Asianet Suvarna News Asianet Suvarna News

ರಿಲಯನ್ಸ್ ಮಂಡಳಿಗೆ ಅನಂತ್ ಅಂಬಾನಿ ನೇಮಕಕ್ಕೆ ಹಿನ್ನಡೆ; ವೋಟ್ ಮಾಡದಂತೆ ಹೂಡಿಕೆದಾರರಿಗೆ ಐಐಎಎಸ್ ಸಲಹೆ

ಮುಖೇಶ್ ಅಂಬಾನಿ ಆರ್ ಐಎಲ್ ಮಂಡಳಿಗೆ ಮೂವರು ಮಕ್ಕಳನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಷೇರುದಾರರ ಅನುಮೋದನೆ ಅಗತ್ಯವಿದೆ.ಆದರೆ, ನಿರ್ದೇಶಕ ಸ್ಥಾನಕ್ಕೆ ಅನಂತ್ ಅಂಬಾನಿ ನೇಮಕಕ್ಕೆ ವೋಟ್ ಮಾಡದಂತೆ ಪ್ರಾಕ್ಸಿ ಅಡ್ವೈಸರಿ ಸಂಸ್ಥೆ ಐಐಎಎಸ್ ಷೇರುದಾರರಿಗೆ ಸಲಹೆ ನೀಡಿದೆ. 

IiAS tells investors to vote against Anants appointment on RIL board anu
Author
First Published Oct 12, 2023, 4:07 PM IST

ಮುಂಬೈ (ಅ.12): ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ನೇಮಕಕ್ಕೆ ಅಡ್ಡಿಯೊಂದು ಎದುರಾಗಿದೆ. ಅನಂತ್ ಅಂಬಾನಿ ನೇಮಕಕ್ಕೆ ಅನುಮೋದನೆ ನೀಡದಂತೆ ಪ್ರಾಕ್ಸಿ ಅಡ್ವೈಸರಿ ಸಂಸ್ಥೆ ಐಐಎಎಸ್ ಷೇರುದಾರರಿಗೆ ಸಲಹೆ ನೀಡಿದೆ. ಇದಕ್ಕೆ ಕಾರಣವನ್ನೂ ಕೂಡ ನೀಡಿರುವ ಐಐಎಎಸ್, ಅನಂತ್ ವಯಸ್ಸು ಹಾಗೂ ಅನುಭವ ಕಡಿಮೆಯಿದ್ದು,ಇದು ವೋಟಿಂಗ್ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ಹೇಳಿದೆ. ಆದರೆ, ಮುಖೇಶ್ ಅಂಬಾನಿ ಅವರ ಹಿರಿಯ ಪುತ್ರ ಆಕಾಶ್ ಅಂಬಾನಿ ಹಾಗೂ ಪುತ್ರಿ ಇಶಾ ಅಂಬಾನಿ ನೇಮಕಕ್ಕೆ ಈ ಸಂಸ್ಥೆ ಈಗಾಗಲೇ ಅನುಮೋದನೆ ನೀಡಿದೆ.  ಮುಖೇಶ್ ಅಂಬಾನಿ ತಮ್ಮ ಉದ್ಯಮ ಸಾಮ್ರಾಜ್ಯವನ್ನು ಮಕ್ಕಳಿಗೆ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಇದರ ಭಾಗವಾಗಿಯೇ ಈಗಾಗಲೇ ಮೂವರು ಮಕ್ಕಳಿಗೆ ರಿಲಯನ್ಸ್ ಇಂಡಸ್ಟ್ರೀಸ್ ನ  ವಿವಿಧ ಜವಾಬ್ದಾರಿಗಳನ್ನು ಹಂಚಿದ್ದಾರೆ. ಇನ್ನು ಈ ಮೂವರನ್ನು ಕೂಡ ರಿಲಯನ್ಸ್ ಇಂಡಸ್ಟ್ರೀಸ್ ಆಡಳಿತ ಮಂಡಳಿಗೆ ನೇಮಕ ಮಾಡಲು ಬಯಸಿದ್ದಾರೆ ಕೂಡ.

ಆರ್ ಐಎಲ್ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಆಕಾಶ್ ಅಂಬಾನಿ, ಇಶಾ ಅಂಬಾನಿ ಹಾಗೂ ಅನಂತ್ ಅಂಬಾನಿ ಅವರ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಇದಕ್ಕೆ ಷೇರುದಾರರ ಅನುಮೋದನೆ ಕೂಡ ಅಗತ್ಯ. ಆಕಾಶ್ ಹಾಗೂ ಇಶಾ ನೇಮಕಕ್ಕೆ ಐಐಎಎಸ್ ಪ್ರಾಕ್ಸಿ ಅಡ್ವೈಸರಿ ಯಾವುದೇ ತಕರಾರು ತೆಗೆದಿಲ್ಲ. ಆದರೆ, ಅನಂತ್ ನೇಮಕಕ್ಕೆ ವೋಟಿಂಗ್ ಮಾಡದಂತೆ ತಿಳಿಸಿದೆ. ಇದಕ್ಕೆ ಕಾರಣವನ್ನು ಕೂಡ ಈ ಸಂಸ್ಥೆ ನೀಡಿದೆ. ತನ್ನ ಶಿಫಾರಸ್ಸಿನಲ್ಲಿ ಐಐಎಎಸ್ ಅನಂತ್ ಅಂಬಾನಿಗೆ 28 ವರ್ಷ ವಯಸ್ಸಾಗಿದ್ದು, ನಾನ್ ಎಕ್ಸಿಕ್ಯುಟಿವ್ , ನಾನ್ ಇಂಡಿಪೆಂಡೆಂಟ್ ನಿರ್ದೇಶಕರ ಹುದ್ದೆಗೆ ಅವರ ನೇಮಕ ನಮ್ಮ ವೋಟಿಂಗ್ ಮಾರ್ಗಸೂಚಿಗಳಿಗೆ ಸರಿ ಹೊಂದುತ್ತಿಲ್ಲ ಎಂದು ತಿಳಿಸಿದೆ. ಆದರೆ, ಮುಖೇಶ್ ಅಂಬಾನಿ ಹಿರಿಯ ಮಕ್ಕಳಾದ ಆಕಾಶ ಹಾಗೂ ಇಶಾ 31 ವಯಸ್ಸಿನವರಾಗಿದ್ದು, ಅವರ ನೇಮಕಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ತಿಳಿಸಿದೆ.

ಮುಕೇಶ್‌ ಅಂಬಾನಿ ಭಾವೀ ಬೀಗರು ಸಿಕ್ಕಾಪಟ್ಟೆ ರಿಚ್‌, ಅನಂತ್ ಅಂಬಾನಿ ಅತ್ತೆ ಶೈಲಾ ಮರ್ಚೆಂಟ್ ಆಸ್ತಿಯೆಷ್ಟು ಗೊತ್ತಾ?

ಐಐಎಎಸ್ ವೋಟಿಂಗ್ ಮಾರ್ಗಸೂಚಿಗಳ ಅನ್ವಯ ನಿರ್ದೇಶಕರಾಗಲು ಸಾಕಷ್ಟು ಅನುಭವವಿಲ್ಲದವರನ್ನು ಹೊರತುಪಡಿಸಿ ಬೇರೆ ಯಾವುದೇ ನಿರ್ದೇಶಕರ ನೇಮಕಕ್ಕೆ ವೋಟಿಂಗ್ ಮಾಡುವಂತೆ ಅದು ಶಿಫಾರಸ್ಸು ಮಾಡುತ್ತದೆ. 10 ವರ್ಷಗಳಿಗಿಂತ ಕಡಿಮೆ ಕೆಲಸದ ಅನುಭವ ಹೊಂದಿರೋರು ಹಾಗೂ 30 ವರ್ಷ ವಯಸ್ಸಿನೊಳಗಿನವರ ನೇಮಕಕ್ಕೆ ಐಐಎಎಸ್ ಶಿಫಾರಸ್ಸು ಮಾಡೋದಿಲ್ಲ. ಅನಂತ್ ಅಂಬಾನಿ ಅವರ ವಯಸ್ಸು 30 ವರ್ಷಕ್ಕಿಂತ ಕಡಿಮೆಯಿದೆ ಹಾಗೂ ಅವರಿಗೆ 10 ವರ್ಷಗಳ ಅನುಭವ ಕೂಡ ಇಲ್ಲ. ಹೀಗಾಗಿ ಐಐಎಎಸ್ ಮಾನದಂಡಗಳನ್ನು ಅವರು ಹೊಂದಿಲ್ಲ. 

ಮುಖೇಶ್ ಅಂಬಾನಿ ಭಾರತದ ನಂ.1 ಸಿರಿವಂತ; ಎರಡನೇ ಸ್ಥಾನಕ್ಕೆ ಕುಸಿದ ಅದಾನಿ; ಇಲ್ಲಿದೆ ಹುರೂನ್ ಇಂಡಿಯಾ -2023 ಪಟ್ಟಿ

ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿಗಳಿಗೆ ನಿರ್ದೇಶಕರ ನೇಮಕಕ್ಕೆ ಅಥವಾ ಇನ್ಯಾವುದೋ ಪ್ರಮುಖ ನಿರ್ಧಾರ ಕೈಗೊಳ್ಳಲು ಷೇರುದಾರರ ಅನುಮೋದನೆ ಪಡೆಯೋದು ಅಗತ್ಯ. ಇದಕ್ಕೆ ಷೇರುದಾರರಿಂದ ವೋಟಿಂಗ್ ಕೂಡ ನಡೆಯುತ್ತದೆ. ಇಂಥ ಸಂದರ್ಭದಲ್ಲಿ ಷೇರುದಾರರು ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆ ಪ್ರಾಕ್ಸಿ ಅಡ್ವೈಸರಿ ಸಂಸ್ಥೆಗಳು ಶಿಫಾರಸು ಮಾಡುತ್ತವೆ. ವಿವಿಧ ನಿಯಮಗಳು, ಕಾನೂನು, ಕಂಪನಿ ಪರಿಸ್ಥಿತಿ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಪ್ರಾಕ್ಸಿ ಅಡ್ವೈಸರಿ ಸಂಸ್ಥೆಗಳು ಶಿಫಾರಸು ಮಾಡುತ್ತವೆ. ಆದರೆ, ಇತರ ಕೆಲವು ಪ್ರಾಕ್ಸಿ ಅಡ್ವೈಸರಿ ಸಂಸ್ಥೆಗಳು ಅನಂತ್ ಅಂಬಾನಿ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಮೂವರನ್ನು ಕೂಡ ನಿರ್ದೇಶಕರನ್ನಾಗಿ ನೇಮಕ ಮಾಡಬಹುದು ಎಂಬ ಸಲಹೆ ನೀಡಿವೆ.

ಇನ್ನು ಷೇರುದಾರರು ಪೋಸ್ಟರ್ ಬ್ಯಾಲೆಟ್ ಮೂಲಕ ವೋಟಿಂಗ್ ನಡೆಸಬಹುದು. 2023ರ ಸೆಪ್ಟೆಂಬರ್ 27ರಂದೇ ಇ-ವೋಟಿಂಗ್ ಪ್ರಾರಂಭವಾಗಲಿದ್ದು, ಅಕ್ಟೋಬರ್ 26ಕ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 


 

Follow Us:
Download App:
  • android
  • ios