ಅಬ್ಬಾ! ಈ ಮಹಿಳೆ ಕಟ್ಟಿದ ಆದಾಯ ತೆರಿಗೆ ಎಷ್ಟು ಗೊತ್ತಾ?:

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Jul 2018, 4:37 PM IST
Hyderabad techie highest taxpayer with Rs 9 crore in Telangana, Andhra Pradesh
Highlights

ಬರೋಬ್ಬರಿ 9 ಕೋಟಿ ರೂ. ತೆರಿಗೆ ಕಟ್ಟಿದ ಮಹಿಳೆ

ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲೇ ಅತ್ಯಧಿಕ

30 ಕೋಟಿ ರೂ. ಆದಾಯಕ್ಕೆ 9 ಕೋಟಿ ರೂ. ತೆರಿಗೆ

ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತರ ಮಾಹಿತಿ

ಹೈದರಾಬಾದ್(ಜು.24): ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದ್ ಮೂಲದ ಮಹಿಳೆ, 2017-18ರ ಆರ್ಥಿಕ ವರ್ಷದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ವೈಯಕ್ತಿಕ ತೆರಿಗೆದಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಒಟ್ಟು 30 ಕೋಟಿ ರೂ. ಆದಾಯಕ್ಕೆ 9 ಕೋಟಿ ರೂ. ತೆರಿಗೆಯನ್ನು ಈ ಮಹಿಳೆ ಕಟ್ಟಿದ್ದಾರೆ. ಸಾಂಸ್ಥಿಕ ವಲಯದಲ್ಲಿ 2,259 ಕೋಟಿ ರೂ. ತೆರಿಗೆ ಕಟ್ಟಿರುವ ರಾಷ್ಟ್ರೀಯ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್ (ಎನ್ಎಂಡಿಸಿ) ಅತ್ಯಧಿಕ ತೆರಿಗೆ ಕಟ್ಟಿರುವ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಉತ್ಪಾದನಾ ಕ್ಷೇತ್ರವು 4,924 ಕೋಟಿ ರೂ. ತೆರಿಗೆ ಪಾವತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಿಗೆ ಸೇರಿದೆ. ಇವೆರಡೂ ಕ್ಷೇತ್ರಗಳು ಒಟ್ಟು 1,645 ಕೋಟಿ ರೂ. ಆದಾಯ ತೆರಿಗೆ ಪಾವತಿಸಿವೆ ಎಂಧು ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತ ಎಸ್ ಪಿ ಚೌಧರಿ ತಿಳಿಸಿದ್ದಾರೆ.

loader