ಪಾನ್, ಆಧಾರ್ ನೀಡದ ಉದ್ಯೋಗಿಗಳ ಜೇಬಿಗೆ ಕತ್ತರಿ!
ಪಾನ್, ಆಧಾರ್ ನೀಡದ ಉದ್ಯೋಗಿಗಳ ಜೇಬಿಗೆ ಕತ್ತರಿ!| 2.5 ಲಕ್ಷಕ್ಕಿಂತಲೂ ಹೆಚ್ಚಿರುವ ಉದ್ಯೋಗಿಗಳು ಪಾನ್ ಮತ್ತು ಆಧಾರ್ ಮಾಹಿತಿಯನ್ನು ಒದಗಿಸದೇ ಇದ್ದರೆ ಕ್ರಮ
ನವದೆಹಲಿ[ಜ.25]: ವಾರ್ಷಿಕ ಆದಾಯ 2.5 ಲಕ್ಷಕ್ಕಿಂತಲೂ ಹೆಚ್ಚಿರುವ ಉದ್ಯೋಗಿಗಳು ಪಾನ್ ಮತ್ತು ಆಧಾರ್ ಮಾಹಿತಿಯನ್ನು ಒದಗಿಸದೇ ಇದ್ದರೆ ಸರ್ಕಾರ ಜಾರಿಗೊಳಿಸಿರುವ ನೂತನ ನಿಯಮದಂತೆ ವೇತನದ ಶೇ.20ರಷ್ಟುಹಣ ಟಿಡಿಎಸ್ ರೂಪದಲ್ಲಿ ಕಡಿತವಾಗಲಿದೆ.
ವೋಟರ್ ಐಡಿಗೆ ಆಧಾರ್ ಲಿಂಕ್ ಕಡ್ಡಾಯ
ಕೇಂದ್ರೀಯ ನೇರ ತೆರಿಗೆ ಮಂಡಳಿ ನೂತನ ನಿಯಮವೊಂದನ್ನು ರೂಪಿಸಿದ್ದು, ಜ.16ರಿಂದ ಈ ನಿಯಮ ಜಾರಿಗೆ ಬಂದಿದೆ. ಅದರಂತೆ ವಾರ್ಷಿಕ 2.5 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರು ಪಾನ್ ಮತ್ತು ಆಧಾರ್ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಒಂದು ವೇಳೆ ಉದ್ಯೋಗಿಗಳ ಆದಾಯ 2.5 ಲಕ್ಷಕ್ಕಿಂತಲೂ ಕಡಿಮೆ ಇದ್ದರೆ ತೆರಿಗೆ ಕಡಿತಗೊಳ್ಳುವುದಿಲ್ಲ. ಟಿಡಿಎಸ್ ಪಾವತಿ ಮತ್ತು ವೇತನದಾರರ ಆದಾಯದ ಕಣ್ಣಿಡಲು ಈ ನಿಯಮವನ್ನು ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರಕ್ಕೆ ನೇರ ತೆರಿಗೆ ಶಾಕ್!
2020ರ ಮಾರ್ಚ್ 31ಕ್ಕೆ ಮುಕ್ತಾಯಗೊಳ್ಳಲಿರುವ ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆ (ಕಾರ್ಪೋರೆಟ್ ಮತ್ತು ಆದಾಯ ತೆರಿಗೆ) ಸಂಗ್ರಹದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಬಹುತೇಕ ನಿಶ್ಚಿತ ಎನ್ನಲಾದ ಈ ಬೆಳವಣಿಗೆ ಖಚಿತಪಟ್ಟಲ್ಲಿ ಅದು ಕಳೆದ 2 ದಶಕಗಳಲ್ಲೇ ಮೊದಲ ಬಾರಿಗೆ ನೇರ ತೆರಿಗೆ ಸಂಗ್ರಹದಲ್ಲಿನ ಇಳಿಕೆಯಾಗಲಿದೆ ಎಂದು ವರದಿಯೊಂದು ಹೇಳಿದೆ. ಸರ್ಕಾರದ ವಾರ್ಷಿಕ ಆದಾಯ ನಿರೀಕ್ಷೆಯಲ್ಲಿ ಶೇ.80ರಷ್ಟುಪಾಲು ನೇರ ತೆರಿಗೆಯದ್ದೇ ಆಗಿರುವ ಕಾರಣ, ಸಹಜವಾಗಿಯೇ ಈ ಬೆಳವಣಿಗೆ ವಿವಿಧ ಯೋಜನೆಗಳ ಜಾರಿಗೆ ತೆರಿಗೆ ಸಂಗ್ರಹವನ್ನೇ ನಂಬಿಕೊಂಡಿರುವ ಕೇಂದ್ರ ಸರ್ಕಾರಕ್ಕೆ ಭಾರೀ ಹೊಡೆತ ನೀಡುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಆಧಾರ್ ಜೊತೆ ಪಡಿತರ ಚೀಟಿ ಲಿಂಕ್‌ಗೆ ಕಡ್ಡಾಯ