ಪತ್ನಿಯ ಹೆಸರಿನಲ್ಲಿ ಗಂಡನ ಆದಾಯದಿಂದ ಖರೀದಿಸಿದ ಆಸ್ತಿ, ಕುಟುಂಬದ ಆಸ್ತಿ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಪತ್ನಿಗೆ ಸ್ವತಂತ್ರ ಆದಾಯವಿಲ್ಲದಿದ್ದರೆ, ಆ ಆಸ್ತಿಯಲ್ಲಿ ಗಂಡನಿಗೂ ಪಾಲು ಇರುತ್ತದೆ. ಪತ್ನಿಯ ಸ್ವಂತ ಆದಾಯದ ಆಸ್ತಿ ಮಾತ್ರ ಆಕೆಯ ಏಕೈಕ ಸ್ವತ್ತು. ಗಂಡನ ಜೀವಿತಾವಧಿಯಲ್ಲಿ ಪತ್ನಿಗೆ ಆತನ ಸ್ವಯಾರ್ಜಿತ ಆಸ್ತಿಯ ಮೇಲೆ ಹಕ್ಕಿಲ್ಲ. ಉಯಿಲು ಇಲ್ಲದಿದ್ದರೆ, ಗಂಡನ ಮರಣಾನಂತರವೂ ಪತ್ನಿಗೆ ಆತನ ಆಸ್ತಿಯಲ್ಲಿ ಪಾಲು ಇರುವುದಿಲ್ಲ.

ಭಾರತ (India)ದಲ್ಲಿ ಅನೇಕರು ತಮ್ಮ ಹೆಂಡತಿ (wife)ಯ ಹೆಸರಿನಲ್ಲಿ ಆಸ್ತಿಯನ್ನು ಖರೀದಿಸುತ್ತಾರೆ. ಮುದ್ರಾಂಕ ಶುಲ್ಕ (stamp duty) ಸೇರಿದಂತೆ ಕೆಲ ವಿನಾಯಿತಿ ಸಿಗೋದ್ರಿಂದ, ಪತ್ನಿ ಹೆಸರಿನಲ್ಲಿ ಆಸ್ತಿ ಮಾಡಿ ಜನರು ಕೆಲ ಆರ್ಥಿಕ ಪ್ರಯೋಜನಗಳನ್ನು ಕೂಡ ಪಡೆಯುತ್ತಾರೆ. ಇತ್ತೀಚೆಗೆ, ಅಲಹಾಬಾದ್ ಹೈಕೋರ್ಟ್ (Allahabad High Court) ಒಂದು ಪ್ರಮುಖ ಪ್ರಕರಣದಲ್ಲಿ ಪತ್ನಿಯ ಹೆಸರಿನಲ್ಲಿ ಖರೀದಿಸಿದ ಆಸ್ತಿ ಯಾರ ಆಸ್ತಿ ಎಂಬ ಬಗ್ಗೆ ಸ್ಪಷ್ಟನೆ ನೀಡಿದೆ. ಕೋರ್ಟ್ ನೀಡಿದ ಈ ನಿರ್ಧಾರವು ಆಸ್ತಿ ವಿವಾದಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು ನಿಮಗೆ ಸಹಾಯಕವಾಗಬಹುದು.

ಹೆಂಡತಿಯ ಹೆಸರಿನಲ್ಲಿ ಆಸ್ತಿ ಖರೀದಿಸಿದರೆ ಅದರ ಮಾಲೀಕರು ಯಾರು? : ಅಲಹಾಬಾದ್ ಹೈಕೋರ್ಟ್ ಪ್ರಕಾರ, ಪತ್ನಿಯ ಹೆಸರಿನಲ್ಲಿ ಖರೀದಿಸಿದ ಆಸ್ತಿಯನ್ನು ಸಾಮಾನ್ಯವಾಗಿ ಕುಟುಂಬದ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಹೆಂಡತಿಗೆ ಸ್ವತಂತ್ರ ಆದಾಯದ ಮೂಲವಿಲ್ಲದಿದ್ದಾಗ, ಆಸ್ತಿಯನ್ನು ಗಂಡನ ಆದಾಯದಿಂದ ಖರೀದಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಆಸ್ತಿ ಪತ್ನಿಯ ಏಕೈಕ ಆಸ್ತಿಯಾಗಿರುವುದಿಲ್ಲ. ಬದಲಾಗಿ ಇಡೀ ಕುಟುಂಬದ ಒಡೆತನದ್ದಾಗಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಯೂಟ್ಯೂಬ್‌ನಿಂದ ಕಲಿತು ಕೋಟ್ಯಾಧಿಪತಿಯಾದ ವಿದ್ಯಾರ್ಥಿ, ಆರಂಭಿಸಿದ ಉದ್ಯಮ ಯಾವುದು

ಹಿಂದೂ ಧರ್ಮ ಮತ್ತು ಕೌಟುಂಬಿಕ ಪದ್ಧತಿಗಳ ಸಂದರ್ಭದಲ್ಲಿ, ಈ ನಿರ್ಧಾರವು ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಬಹುತೇಕ ಪುರುಷರು ತಮ್ಮ ಆದಾಯದಿಂದ ತಮ್ಮ ಹೆಂಡತಿಯ ಹೆಸರಿನಲ್ಲಿ ಆಸ್ತಿಯನ್ನು ಖರೀದಿಸುತ್ತಾರೆ. ಕುಟುಂಬದ ಹಿತಾಸಕ್ತಿಗಳನ್ನು ರಕ್ಷಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 114 ರ ಅಡಿಯಲ್ಲಿ ಅಲಹಾಬಾದ್ ಹೈಕೋರ್ಟ್ ಇದನ್ನು ಕುಟುಂಬದ ಆಸ್ತಿ ಎಂದು ಘೋಷಿಸಿದೆ.

ಆಸ್ತಿಯ ಮೇಲೆ ಸಹ-ಮಾಲೀಕತ್ವದ ಹಕ್ಕು : ಅಲಹಾಬಾದ್ ಹೈಕೋರ್ಟ್ ಗೆ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಅರ್ಜಿದಾರರಾದ ಸೌರಭ್ ಗುಪ್ತಾ ತಮ್ಮ ತಾಯಿಯ ಹೆಸರಿನಲ್ಲಿ ಖರೀದಿಸಿದ ಆಸ್ತಿಯಲ್ಲಿ ಪಾಲು ಕೇಳಿದ್ದರು. ತನ್ನ ತಂದೆ ಆ ಆಸ್ತಿಯನ್ನು ಖರೀದಿಸಿದ್ದಾರೆ ಮತ್ತು ಸಹ-ಮಾಲೀಕನಾಗಿ ತನ್ನ ಹಕ್ಕುಗಳನ್ನು ಬಯಸುತ್ತಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದ್ರ ವಿಚಾರಣೆ ನಡೆಸಿದ ಕೋರ್ಟ್, ಪತ್ನಿಯ ಆದಾಯದಿಂದ ಆಸ್ತಿಯನ್ನು ಖರೀದಿಸಲಾಗಿದೆ ಎಂಬುದು ಸಾಬೀತಾಗದ ಹೊರತು, ಪತಿ ಪತ್ನಿಯ ಹೆಸರಿನಲ್ಲಿ ಖರೀದಿಸಿದ ಆಸ್ತಿಯನ್ನು ಕುಟುಂಬದ ಆಸ್ತಿ ಎಂದು ಪರಿಗಣಿಸಲಾಗುತ್ತದೆ ಎಂದಿದೆ. 

ರೆಪೋ ದರ ಇಳಿಕೆಯಾಗ್ತಿದ್ದಂತೆ ಸಣ್ಣ ಉಳಿತಾಯದಾರರಿಗೆ ಶಾಕ್, ಕಡಿಮೆ ಆಗಲಿದ್ಯಾ ಬಡ್ಡಿ ?

ಹೆಂಡತಿಯ ಹಕ್ಕಿನ ಮಿತಿ : ಪತಿ ಜೀವಂತವಾಗಿರುವವರೆಗೆ ಪತ್ನಿಗೆ ಪತಿಯ ಸ್ವಯಂ ಸಂಪಾದಿಸಿದ ಆಸ್ತಿಯ ಮೇಲೆ ಯಾವುದೇ ಹಕ್ಕಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಹಕ್ಕನ್ನು ಪತಿಯ ಮರಣದ ನಂತರ ಆನುವಂಶಿಕವಾಗಿ ಪಡೆಯುವ ಮೂಲಕ ಮಾತ್ರ ಪಡೆಯಬಹುದು. 1956 ರ ಹಿಂದೂ ಉತ್ತರಾಧಿಕಾರ ಕಾಯ್ದೆಯಡಿಯಲ್ಲಿ ಗಂಡನ ಪೂರ್ವಜರ ಆಸ್ತಿಯಲ್ಲಿ ಹೆಂಡತಿಗೆ ಪಾಲು ಸಿಗುತ್ತದೆ. ಆಸ್ತಿಯನ್ನು ಪತ್ನಿಯ ಹೆಸರಿನಲ್ಲಿ ಖರೀದಿಸಿದರೆ, ಅದನ್ನು ಕುಟುಂಬದ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಆದ್ರೆ ಪತ್ನಿಯ ಸ್ವತಂತ್ರ ಆದಾಯದಿಂದ ಖರೀದಿಸಿದ ಆಸ್ತಿಯು ಆಕೆಯ ವೈಯಕ್ತಿಕ ಆಸ್ತಿಯಾಗಿರುತ್ತದೆ.

ಗಂಡನ ಆಸ್ತಿಯ ಮೇಲೆ ಹೆಂಡತಿಗೆ ಎಷ್ಟು ಹಕ್ಕು : ಭಾರತೀಯ ಕಾನೂನಿನ ಪ್ರಕಾರ, ಗಂಡನ ಆಸ್ತಿಯ ಮೇಲೆ ಹೆಂಡತಿಗಿರುವ ಹಕ್ಕುಗಳು ಗಂಡನ ಮರಣದ ನಂತರವೇ ಅನ್ವಯವಾಗುತ್ತವೆ. ಗಂಡನ ಉಯಿಲಿನಲ್ಲಿ ಹೆಂಡತಿಯ ಹೆಸರು ಉಲ್ಲೇಖಿಸದಿದ್ದರೆ, ಹೆಂಡತಿಗೆ ಆಸ್ತಿಯಲ್ಲಿ ಯಾವುದೇ ಪಾಲು ಸಿಗುವುದಿಲ್ಲ. ಅಲಹಾಬಾದ್ ಹೈಕೋರ್ಟ್‌ನ ಈ ತೀರ್ಪು ಆಸ್ತಿ ವಿವಾದಗಳಲ್ಲಿ ಪ್ರಮುಖ ಮಾರ್ಗದರ್ಶನವನ್ನು ನೀಡುತ್ತದೆ. ಇದು ಪತ್ನಿಯ ಹೆಸರಿನಲ್ಲಿ ಖರೀದಿಸಿದ ಆಸ್ತಿಯನ್ನು ಕೇವಲ ಆಕೆಯ ಆಸ್ತಿಯಾಗಿ ಪರಿಗಣಿಸದೆ ಕುಟುಂಬದ ಆಸ್ತಿಯಾಗಿ ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸುತ್ತದೆ. ಈ ನಿರ್ಧಾರವು ಆಸ್ತಿ ವಿವಾದಗಳಲ್ಲಿ ಪಾರದರ್ಶಕತೆಯನ್ನು ತರುವುದಲ್ಲದೆ, ಕುಟುಂಬದ ಹಕ್ಕುಗಳನ್ನು ಬಲಪಡಿಸುತ್ತದೆ.