಲ.

ನೀವು ಏನ್ ಮಾಡಬಹುದು?
ನೀವು ಈ ತನಕ ಐಟಿಆರ್ ಫೈಲ್ ಮಾಡಿಲ್ಲವೆಂದ್ರೆ ತಕ್ಷಣ ಆ ಕೆಲ್ಸ ಮಾಡಿ. ಇದ್ರಿಂದ ಆ ಪಟ್ಟಿಯಿಂದ ನಿಮ್ಮ ಹೆಸರನ್ನು ಪಟ್ಟಿಯಿಂದ ತೆಗೆಯುತ್ತಾರೆ. ನೀವು ವಿಳಂಬ (Belated) ಅಥವಾ ಪರಿಷ್ಕೃತ (Revised) ಐಟಿಅರ್ ಕೂಡ ಸಲ್ಲಿಕೆ ಮಾಡಬಹುದು. ವಿಳಂಬ ಐಟಿಆರ್ ಸಲ್ಲಿಕೆ ಮಾಡೋ ತೆರಿಗೆದಾರರು ತಡವಾಗಿರೋದಕ್ಕೆ ದಂಡ ಶುಲ್ಕ ಕಟ್ಟಬೇಕು. ಹಣಕಾಸು ಕಾಯ್ದೆ ಅನ್ವಯ ಈ ದಂಡವನ್ನು ನಿಗದಿಪಡಿಸಲಾಗಿದ್ದು, 1,000ರೂ.ನಿಂದ  5,000ರೂ. ತನಕ ಇರುತ್ತದೆ.  ತೆರಿಗೆ ವ್ಯಾಪ್ತಿಗೊಳಪಡೋ ವಾರ್ಷಿಕ ಆದಾಯ  2.5ಲಕ್ಷ ರೂ.ಗಿಂತ ಕಡಿಮೆಯಿದ್ರೆ ದಂಡ ಶುಲ್ಕ ಪಾವತಿಯಿಂದ ವಿನಾಯ್ತಿ ಇದೆ.  

ಭಾರತದ ಆರ್ಥಿಕ ಪ್ರಗತಿ 6.4: ವಿಶ್ವದಲ್ಲೇ ಭಾರತ ನಂ.1

ವಿಳಂಬವಾದ್ರೆ ಏನೆಲ್ಲ ಸಮಸ್ಯೆಯಾಗುತ್ತೆ?
ನಿಗದಿತ ದಿನಾಂಕದೊಳಗೆ ಐಟಿಆರ್ ಸಲ್ಲಿಕೆ ಮಾಡದಿದ್ರೂ ವಿಳಂಬ ಐಟಿಆರ್ ಸಲ್ಲಿಕೆಗೆ ಅವಕಾಶವಿದ್ದರೂ ತೆರಿಗೆದಾರರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಈ ವರ್ಷ ತೆರಿಗೆದಾರರು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಅವರು ಗಳಿಸೋ ಲಾಭಕ್ಕೆ ಸರಿಹೊಂದಿಸೋ (Setoff) ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಇನ್ನು ತೆರಿಗೆದಾರರ ಆದಾಯದಿಂದ ಈಗಾಗಲೇ ಹೆಚ್ಚುವರಿಯಾಗಿ ಕಡಿತಗೊಂಡ ತೆರಿಗೆಗೆ ಸೂಕ್ತ ದಾಖಲೆಗಳನ್ನು ಒದಗಿಸಿದ್ರೆ ಅದನ್ನು ಆದಾಯ ತೆರಿಗೆ ಇಲಾಖೆ ಮರುಪಾವತಿ (Refund) ಮಾಡುತ್ತದೆ. ಆದ್ರೆ ಅಂತಿಮ ಗಡುವಿನೊಳಗೆ  ಐಟಿಆರ್ ಫೈಲ್ ಮಾಡದ ತೆರಿಗೆದಾರರಿಗೆ ಮರುಪಾವತಿ ಮಾಡೋದಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ತೆರಿಗೆದಾರ ಈ ತನಕ ಪಾವತಿ ಮಾಡಿದ ತೆರಿಗೆ ಮೊತ್ತ ಆದಾಯ ತೆರಿಗೆ ಇಲಾಖೆ ಲೆಕ್ಕ ಹಾಕಿದ ಮೊತ್ತಕ್ಕಿಂತ ಕಡಿಮೆ ಇದ್ರೆ ಬಾಕಿ ತೆರಿಗೆ ಪಾವತಿಸೋ ಜೊತೆಗೆ ಅದಕ್ಕೆ ಬಡ್ಡಿ (Interest) ಕೂಡ ಕಟ್ಟಬೇಕಾಗುತ್ತದೆ. 

Follow Us:
Download App:
  • android
  • ios