ನವದೆಹಲಿ [ಜೂ.23] ವಿವಿಧ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಅಂಥವರು ವಿದೇಶ ಸೇರಿಕೊಂಡಿದ್ದಾರೆ. ಈ ನಡುವೆ ಐಸಿಐಸಿಯ ಬ್ಯಾಂಕ್ ಕಡೆಯಿಂದಲೂ ಒಂದು ಶಾಕಿಂಗ್ ನ್ಯೂಸ್ ಬಂದಿದೆ.

ಐಸಿಐಸಿಐ ಬ್ಯಾಂಕ್ ಗೆ ಸಂಬಂಧಿಸಿದ 31 ಖಾತೆಗಳಿಂದ 6 ಸಾವಿರ ಕೋಟಿಗೂ ಅಧಿಕ ರೂಪಾಯಿ ಅವ್ಯವಹಾರವಾಗಿದೆ ಎಂಬ ದೂರು ಬಂದಿದೆ.

ಬ್ಯಾಂಕ್‌ಗೆ ಸುಳ್ಳು ದಾಖಲೆ ನೀಡಿ ಸಾಲ ಪಡೆದುಕೊಳ್ಳಲಾಗಿದ್ದು ಹಣ ವಸೂಲಿಯಾಗುವುದು ಅನುಮಾನ ಎಂಬ ಹೇಳಿಕೆ ನಿಡುವ ಪತ್ರವೊಮದು ಬ್ಯಾಂಕ್ ಅಧಿಕಾರಿಗಳ ಕೈಗೆ ಸಿಕ್ಕಿದೆ. ಸತ್ಯಾಸತ್ಯತೆಯ ಪಾರಮರ್ಶೆ  ಮಾಡಿ ಯಾವ ಖಾತೆ ಅಡಿಟ್ ಸಮಿತಿಯ ನಿರ್ದೇಶನದ ಅನ್ವಯ ಮುಂದುವರಿಯಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.