5ಲೀ. ಪೆಟ್ರೋಲ್, ಡೀಸೆಲ್ ಕೊಂಡರೆ 1ಲೀ. ಉಚಿತ:ಯಾರಿಗುಂಟು ಯಾರಿಗಿಲ್ಲ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Sep 2018, 11:40 AM IST
In Tamil Nadu now you van get 1 ltr fuel for free if you buy 5 ltr
Highlights

ಉಚಿತ ಪೆಟ್ರೋಲ್, ಡೀಸೆಲ್ ಘೋಷಿಸಿದ ಪೆಟ್ರೋಲಿಯಂ ಸಂಸ್ಥೆ! 5 ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಕೊಂಡರೆ 1 ಲೀಟರ್ ಉಚಿತ! ತಮಿಳುನಾಡಿನ ಕೃಷ್ಣಗಿರಿಯ ಹಿಂದೂಸ್ತಾನ್ ಪೆಟ್ರೋಲಿಯಂ ಬಂಕ್!

ಗ್ರಾಹಕರಿಗೆ ಉಚಿತ ತೈಲ ನೀಡುವ ಘೋಷಣೆ ಮಾಡಿದ ಬಂಕ್! ಪೆಟ್ರೋಲ್ ಪಂಪ್ ಆಪ್ ಡೌನ್ಲೋಡ್ ಮಾಡಿಕೊಂಡವರಿಗೆ ಮಾತ್ರ ಆಫರ್

ಚೆನ್ನೈ(ಸೆ.12): ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರಿದ್ದು, ಜನಸಾಮಾನ್ಯ ಕಂಗಾಲಾಗಿದ್ದಾನೆ. ಆದರೆ ತಮಿಳುನಾಡಿನಲ್ಲಿ ಉಚಿತವಾಗಿ ಪೆಟ್ರೋಲ್ ಮತ್ತು ಡೀಸೆಲ್ ನೀಡಲಾಗುತ್ತಿದೆ.

ಹೌದು, ಕೃಷ್ಣಗಿರಿಯ ರಾಯಕೊಟ್ಟೈ ರಸ್ತೆಯಲ್ಲಿನ ಎಚ್‌ಪಿ ಪೆಟ್ರೋಲ್ ಪಂಪ್ ನಲ್ಲಿ ಈ ವಿಶೇಷ ಕೊಡುಗೆ ನೀಡಲಾಗುತ್ತಿದೆ. ನಗದು ರಹಿತ ವಹಿವಾಟು ಉತ್ತೇಜನಕ್ಕಾಗಿ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆ ಈ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.

ತೈಲ ಬೆಲೆ ಏರಿಕೆಯಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದರೆ, ತಮಿಳುನಾಡಿನ ಕೃಷ್ಣಗಿರಿಯ ಹಿಂದೂಸ್ತಾನ್ ಪೆಟ್ರೋಲಿಯಂ ಬಂಕ್ ಗ್ರಾಹಕರಿಗೆ ಉಚಿತವಾಗಿ 1 ಲೀ. ಪೆಟ್ರೋಲ್ ಅಥವಾ ಡೀಸೆಲ್ ನೀಡುತ್ತಿದೆ.

ಆದರೆ ಇದಕ್ಕೆ ಕೆಲ ಷರತ್ತುಗಳಿವೆ. ಉಚಿತ ಪೆಟ್ರೋಲ್ ಮತ್ತು ಡೀಸೆಲ್ ಪಡೆಯಲು ಗ್ರಾಹಕರು ಪೆಟ್ರೋಲ್ ಪಂಪ್ ಆ್ಯಪ್‌ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ. ನಗದುರಹಿತ ವಹಿವಾಟು ಉತ್ತೇಜಿಸಲು ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಬಂಕ್ ಮಾಲೀಕರು ತಿಳಿಸಿದ್ದಾರೆ.ಈ ಆ್ಯಪ್‌ ಗೆ ಬೆಂಬಲ ನೀಡಿದೆ. 

ಆ್ಯಪ್‌ ಮೂಲಕ ಬಳಕೆದಾರರು ಖರೀದಿಸುವ ಪ್ರತಿ 5 ಲೀ. ಪೆಟ್ರೋಲ್ ಅಥವಾ ಡೀಸೆಲ್ ಜೊತೆಗೆ 1 ಲೀ. ಪೆಟ್ರೋಲ್ ಅಥವಾ ಡೀಸೆಲ್ ಉಚಿತವಾಗಿ ನೀಡಲಾಗುತ್ತದೆ. ಈ ಕೊಡುಗೆ ಎರಡು ತಿಂಗಳ ಅವಧಿಯವರೆಗೆ ಮಾತ್ರ ಎಂದು ಸ್ಪಷ್ಟಪಡಿಸಲಾಗಿದೆ.

ತೈಲ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಇಲ್ಲಿನ ಉಚಿತ ಇಂಧನ ಕೊಡುಗೆ ಖುಷಿ ಕೊಟ್ಟಿದ್ದು, ನೂರಾರು ಸಂಖ್ಯೆಯಲ್ಲಿ ಜನರು ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ಪೆಟ್ರೋಲ್ ಬಂಕ್ ಮೇಲೆ ಮುಗಿ ಬಿದ್ದಿದ್ದಾರೆ.

loader