Asianet Suvarna News Asianet Suvarna News

ಆಡಾಡುತ ಗೂಗಲ್ ಪ್ರವೇಶ: ಈಕೆಯ ಸಂಬಳವೆಷ್ಟು ಗೊತ್ತಾ?

ಗೂಗಲ್ ಸೇರಿದ ಹೈದರಾಬಾದ್  ಐಐಟಿ ವಿದ್ಯಾರ್ಥಿನಿ! ವಾರ್ಷಿಕ 1.2 ಕೋಟಿ ರೂ. ವೇತನ! ವಿಕಾರಾಬಾದ್ ಮೂಲದ ಸ್ನೇಹಾ ರೆಡ್ಡಿ! ಕೃತಕ ಬುದ್ಧಿಮತ್ತೆ ಸಂಶೋಧನಾ ವಿಭಾಗಕ್ಕೆ ಆಯ್ಕೆ

IIT Hyderabad student Sneha Reddy bags Rs 1.2 crore package with Google
Author
Bengaluru, First Published Aug 7, 2018, 6:21 PM IST

ಹೈದರಾಬಾದ್(ಆ.7): ಇತ್ತೀಚೆಗಷ್ಟೇ ಐಐಟಿ - ಹೈದರಾಬಾದ್ ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದ ಸ್ನೇಹಾ ರೆಡ್ಡಿ ಅವರಿಗೆ  ಗೂಗಲ್ ಸಂಸ್ಥೆಯಲ್ಲಿ ಉದ್ಯೋಗ ದೊರಕಿದ್ದು, ವಾರ್ಷಿಕ 1.2 ಕೋಟಿ ರೂ. ವೇತನ ನಿಗದಿ ಮಾಡಲಾಗಿದೆ.

ದೇಶದಾದ್ಯಂತ ಗೂಗಲ್ ನಡೆಸಿದ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಐದು ಮಂದಿ ಪ್ರತಿಭಾವಂತರು ಆಯ್ಕೆಯಾಗಿದ್ದು, ಅವರಲ್ಲಿ ಸ್ನೇಹಾ ರೆಡ್ಡಿ ಸಹ ಒಬ್ಬರಾಗಿದ್ದಾರೆ. ವಿಕಾರಾಬಾದ್ ಮೂಲದ ಸ್ನೇಹಾ ರೆಡ್ಡಿ ಅವರನ್ನು ಗೂಗಲ್ ನ್ಯೂಯಾರ್ಕ್ ಕಚೇರಿಯಲ್ಲಿರುವ ಕೃತಕ ಬುದ್ಧಿಮತ್ತೆ ಸಂಶೋಧನಾ ವಿಭಾಗಕ್ಕೆ ಆಯ್ಕೆ ಮಾಡಿಲಾಗಿದೆ.

ಸ್ನೇಹಾ ರೆಡ್ಡಿ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಪ್ರತಿಭೆ ತೋರಿದ್ದಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅಲ್ಲದೇ ನಾಲ್ಕು ಚಿನ್ನದ ಪದಕಗಳನ್ನೂ ಗಳಿಸಿದ್ದಾರೆ. 

ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಕ್ರಿಯಾಶೀಲವಾಗಿರುವ ಸ್ನೇಹಾ ರೆಡ್ಡಿ, ಪಿಯುಸಿಯಲ್ಲಿ ಶೇ.98.4ರಷ್ಟು ಅಂಕಗಳನ್ನು ಪಡೆದಿದ್ದಾರೆ. ಐಐಟಿ ಪ್ರವೇಶಕ್ಕಾಗಿ ನಡೆಸುವ ಜೆಇಇ[ಮೇನ್ಸ್] ಪರೀಕ್ಷೆಯಲ್ಲಿ ಭಾರತಕ್ಕೆ 15ನೇ ರ‍್ಯಾಂಕ್, ಜೆಇಇ (ಅಡ್ವಾನ್ಸ್‌ಡ್)ನಲ್ಲಿ 677 ರ‍್ಯಾಂಕ್ ಪಡೆದಿದ್ದಾರೆ.

Follow Us:
Download App:
  • android
  • ios