ನವದೆಹಲಿ(ಜು.04): ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತ ಲಾಕ್‌ಡೌನ್ ಸಡಿಲಿಕೆ ಮಾಡಿ ಆರ್ಥಿಕ ಪುನ್ಚೇತನಕ್ಕೆ ಅನುವುಮಾಡಿಕೊಡಲಾಗಿದೆ. ವ್ಯಾಪಾರ, ವಹಿವಾಟು ಸೇರಿದಂತ ಉದ್ದಿಮೆಗಳು ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಇದರ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಸಿಹಿ ಸುದ್ದಿ ನೀಡಿದೆ. 2019-20(ಫಿನಾನ್ಶಿಯಲ್ ಇಯರ್) ಹಾಗೂ 2020-21(ಆಸೆಸ್ಮೆಂಟ್ ಇಯರ್) ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿದೆ.

ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವ ಮುನ್ನ ತಿಳಿದುಕೊಳ್ಳಿ ಹೊಸ ನಿಯಮ!

2019-20(ಫಿನಾನ್ಶಿಯಲ್ ಇಯರ್) ಹಾಗೂ 2020-21(ಆಸೆಸ್ಮೆಂಟ್ ಇಯರ್) ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಯನ್ನು ನವೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.  ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಆದಾಯ ತೆರಿಗೆ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಟ್ವೀಟ್ ಮಾಡಿದೆ.

 

ಹೊಸ ಟ್ಯಾಕ್ಸ್ ಸ್ಲ್ಯಾಬ್ ದರ: ಈಗ CA ಸಹಾಯವಿಲ್ಲದೇ ITR ಮಾಡಬಹುದು!

ತೆರಿಗೆದಾತರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. CBDT(ಸೆಂಟ್ರಲ್ ಬೋರ್ಡ್ ಡೈರೆಕ್ಟ್ ಟ್ಯಾಕ್ಸ್) ಗಡುವನ್ನು ವಿಸ್ತರಿಸಿದೆ. ಇದೀಗ ಈ ದಿನಾಂಕವನ್ನು ಜುಲೈ 31ರ ವರೆಗೆ ವಿಸ್ತರಿಸಲಾಗಿದೆ. 

ಮೂಲ ಮತ್ತು ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಸಮಯವನ್ನು 2020 ಜುಲೈ 31 ಕ್ಕೆ ವಿಸ್ತರಿಸಲಾಗಿದೆ. ಇದಲ್ಲದೆ, CBDT ಅವಧಿಯನ್ನು ಜುಲೈ 31 ರವರೆಗೆ ಒಂದು ತಿಂಗಳ ಕಾಲಾವಧಿಯನ್ನು ವಿಸ್ತರಿಸಿದೆ.  IT ಕಾಯ್ದೆಯಡಿ ಕಡಿತವನ್ನು ಪಡೆಯಲು ವಿವಿಧ ಹೂಡಿಕೆಗಳನ್ನು ಮಾಡಲು, ಇದರಲ್ಲಿ ಸೆಕ್ಷನ್ 80 ಸಿ (LIC, PPF, NSC ಇತ್ಯಾದಿ), 80 ಡಿ (ಮೆಡಿಕ್ಲೈಮ್), 80 ಜಿ(ಡೊನೇಶನ್) ಸೇರಿದಂತೆ ಕ್ಲೈಮ್ ಅವಕಾಶವಿದೆ.