ಹೊಸ ನೋಟು ರವಾನಿಸಿದ ವಾಯುಪಡೆ ಬಿಲ್ ಎಷ್ಟು?

IAF raised bills of Rs 29.41 cr to ferry currency notes post-demonetisation: RTI
Highlights

ಹೊಸ ನೋಟು ರವಾನಿಸಿದ ವಾಯುಪಡೆ ಬಿಲ್ ಎಷ್ಟು?

ಬಿಕ್ಕಟ್ಟಿನ ಸಂದರ್ಭದಲ್ಲಿ ನೊಟು ರವಾನಿಸಿದ್ದ ವಾಯುಪಡೆ

ವಾಯುಪಡೆಯ ಹೆಲಿಕಾಪ್ಟರ್ ಬಳಸಿದ್ದ ಕೇಂದ್ರ ಸರ್ಕಾರ

ಬರೋಬ್ಬರಿ  29.41 ಕೋಟಿ ರೂಪಾಯಿ ಬಿಲ್ 

ನವದೆಹಲಿ(ಜು.8): 1000, 500 ರೂ ಹಳೆಯ ನೋಟು ನಿಷೇಧದ ನಂತರ ದೇಶಾದ್ಯಂತ ನಗದು ಬಿಕ್ಕಟ್ಟು ಉಂಟಾದಾಗ, ಕೇಂದ್ರ ಸರ್ಕಾರ ನಗದು ರವಾನೆಗಾಗಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡಿಕೊಂಡಿತ್ತು. 

ತುರ್ತಾಗಿ ದೇಶಾದ್ಯಂತ ನಗದು ರವಾನೆ ಮಾಡಲು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಗಳನ್ನು ಬಳಸಿಕೊಳ್ಳಲಾಗಿತ್ತು. ಇದೀಗ ಭಾರತೀಯ ವಾಯುಪಡೆ ತನ್ನ ಸೇವೆಗೆ ಬರೊಬ್ಬರಿ 29.41 ಕೋಟಿ ರೂಪಾಯಿ ಬಿಲ್ ನೀಡಿದೆ. 

ಹೊಸ 2000, 500 ರೂಪಾಯಿ ಮುಖಬೆಲೆಯ ನೋಟುಗಳನ್ನು ದೇಶಾದ್ಯಂತ ವೇಗವಾಗಿ ತಲುಪಿಸಲು ವಾಯುಪಡೆಯ ಸಿ-17,  ಸಿ-130 ಜೆ ಸೂಪರ್ ಹರ್ಕ್ಯುಲಸ್ ಹೆಲಿಕಾಫ್ಟರ್ ಗಳನ್ನು ಬಳಕೆ ಮಾಡಲಾಗಿತ್ತು. ಈ ಕುರಿತು ಆರ್‌ಟಿಐ ಮೂಲಕ ಮಾಹಿತಿ ಕೇಳಲಾಗಿತ್ತು,  91 ಟ್ರಿಪ್ ಮೂಲಕ ಹೊಸ 2000, 500 ರೂಪಾಯಿ ಮುಖಬೆಲೆಯ ನೋಟುಗಳನ್ನು ತಲುಪಿಸಲಾಗಿತ್ತು. ಇದಕ್ಕಾಗಿ 29.41 ಕೋಟಿ ರೂಪಾಯಿ ಬಿಲ್‌ನ್ನು ವಾಯುಪಡೆ ನೀಡಿದೆ ಎಂದು ಆರ್‌ಟಿಐ ಮಾಹಿತಿ ಮೂಲಕ ಬಹಿರಂಗಗೊಂಡಿದೆ.
 
ವಾಯುಪಡೆ ನೋಟು ಸಾಗಣೆ ಮಾಡಿದ್ದಕ್ಕಾಗಿ ಸರ್ಕಾರಿ ಸ್ವಾಮ್ಯದ ಸೆಕ್ಯುರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್ ಗೆ ಒಟ್ಟು 29.41 ಕೋಟಿ ರೂಪಾಯಿ ಬಿಲ್ ನೀಡಿದೆ ಎಂದು ಆರ್ ಟಿಐ ಗೆ ಪ್ರತಿಕ್ರಿಯೆ ನೀಡಲಾಗಿದೆ.

loader