ಮೋದಿ ಹೇಳಿದ ‘ಆ’ ಮಾತು ಸರಿಯಂತೆ: ಪ್ರಧಾನಿ ಹೇಳಿದ್ದೇನಂತೆ?
ಪ್ರಧಾನಿ ಮೋದಿ ಹೇಳಿದ ಆ ಮಾತು ಸ್ಫಟಿಕದಷ್ಟೇ ಸತ್ಯವಂತೆ| ಅಷ್ಟಕ್ಕೂ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತಾ?| 131 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ತೆರಿಗೆ ಕಟ್ಟುವವರೆಷ್ಟು ಜನ?| ಕೇವಲ 1.5 ಕೋಟಿ ಜನ ತೆರೆಗೆ ಕಟ್ಟುತ್ತಾರೆ ಎಂದಿದ್ದ ಪ್ರಧಾನಿ ಮೋದಿ| ಪ್ರಧಾನಿ ಮೋದಿ ಹೇಳಿಕೆ ಬೆಂಬಲಿಸಿದ ಕೇಂದ್ರ ನೇರ ತೆರಿಗೆ ಮಂಡಳಿ| 1 ಕೋಟಿ ರೂ.ಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರು ಕೇವಲ 2,200 ಜನ|
ನವದೆಹಲಿ(ಫೆ.14): 131 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೇವಲ 1.5 ಕೋಟಿ ಜನ ಮಾತ್ರ ತೆರಿಗೆ ಕಟ್ಟುತ್ತಾರೆ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆ ಸರಿ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ.
ಭಾರತದಲ್ಲಿ ಕೇವಲ 2,200 ಜನ ಮಾತ್ರ ತಮ್ಮ ವೃತ್ತಿಪರ ಕೆಲಸದಿಂದ 1 ಕೋಟಿ ರೂ.ಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವುದಾಗಿ 2019ರ ಹಣಕಾಸು ವರ್ಷದಲ್ಲಿ ಬಹಿರಂಗಪಡಿಸಿದ್ದಾರೆ ಎಂದು ಸಿಬಿಟಿಡಿ ಸ್ಪಷ್ಟಪಡಿಸಿದೆ.
ಈ 2,200 ಜನರ ಪೈಕಿ ವೈದ್ಯರು, ಲೆಕ್ಕ ಪರಿಶೋಧಕರು ಹಾಗೂ ವಕೀಲರು ಸೇರಿದ್ದಾರೆ ಎನ್ನಲಾಗಿದ್ದು, ಪ್ರಧಾನಿ ಮೋದಿ ಅವರ ತೆರಿಗೆ ಕುರಿತ ಹೇಳಿಕೆಯನ್ನು ಸಿಬಿಡಿಟಿ ಬೆಂಬಲಿಸಿದೆ.
ವೃತ್ತಿಗಳಿಂದ ಬರುವ ಈ ಆದಾಯವು ಬಾಡಿಗೆ, ಬಡ್ಡಿ ಮತ್ತು ಬಂಡವಾಳ ಲಾಭದಂತಹ ಇತರ ಮೂಲಗಳಿಂದ ಬಂದಿಲ್ಲ ಎಂದು ಇಲಾಖೆ ಸರಣಿ ಟ್ವೀಟ್‌ಗಳ ಮೂಲಕ ಸ್ಪಷ್ಟಪಡಿಸಿದೆ.
ಹೊಸ ಟ್ಯಾಕ್ಸ್ ಸ್ಲ್ಯಾಬ್ ದರ: ಈಗ CA ಸಹಾಯವಿಲ್ಲದೇ ITR ಮಾಡಬಹುದು!
ವೈಯಕ್ತಿಕ ರಿಟರ್ನ್ ಫೈಲ್ ಮಾಡುವವರಿಗೆ ಸಂಬಂಧಿಸಿದ ಕೆಲವು ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ ಎಂದು ಹೇಳಿರುವ ಸಿಬಿಡಿಟಿ, ಈ ಕುರಿತು ವದಂತಿಗಳನ್ನು ನಂಬದಂತೆ ಮನವಿ ಮಾಡಿದೆ.
ಕಳೆದ ಐದು ವರ್ಷಗಳಲ್ಲಿ, ಭಾರತದಲ್ಲಿ 1.5 ಕೋಟಿಗೂ ಹೆಚ್ಚು ಕಾರುಗಳು ಮಾರಾಟವಾಗಿವೆ. ಮೂರು ಕೋಟಿಗೂ ಹೆಚ್ಚು ಭಾರತೀಯರು ವ್ಯಾಪಾರ ಅಥವಾ ಪ್ರವಾಸಕ್ಕಾಗಿ ವಿದೇಶಕ್ಕೆ ಹೋಗಿದ್ದಾರೆ. ಆದರೆ 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೇವಲ 1.5 ಕೋಟಿ ಜನ ಮಾತ್ರ ಆದಾಯ ತೆರಿಗೆ ಪಾವತಿಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಫೆಬ್ರವರಿ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ