Investment tips : ಜೆನ್ ಜೀ ಕೋಟ್ಯಾಧಿಪತಿಗಳಾಗೋದಕ್ಕೆ ಸಾಕಷ್ಟು ಅವಕಾಶ ಇದೆ. ಕೆಲ್ಸ ಸಿಕ್ಕ ತಕ್ಷಣ ಮಾಡುವ ಕೆಲ್ಸಗಳು ನಿಮ್ಮನ್ನು ಶೀಘ್ರವೇ ಮಿಲಿಯನೇರ್ ಮಾಡುತ್ತೆ. ಅದ್ರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 

2025 ಶುರುವಾಗಿ ಏಳು ತಿಂಗಳು ಕಳೆದಿದೆ. ಇನ್ನೂ ವರ್ಷ ಮುಗಿಯೋಕೆ ಐದು ತಿಂಗಳು ಬಾಕಿ ಇದೆ. ಈಗ್ಲೇ ಭವಿಷ್ಯಕ್ಕೆ ಅಗತ್ಯವಿರುವ ಮುಖ್ಯವಾದ ಕೆಲ್ಸ ಮಾಡಿದ್ರೆ ನೀವು ಕೋಟ್ಯಾಧಿಪತಿ (Billionaire) ಆಗೋದ್ರಲ್ಲಿ ಡೌಟಿಲ್ಲ. ಈಗಷ್ಟೆ ಕಾಲೇಜು ಮುಗಿಸಿ ಕೆಲ್ಸಕ್ಕೆ ಸೇರಿದ ಜೆನ್ ಜೀಗಳಿಗೆ ಬದುಕು ಕಟ್ಟಿಕೊಳ್ಳಲು ಇದು ಒಳ್ಳೆ ಟೈಂ. ಈಗಾಗಲೇ ಕೆಲ್ಸಕ್ಕೆ ಸೇರಿ 10 -20 ವರ್ಷ ಆದವರಿಗಿಂತ ನಿಮಗೆ ಕೋಟ್ಯಾಧಿಪತಿ ಆಗೋಕೆ ಹೆಚ್ಚಿನ ಟೈಂ ಹಾಗೂ ಅವಕಾಶ ಇದೆ. 2025 ನಿಮಗೆ ವಿಶೇಷ ವರ್ಷ ಅಂದ್ಕೊಳ್ಳಿ. ಈಗಿನಿಂದ್ಲೇ ನೀವು ಜವಾಬ್ದಾರಿಯುತ ಹೂಡಿಕೆ ಶುರು ಮಾಡಿದ್ರೆ ದೊಡ್ಡ ಮೊತ್ತ ಕೆಲವೇ ವರ್ಷಗಳಲ್ಲಿ ನಿಮ್ಮ ಕೈ ಸೇರುತ್ತೆ. ಜನರೇಷನ್ ಝೆಡ್ (Generation Z), 2025ರಿಂದಲೇ ಮಿಲಿಯನೇರ್ ಆಗುವತ್ತ ಮೊದಲ ಹೆಜ್ಜೆ ಇಟ್ರೆ ಒಳ್ಳೆಯದು. ನೀವು ಕೆಲ್ಸ ಮಾಡ್ತಿರಲಿ ಇಲ್ಲ ಪಾಕೆಟ್ ಮನಿ ಸಿಗ್ತಿರಲಿ. ಅದನ್ನು ಉಳಿಸೋದನ್ನು ಮೊದಲು ಕಲಿಯಿರಿ. ಉಳಿತಾಯದ ಹಣವನ್ನು ಸುರಕ್ಷಿತ ಜಾಗದಲ್ಲಿ ಹೂಡಿಕೆ ಮಾಡಿ.

ಫಸ್ಟ್ ಸ್ಯಾಲರಿಯಿಂದ್ಲೇ SIP ಶುರು ಆಗ್ಲಿ : ನಿಮ್ಗೆ ಕೆಲ್ಸ ಸಿಕ್ಕಿದೆ, ಸಂಬಳ ಬರ್ತಿದೆ ಅಂತಾದ್ರೆ ನಿಮ್ಮ ಮೊದಲ ಸಂಬಳದಿಂದ್ಲೇ ಹೂಡಿಕೆ ಯೋಜನೆ ಶುರು ಮಾಡಿ. ನೀವು ಎಸ್ ಐಪಿಯಲ್ಲಿ ಹಣ ಹೂಡಿಕೆ ಮಾಡಿ. ಬಹುತೇಕರು ಕೆಲ್ಸ ಸಿಕ್ಕ ಮೊದಲ ವರ್ಷವನ್ನು ಮೋಜಿಗೆ ಮೀಸಲಿಡ್ತಾರೆ. ಎಜುಕೇಷನ್ ಲೋನ್, ತಮ್ಮ ಅಗತ್ಯ ಅಂತ ಸಂಬಳ ಕೈನಲ್ಲಿ ನಿಲ್ಲೋದಿಲ್ಲ ಎನ್ನುವವರಿದ್ದಾರೆ. ನೀವು ಪ್ಲಾನ್ ಮಾಡಿ ಹಣ ಖರ್ಚು ಮಾಡಿದಾಗ ಸ್ವಲ್ಪ ಹಣವನ್ನು ಉಳಿಸ್ಬಹುದು. ಸಂಬಳದ ಕನಿಷ್ಠ ಮೂರನೇ ಒಂದು ಭಾಗವನ್ನು ಸೇವ್ ಮಾಡುವ ಪ್ಲಾನ್ ಮಾಡ್ಕೊಳ್ಳಿ. ಪ್ರತಿ ತಿಂಗಳು 500 ರೂಪಾಯಿಗಳನ್ನು ಎಸ್ ಐಪಿನಲ್ಲಿ ಹೂಡಿಕೆ ಮಾಡ್ತಾ ಬನ್ನಿ. ನೀವು ಹೇಗೆ ಮಾಡಿದ್ರೆ 25 -30 ವರ್ಷಗಳಲ್ಲಿ ಇದೇ ಎಸ್ ಐ ಪಿ ನಿಮ್ಮನ್ನು ಕೋಟ್ಯಾಧಿಪತಿ ಮಾಡುತ್ತೆ. ನಿಮ್ಮ ಸಂಬಳ ಸ್ವಲ್ಪ ಹೆಚ್ಚಿದ್ರೆ ನೀವು ನಿಮ್ಮ ಎಸ್ ಐಪಿ ಮೊತ್ತವನ್ನು 10,000 ರೂಪಾಯಿವರೆಗೆ ಏರಿಸಬಹುದು. ನಿಮ್ಮ ಪೋರ್ಟ್ ಫೋಲಿಯೊಗೆ ಹೆಚ್ಚು ಹಣ ಸೇರ್ತಿದ್ದಂತೆ ನೀವು ಬೇಗ ಹಾಗೆ ಹೆಚ್ಚು ಹಣ ಸೇವ್ ಮಾಡ್ಬಹುದು.

ಎಮರ್ಜೆನ್ಸಿ ಫಂಡ್ ಅಗತ್ಯ : ಇನ್ವೆಸ್ಟ್ ಮೆಂಟ್ ಮಾಡೋದನ್ನು ಎಂದಿಗೂ ಬಿಡ್ಬೇಡಿ. ಈ ಹೂಡಿಕೆಗೆ ಅಗತ್ಯ ಇರುವ ಹಣವನ್ನು ನೀವು ಎಮರ್ಜೆನ್ಸಿ ಫಂಡ್ ಗೆ ಹಾಕಿಟ್ಕೊಳ್ಳಿ. ನಿಮಗೆ ಬೋನಸ್ ಬಂದಾಗ ಇಲ್ಲ ಇನ್ಸೆಂಟಿವ್ ಬಂದಾಗ ಆ ಹಣವನ್ನು ನೀವು ಎಮೆರ್ಜೆನ್ಸಿ ಅಕೌಂಟ್ ಗೆ ಟ್ರಾನ್ಸ್ಫರ್ ಮಾಡಿ. ಆಗ ಪ್ರತಿ ತಿಂಗಳು ಸಮಸ್ಯೆ ಆಗೋದಿಲ್ಲ. ವರ್ಷಕ್ಕೆ ಬೇಕಾಗುವಷ್ಟು ಹಣ, ಎಮರ್ಜೆನ್ಸಿ ಫಂಡ್ ನಲ್ಲಿ ಇರೋದ್ರಿಂದ ಹೂಡಿಕೆ ಬ್ರೇಕ್ ಆಗೋದಿಲ್ಲ.

ಮೊದಲು ನಿಮ್ಮ ಸಂಬಳದ ಮೂರನೇ ಒಂದು ಭಾಗವನ್ನು ನೀವು ಉಳಿಸ್ಬೇಕು. ಆ ಉಳಿತಾಯದಲ್ಲಿ ಅರ್ಧ ಭಾಗ ಮಾಡಿ. ಒಂದು ಅರ್ಧ ಭಾಗವನ್ನು ಲಾಂಗ್ ಟರ್ಮ್ ಯೋಜನೆಯಲ್ಲಿ ಸೇವ್ ಮಾಡಿ. ಉಳಿದ ಅರ್ಧ ಭಾಗದಲ್ಲಿ ಎಮರ್ಜೆನ್ಸಿ ಫಂಡ್ ನಲ್ಲಿ ಇಡಿ. ಉಳಿತಾಯ ಹಾಗೂ ಹೂಡಿಕೆ ಬಂಡವಾಳ ಎರಡೂ ಸಮನಾಗಿರುವ ಕಾರಣ ನೀವು ಶೀಘ್ರದಲ್ಲೇ ಕೋಟ್ಯಾಧಿಪತಿ ಆಗ್ಬಹುದು. ದುಡಿಮೆ ಶುರುವಾದ ತಕ್ಷಣ ನೀವು ಉಳಿತಾಯಕ್ಕೆ ಪ್ಲಾನ್ ಮಾಡಿದ್ರೆ ಮಾತ್ರ ಕೋಟ್ಯಾಧಿಪತಿ ಕನಸು ಬೇಗ ಈಡೇರಲು ಸಾಧ್ಯ.