Atal Pension Yojana: ಪತಿ, ಪತ್ನಿ ಪ್ರತ್ಯೇಕ ಖಾತೆ ತೆರೆದ್ರೆ ಸಿಗುತ್ತೆ ಮಾಸಿಕ 10 ಸಾವಿರ ರೂ. ಪಿಂಚಣಿ
ಕೆಲಸದೊತ್ತಡ, ವರ್ತಮಾನದ ಕಮೀಟ್ ಮೆಂಟ್ ಗಳು ಭವಿಷ್ಯದ ಭದ್ರತೆಯ ಕುರಿತ ಆಲೋಚನೆಗಳನ್ನು ಮರೆಸಬಾರದು. ಇಂದಿನ ಜೊತೆ ನಾಳೆಯ ನೆಮ್ಮದಿಯ ಬಗ್ಗೆಯೂ ಯೋಚಿಸಬೇಕು. ಹೀಗಾಗಿ ಅಟಲ್ ಪಿಂಚಣಿ ಯೋಜನೆ ಬಗ್ಗೆ ಈ ಮಾಹಿತಿಗಳನ್ನು ತಿಳಿದಿರಿ.
Business Desk: ಬದುಕು (Life) ಯಾವಾಗ ಬೇಕಾದ್ರೂ ಎಲ್ಲಿ ಬೇಕಾದ್ರೂ ತಿರುವು ಪಡೆದುಕೊಳ್ಳಬಹುದು. ಹೀಗಾಗಿ ನಾಳೆಯ ಜೀವನದ ಬಗ್ಗೆ ಇಂದು ಯೋಚಿಸೋದು ಅಗತ್ಯ. ಅದ್ರಲ್ಲೂ ಉದ್ಯೋಗದಿಂದ ನಿವೃತ್ತಿ(Retirement) ಪಡೆದ ಬಳಿಕ ಜೀವನ ನಿರ್ವಹಣೆ ಹೇಗೆ ಎಂಬ ಬಗ್ಗೆ ಕೆಲ್ಸ ಸಿಕ್ಕಿದ ದಿನವೇ ಯೋಚಿಸೋದು ಉತ್ತಮ. ಇನ್ನು ನೀವು ವಿವಾಹಿತರಾಗಿದ್ದು, ನಿವೃತ್ತಿ ನಂತರದ ಬದುಕಿಗೆ ಪ್ಲ್ಯಾನ್ ಮಾಡುತ್ತಿದ್ರೆ ಅಟಲ್ ಪಿಂಚಣಿ ಯೋಜನೆಯಲ್ಲಿ (Atal Pension Yojana)ಹೂಡಿಕೆ(Invest) ಮಾಡೋ ಬಗ್ಗೆ ಯೋಚಿಸಿ. ಈ ಯೋಜನೆಯಲ್ಲಿ ಹೂಡಿಕೆ(Invest) ಮಾಡೋದ್ರಿಂದ ನಿಮ್ಮ ಹಣ ಸುರಕ್ಷಿತವಾಗಿರೋ ಜೊತೆ ಉತ್ತಮ ರಿಟರ್ನ್ಸ್ (Returns) ಕೂಡ ಸಿಗುತ್ತದೆ.
ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ (APY)ಎರಡು ಪ್ರತ್ಯೇಕ ಖಾತೆಗಳನ್ನು ತೆರೆಯೋ ಮೂಲಕ ಪತಿ (Husband) ಹಾಗೂ ಪತ್ನಿ (Wife)ಮಾಸಿಕ (Monthly)ಒಟ್ಟು 10,000ರೂ. ಪಿಂಚಣಿ(Pension) ಪಡೆಯಬಹುದು. ಉದ್ಯೋಗಸ್ಥ ದಂಪತಿಗಳಾಗಿದ್ರೆ ಈ ಯೋಜನೆಯಲ್ಲಿ ಮಾಡಿದ ಹೂಡಿಕೆಗೆ ಆದಾಯ ತೆರಿಗೆ(Income Tax) ವಿನಾಯ್ತಿ (Concession) ಪಡೆಯಲು ಅವಕಾಶವಿದೆ.
Official Documents : ವ್ಯಕ್ತಿಯೊಬ್ಬನ ಸಾವಿನ ಬಳಿಕ ಆಧಾರ್, ಪಾನ್ ಕಾರ್ಡ್ ಏನಾಗುತ್ತೆ ಗೊತ್ತಾ?
ಅಸಂಘಟಿತ ವಲಯದ ನೌಕರರು ಭವಿಷ್ಯದ ಸುರಕ್ಷತೆಗಾಗಿ ಹೂಡಿಕೆ ಮಾಡೋದನ್ನು ಉತ್ತೇಜಿಸಲು ಅಂಟಲ್ ಪಿಂಚಣಿ ಯೋಜನೆಯನ್ನು 2015ರಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿತು. ಆದ್ರೆ ಪ್ರಸ್ತುತ 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ಪ್ರಜೆ ಅಟಲ್ ಪಿಂಚಣಿ ಯೋಜನೆಯಲ್ಲಿ ಹಣ ತೊಡಗಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ನೀವು ಕೂಡ ಈ ಯೋಜನೆಯಲ್ಲಿ ಹಣ ತೊಡಗಿಸಲು ಯೋಚಿಸಬಹುದು. ಒಂದು ವೇಳೆ ನೀವು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಈಗಾಗಲೇ ಖಾತೆ ಹೊಂದಿದ್ರೆ ಅಟಲ್ ಪಿಂಚಣಿ ಯೋಜನೆಯಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು. 60 ವರ್ಷವಾದ ಬಳಿಕ ಹೂಡಿಕೆದಾರರು ಈ ಯೋಜನೆಯಡಿಯಲ್ಲಿ ಪಿಂಚಣಿ ಪಡೆಯಲು ಪ್ರಾರಂಭಿಸುತ್ತಾರೆ.
ಈ ಯೋಜನೆ ಪ್ರಯೋಜನಗಳೇನು?
ಹೂಡಿಕೆಯನ್ನು ಆಧರಿಸಿ ಹೂಡಿಕೆದಾರರು (Investors) ಮಾಸಿಕ 1,000ರೂ. ಅಥವಾ 2,000ರೂ. ಅಥವಾ 3,000ರೂ. ಅಥವಾ 4,000ರೂ. ಅಥವಾ ಗರಿಷ್ಠ 5,000ರೂ. ಪಿಂಚಣಿ ಪಡೆಯುತ್ತಾರೆ. ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಕಡ್ಡಾಯ. ಹೂಡಿಕೆದಾರರು ಈ ಯೋಜನೆಯಡಿಯಲ್ಲಿ ಎಷ್ಟು ಬೇಗ ಹೂಡಿಕೆ ಮಾಡುತ್ತಾರೋ ಅಷ್ಟು ಹೆಚ್ಚು ಪ್ರಯೋಜನ ಗಳಿಸುತ್ತಾರೆ. ಅಂದ್ರೆ ಬೇಗ ಹೂಡಿಕೆ ಮಾಡಿದಷ್ಟೂ ಮಾಸಿಕ ಕಂತಿನ ಮೊತ್ತ ತಗ್ಗುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿ 18ನೇ ವಯಸ್ಸಿನಲ್ಲಿ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ರೆ 60 ವರ್ಷ ವಯಸ್ಸಿನ ಬಳಿಕ ಆತ ಮಾಸಿಕ ಕೇವಲ 210ರೂ. ಪಾವತಿಸಿ 5000ರೂ. ಪಿಂಚಣಿ ಪಡೆಯಬಹುದು. ಇನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಆದಾಯ ತೆರಿಗೆ ಕಾಯ್ದೆ (Income Tax Act) ಸೆಕ್ಷನ್ 80ಸಿ ಅಡಿಯಲ್ಲಿ 1.5ಲಕ್ಷ ರೂ. ತನಕ ತೆರಿಗೆ ವಿನಾಯ್ತಿ ಪಡೆಯಲು ಕೂಡ ಅವಕಾಶವಿದೆ.
Changes From January 1: ಇಂದಿನಿಂದ ಈ 6 ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ
10,000ರೂ. ಪಿಂಚಣಿ ಪಡೆಯೋದು ಹೇಗೆ?
30 ವರ್ಷ ವಯಸ್ಸಿನೊಳಗಿನ ಪತಿ ಹಾಗೂ ಪತ್ನಿ ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ 2 ಪ್ರತ್ಯೇಕ ಖಾತೆಗಳನ್ನು ತೆರೆಯೋ ಮೂಲಕ 60 ವರ್ಷದ ಬಳಿಕ ಒಟ್ಟು ಮಾಸಿಕ 10,000 ರೂ. ಪಿಂಚಣಿ ಪಡೆಯಬಹುದು. ಈ ಪ್ರಯೋಜನ ಪಡೆಯಲು ಅವರು ಪ್ರತಿ ತಿಂಗಳು ಪ್ರತಿ ಖಾತೆಯಲ್ಲಿ 577ರೂ. ಹೂಡಿಕೆ ಮಾಡಬೇಕು. ಒಂದು ವೇಳೆ ಪತಿ ಹಾಗೂ ಪತ್ನಿ 35 ವರ್ಷ ವಯಸ್ಸಿವರಾಗಿದ್ರೆ ಅವರು ಪ್ರತಿ ಖಾತೆಯಲ್ಲಿ ಮಾಸಿಕ 902ರೂ. ಹೂಡಿಕೆ ಮಾಡಿದ್ರೆ 60 ವರ್ಷದ ಬಳಿಕ ಇಬ್ಬರಿಗೂ ಸೇರಿ 10,000 ರೂ. ಮಾಸಿಕ ಪಿಂಚಣಿ ಪಡೆಯಬಹುದಾಗಿದೆ.