ಐಟಿ ಉದ್ಯೋಗ ತೊರೆದು ಸ್ಟಾಂಡ್‌ ಅಪ್ ಕಾಮಿಡಿಯನ್ ಆದ ಈತನ ವಾರ್ಷಿಕ ದುಡಿಮೆ 1 ಕೋಟಿ!

ಹೆಸರು ಬಿಸ್ವ ಕಲ್ಯಾಣ್ ರಾತ್ , ಇವರು ತಮ್ಮ ಯೂಟ್ಯೂಬ್ ಸರಣಿಯಿಂದ ಜನಪ್ರಿಯತೆಯನ್ನು ಗಳಿಸಿರುವ ಇವರು ಐಟಿ ಪದವೀಧರರಾಗಿದ್ದಾರೆ.

IIT graduate who left tech career to become popular comedian  Biswa Kalyan Rath gow

ಐಐಟಿ ಪದವೀಧರರು ವಿವಿಧ ಕ್ಷೇತ್ರಗಳಲ್ಲಿ ಕೆಲಸದಲ್ಲಿದ್ದಾರೆ ಮಾತ್ರವಲ್ಲ ಉನ್ನತ ಸ್ಥಾನದಲ್ಲಿದ್ದಾರೆ. ಕೆಲವು ಐಐಟಿಯನ್ನರು ಸಂಗೀತ ಉದ್ಯಮದಲ್ಲಿ ತಮ್ಮ ಹೆಸರು ಮಾಡಿದರೆ, ಕೆಲವರು ನಟನೆಯಲ್ಲಿ ಹೆಸರು ಮಾಡಿದ್ದಾರೆ. ಯೂಟ್ಯೂಬರ್ ಆಗಿ ಆದ್ರೆ ಇಲ್ಲೊಬ್ಬರು ಹಾಸ್ಯದ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.

ಇದೇ ರೀತಿ ಓರ್ವ ಐಟಿ ಪದವೀಧರ ಇಂದು ಸ್ಟಾಂಡ್‌ ಅಪ್ ಕಾಮಿಡಿಯನ್ ಆಗಿ ಪ್ರಸಿದ್ಧಿ ಪಡೆದಿದ್ದಾರೆ.  ಇವರ ಹೆಸರು ಬಿಸ್ವ ಕಲ್ಯಾಣ್ ರಾತ್ , ಇವರು ತಮ್ಮ ಯೂಟ್ಯೂಬ್ ನಲ್ಲಿ ಸರಣಿಯಿಂದ ಜನಪ್ರಿಯತೆಯನ್ನು ಗಳಿಸಿದ್ದಾರೆ, ಸಹ ಹಾಸ್ಯನಟ ಕಾನನ್ ಗಿಲ್ ಅವರೊಂದಿಗೆ  ಚಲನಚಿತ್ರ ವಿಮರ್ಶೆಗಳನ್ನು ಮಾಡುತ್ತಾರೆ.   ಐಐಟಿ ಖರಗ್‌ಪುರದಲ್ಲಿ ಪದವೀಧರರಾಗಿರುವ ಬಿಸ್ವ ಕಲ್ಯಾಣ್ ರಾತ್, 2012 ರಲ್ಲಿ ಪ್ರೀಮಿಯಂ ಇನ್ಸ್ಟಿಟ್ಯೂಟ್ನಲ್ಲಿ ಜೈವಿಕ ತಂತ್ರಜ್ಞಾನವನ್ನು ಅಧ್ಯಯನ ಮಾಡಿದರು.

ವಿದೇಶಿ ಕಂಪೆನಿಗಳಿಂದ 1 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಪಡೆದ ಐಐಐಟಿ ಐವ

ಹಾಸ್ಯವನ್ನು ತಮ್ಮ ಪೂರ್ಣ ಪ್ರಮಾಣದ ವೃತ್ತಿಯಾಗಿ ಪರಿಗಣನೆಗೆ ತೆಗೆದುಕೊಳ್ಳುವ ಮೊದಲು, ಬಿಸ್ವಾ 2014 ರಲ್ಲಿ ಒರಾಕಲ್‌ನಲ್ಲಿ ಗ್ರಾಫಿಕ್ ವಿನ್ಯಾಸ, ಜಾಹೀರಾತು ಮತ್ತು ಸಾಫ್ಟ್‌ವೇರ್‌ನಲ್ಲಿ ಕೆಲಸ ಮಾಡಿದರು. ಬಿಸ್ವಾ ಅವರ ಹಾಸ್ಯವನ್ನು ಇಷ್ಟಪಡುವವರಲ್ಲಿ ಸೋಲೋ ಹಾಸ್ಯ ಸಾಕಷ್ಟು ಜನಪ್ರಿಯವಾಗಿವೆ. ಇವರು  ತನ್ಮಯ್ ಭಟ್ ಅವರ AIB ನ ಅನೇಕ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕೇವಲ 35 ಪಾಸ್‌ ಅಂಕ ಗಳಿಸಿದ ತುಷಾರ್ ಸುಮೇರಾ ಐಎಎಸ್ ಅಧಿಕಾರಿ!

ಬಿಸ್ವಾ ಅವರು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಬಿಡುಗಡೆಯಾದ ಲಖೋನ್ ಮೇ ಏಕ್ ಎಂಬ ವೆಬ್ ಸರಣಿಯನ್ನು ಸಹ ರಚಿಸಿದರು ಮತ್ತು ಯುವ ಪೀಳಿಗೆಯಲ್ಲಿ ಬಹಳ ಜನಪ್ರಿಯತೆ ಪಡೆದರು.  ವರದಿಯ ಪ್ರಕಾರ. Youtuber.me ಬಿಸ್ವ ಕಲ್ಯಾಣ್ ರಾತ್  ಅವರ ಚಾನೆಲ್  ನಿವ್ವಳ ಮೌಲ್ಯವು ಅಂದಾಜು 11 ಲಕ್ಷದಿಂದ 1 ಕೋಟಿ ರೂ. ಆಗಿದೆ.  ಡಿಸೆಂಬರ್ 27, 1989 ರಂದು ಜನಿಸಿದ 30 ವರ್ಷ ವಯಸ್ಸಿನ ಬಿಸ್ವಾ ಅವರು ನಟಿ ಸುಲಂಗ್ನಾ ಪಾಣಿಗ್ರಾಹಿ ಅವರನ್ನು ವಿವಾಹವಾಗಿದ್ದಾರೆ. ಸುಲಂಗ್ನಾ ಪಾಣಿಗ್ರಾಹಿ ಅವರು ಅಂಬರ್ ಧಾರಾ ಮತ್ತು ದೋ ಸಹೇಲಿಯಾನ್‌ನಂತಹ ಶೋಗಳಲ್ಲಿ ಕಾಣಿಸಿಕೊಂಡಿದ್ದು,  ಮರ್ಡರ್ 2 ನಲ್ಲಿಯೂ ಕಾಣಿಸಿಕೊಂಡಿದ್ದಾರೆ.

ವಿದೇಶಿ ಕಂಪೆನಿಗಳಿಂದ 1 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಪಡೆದ ಐಐಐಟಿ ಐವರು ವಿದ್ಯಾರ್ಥಿಗಳು!

Latest Videos
Follow Us:
Download App:
  • android
  • ios