ನಿಮ್ಮ ಸೋಶಿಯಲ್ ಮೀಡಿಯಾ, ಇಮೇಲ್ ಸೇರಿದಂತೆ ಇತರ ಡಿಜಿಟಲ್ ಖಾತೆಗಳ ಮೇಲೆ ಇನ್ಮುಂದೆ ಆದಾಯ ತೆರಿಗೆ ಇಲಾಖೆ ಹದ್ದಿನ ಕಣ್ಣಿಡಲಿದೆ. ಇಷ್ಟೇ ಅಲ್ಲ ಫ್ರೀಝ್ ಮಾಡುವ, ತನಿಖೆ ನಡೆಸುವ ಅಧಿಕಾರವೂ ಆದಾಯ ತೆರಿಗೆ ಇಲಖೆಗೆ ಇದೆ. ಇದು ಭಾರತದಲ್ಲಿ ಜಾರಿಯಾಗುತ್ತಿರುವ ಹೊಸ ನಿಯಮ. 

ನವದೆಹಲಿ(ಮಾ.04) ಆದಾಯ ತೆರಿಗೆ ಇಲಾಖೆ ಇಷ್ಟು ದಿನ ನಿಮ್ಮ ಬ್ಯಾಂಕ್ ಖಾತೆ, ಟ್ರಾನ್ಸಾಕ್ಷನ್, ವಹಿವಾಟುಗಳ ಮೇಲೆ ನಿಗಾ ಇಡುತ್ತಿತ್ತು. ಈ ಮೂಲಕ ನಿಯಮ ಮೀರಿ ಯಾವುದೇ ಹಣದ ವ್ಯವಹಾರ ಇದ್ದರೂ ನೊಟಿಸ್ ನೀಡಲಿದೆ. ಅಗತ್ಯ ಬಿದ್ದರೆ ವಿಚಾರಣೆ, ತನಿಖೆ ಹೀಗೆ ಸಾಗಲಿದೆ. ಆದರೆ ಇದೀಗ ಆದಾಯ ತೆರಿಗೆ ಇಲಾಖೆ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವು ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ಈ ನಿಯಮದಡಿಯಲ್ಲಿ ನಿಮ್ಮ ಎಲ್ಲಾ ಸೋಶಿಯಲ್ ಮೀಡಿಯಾ, ಇಮೇಲ್ ಖಾತೆ, ಇತರ ಡಿಜಿಟಲ್ ಖಾತೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಹದ್ದಿನ ಕಣ್ಣಿಡಲಿದೆ. ಅಗತ್ಯ ಬಿದ್ದರೆ ನಿಮ್ಮ ಖಾತೆಗಳನ್ನು ತನಿಖೆಗೆ ಒಳಪಡಿಸಲಿದೆ. ಹೀಗಾಗಿ ಸೋಶಿಯಲ್ ಮೀಡಿಯಾ ಹೈಜೀನ್ ಕಾಪಾಡಿಕೊಳ್ಳುವುದು ಅದೀಗ ಅನಿವಾರ್ಯವಾಗಿದೆ.

1961ರ ಆದಾಯ ತೆರಿಗೆ ಕಾಯ್ದೆ ಅಡಿ, ಅಧಿಕಾರಿಗಳಿಗೆ ಹಲವು ಅಧಿಕಾರ ನೀಡಲಾಗಿದೆ. ನಿಯಮ ಮೀರಿದೆ, ಅಥವಾ ತೆರಿಗೆ ವಂಚನೆ ಆರೋಪದಡಿ ಸರ್ಚ್ ವಾರೆಂಟಿ ಹಿಡಿದು ತಡಕಾಡಬಹುದು, ನಗದು, ಚಿನ್ನ, ಆಭರಣ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಜಪ್ತಿ ಮಾಡುವ ಅಧಿಕಾರವೂ ಇದೆ.ಇಷ್ಟೇ ಸೇಫ್ ಲಾಕರ್ ತೆರೆಯುವ ಅವಕಾಶವೂ ಅಧಿಕಾರಿಗಳಿದೆ. ಆದರೆ ಹೊಸ ನಿಯಮದಲ್ಲಿ ಅನುಮಾನ ಬಂದರೆ, ಆರೋಪದ ಅಡಿಯಲ್ಲಿ ಸೋಶಿಯಲ್ ಮೀಡಿಯಾ ಖಾತೆ, ಇಮೇಲ್, ಇತರ ಡಿಜಿಟಲ್ ಖಾತೆಗಳನ್ನು ಪರಿಶೀಲಿಸುವ, ತನಿಖೆಗೆ ಒಳಪಡಿಸುವ ಅಧಿಕಾರ ನೀಡಲಾಗುತ್ತಿದೆ.

ಮಿತಿಗಿಂತ ಹೆಚ್ಚು ನಿಮ್ಮ ಉಳಿತಾಯ ಹಣ ಮರಳಿ ಪಡೆದರೂ ಬೀಳುತ್ತೆ ಟ್ಯಾಕ್ಸ್, ನಿಯಮವೇನು?

ಆದಾಯ ತೆರಿಗೆ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ. ಪ್ರಮುಖವಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಡಿಜಿಟಲ್ ತಡಕಾಡವು ಅವಕಾಶವನ್ನು ಹೊಸ ತಿದ್ದುಪಡಿಯಲ್ಲಿ ನೀಡಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಡಿಜಿಟಲ್ ರೂಪದಲ್ಲಿ ನಡೆಯುತ್ತಿಪುವ ಆದಾಯ ತೆರಿಗೆ ಅವ್ಯವಹಾರ. ಸೋಶಿಯಲ್ ಮೀಡಿಯಾ, ಇಮೇಲ್, ಸೇರಿದಂತೆ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಈ ಅವ್ಯವಾರಗಳು ನಡೆಯುತ್ತಿದೆ. ಹೀಗಾಗಿ ಇದನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಇಲಾಖೆಯ ಅಧಿಕಾರ ವ್ಯಾಪ್ತಿ ವಿಸ್ತರಣೆಯಾಗುತ್ತಿದೆ. 

ಬಚ್ಚಿಟ್ಟ ಆದಾಯ ಮೂಲಗಳನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಅಧಿಕಾರ ವ್ಯಾಪ್ತಿ ವಿಸ್ತರಿಸಲಾಗುತ್ತಿದೆ. ಪ್ರಮುಖವಾಗಿ ಸೋಶಿಯಲ್ ಮೀಡಿಯಾ, ಇಮೇಲ್, ಸೇರಿದಂತೆ ಹಲವು ಡಿಜಿಟಲ್ ಖಾತೆಗಳ ಮೂಲಕ ಕೆಲ ಆದಾಯ ಮೂಲಗಳನ್ನು ಬಚ್ಚಿಡಲಾಗುತ್ತಿದೆ. ಇದರಿಂದ ಆದಾಯ ತೆರಿಗೆ ಕಾಯ್ದೆಯಲ್ಲಿ ತಿದ್ದುಪಡಿ ತಂದ ಹೊಸ ನಿಯಮ ಜಾರಿಗೊಳಿಸಲಾಗುತ್ತಿದೆ.

ತಿದ್ದುಪಡಿ ಕುರಿತು ಕರಡು ಸಿದ್ದಗೊಳ್ಳುತ್ತಿದೆ. ಚರ್ಚೆಗಳು ಶುರುವಾಗಿದೆ. ತಜ್ಞರ ಅಭಿಪ್ರಾಯ, ಅಧಿಕಾರದ ವ್ಯಾಪ್ತಿ, ಐಟಿ ತಜ್ಞರ ನೆರವು ಸೇರಿದಂತೆ ಸಮಗ್ರ ಮಾಹಿತಿಗಳ ಚರ್ಚೆ ನಡೆಯುತ್ತಿದೆ. ಹೊಸ ತಿದ್ದುಪಡಿ ನಿಯಮ 2026ರ ಎಪ್ರಿಲ್ ತಿಂಗಳಲ್ಲಿ ಜಾರಿಯಾಗಲಿದೆ. ಇನ್ನು ವರ್ಷವಿದೆ ಎಂದು ಆರಾಮ ಕುಳಿತುಕೊಳ್ಳುವಂತಿಲ್ಲ. ಕಾರಣ ಆರ್ಟಿಫೀಶಿಯಲ್ ಇಂಟಲಿಜೆನ್ಸ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಅವ್ಯವಹಾರ, ಅನುಮಾನಸ್ಪದ ವ್ಯವಹಾರಗಳಿದ್ದರೆ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಹೊಸ ಆದಾಯ ತೆರಿಗೆ ಮಸೂದೆಗೆ ಸಂಪುಟ ಅನುಮೋದನೆ, 60 ವರ್ಷ ಹಳೆ ನೀತಿ ಬದಲಾವಣೆ