Asianet Suvarna News Asianet Suvarna News

ರೆಪೋ ದರ ಏರಿಸದ ಆರ್​ಬಿಐ: ಡಾಲರ್ ಎದುರು ರೂಪಾಯಿ ಮೌಲ್ಯ 74.13 ರೂ ಆಗೋಯ್ತು!

ರೆಪೋ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಆರ್​ಬಿಐ ನಿರ್ಧಾರ! ರೆಪೋ ದರ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಬದಲಾವಣೆ ಇಲ್ಲ! ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ! ರೂಪಾಯಿ ಮೌಲ್ಯ 74.13 ರೂ. ಗೆ ಸಾರ್ವಕಾಲಿಕ ದಾಖಲೆಯ ಕುಸಿತ

In a Surprise Move RBI Keeps Key Rate Unchanged
Author
Bengaluru, First Published Oct 5, 2018, 4:15 PM IST
  • Facebook
  • Twitter
  • Whatsapp

ನವದೆಹಲಿ(ಅ.5): ರೆಪೋ ದರ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ) ನಿರ್ಧರಿಸಿದೆ.

ರೆಪೋ ದರಗಳನ್ನು ಶೇ. 6.50ರ ದರದಲ್ಲಿ ಮತ್ತು ರಿವರ್ಸ್ ರೆಪೋ ದರವನ್ನು ಶೇ.6.25ರ ದರದಲ್ಲಿಯೇ ಮುಂದುವರೆಸಲು ಆರ್​ಬಿಐ ತೀರ್ಮಾನಿಸಿದೆ.

ಈ ಹಿಂದೆ ರೆಪೋ ಮತ್ತು ರಿವರ್ಸ್ ರೆಪೋ ದರವನ್ನು ಎರಡು ಬಾರಿ ಏರಿಸಿದ್ದ ಆರ್ ಬಿಐ ಈ ಬಾರಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದು ಕೊಂಡಿದೆ.  

ರೂಪಾಯಿ ಮೌಲ್ಯ ಕುಸಿತ ಹಾಗೂ ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಆರ್​ಬಿಐ ರೆಪೋ ದರವನ್ನು ಶೇ. 25 ಮೂಲಾಂಶಗಳಷ್ಟು ಏರಿಕೆ ಮಾಡುವ ನಿರೀಕ್ಷೆ ಇತ್ತು. ಆದರೆ ಮಾರುಕಟ್ಟೆ ಸ್ಥಿರತೆಗಾಗಿ ಈ ಕ್ರಮ ಜರುಗಿಸಲಾಗಿದೆ ಎಂದು ಆರ್ ಬಿಐ ಹೇಳಿದೆ.

ಈ ಮಧ್ಯೆ ಆರ್​ಬಿಐ ತನ್ನ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದ್ದು, 74.13 ರೂ. ಸಾರ್ವಕಾಲಿಕ ದಾಖಲೆಯ ಕುಸಿತ ಕಂಡಿದೆ. 

Follow Us:
Download App:
  • android
  • ios