ಎಸ್ ಬಿಐ ಎಟಿಎಂ ಫ್ರಾಂಚೈಸಿ: ಒಮ್ಮೆ 5ಲಕ್ಷ ರೂ. ಹೂಡಿಕೆ ಮಾಡಿದ್ರೆ ಸಾಕು, ತಿಂಗಳಿಗೆ 70 ಸಾವಿರ ರೂ. ಆದಾಯ!
ಬಹುತೇಕರಿಗೆ ಉದ್ಯಮ ಪ್ರಾರಂಭಿಸಬೇಕು ಎಂಬ ಆಸೆ ಇರುತ್ತದೆ. ಆದರೆ, ಹೂಡಿಕೆಗೆ ದೊಡ್ಡ ಮೊತ್ತದ ಹಣದ ಅಗತ್ಯವಿದೆ ಎಂಬ ಕಾರಣಕ್ಕೆ ಸುಮ್ಮನಿರುತ್ತಾರೆ. ಇಂಥವರು ಎಸ್ ಬಿಐ ಎಟಿಎಂ ಫ್ರಾಂಚೈಸಿ ಪಡೆಯುವ ಮೂಲಕ ತಿಂಗಳಿಗೆ 60,000ರೂ.–70,000ರೂ. ಲಾಭ ಗಳಿಸಬಹುದು. ಹಾಗಾದ್ರೆ ಎಸ್ ಬಿಐ ಎಟಿಎಂ ಫ್ರಾಂಚೈಸಿ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ.
Business Desk: ಸದ್ಯ ಎಷ್ಟು ದುಡಿದರೂ ಸಾಲದು ಎಂಬ ಸ್ಥಿತಿ. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತಿಂಗಳ ಖರ್ಚು-ವೆಚ್ಚ ನಿಭಾಯಿಸೋದೆ ಕಷ್ಟ. ಏನಾದ್ರೂ ಸಣ್ಣ ಉದ್ಯಮ ಪ್ರಾರಂಭಿಸೋಣವೆಂದ್ರೆ ಅಷ್ಟು ದೊಡ್ಡ ಮೊತ್ತದ ಹಣ ಹೊಂದಿಸೋದು ಎಲ್ಲಿಂದ ಎಂಬ ಪ್ರಶ್ನೆ ಎದುರಾಗುತ್ತದೆ. ಅಲ್ಲದೆ, ಉದ್ಯಮ ನಡೆಸೋದು ಅಷ್ಟು ಸುಲಭದ ಕೆಲಸ ಕೂಡ ಅಲ್ಲ. ಅದಕ್ಕೆ ಸಾಕಷ್ಟು ಸಮಯ ಹಾಗೂ ಶ್ರಮದ ಅಗತ್ಯ ಕೂಡ ಇರುತ್ತದೆ. ಹೀಗಿರುವಾಗ ಬರೀ 5ಲಕ್ಷ ರೂ. ಹೂಡಿಕೆ ಮಾಡಿ ತಿಂಗಳಿಗೆ 60,000ರೂ.–70,000ರೂ. ಲಾಭ ಗಳಿಸಲು ಸಾಧ್ಯವಾದ್ರೆ? ಇಂಥ ಒಂದು ಅವಕಾಶವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಒದಗಿಸಿದೆ. ಹೌದು, ಎಸ್ ಬಿಐ ಎಟಿಎಂ ಫ್ರಾಂಚೈಸಿ ಪಡೆದುಕೊಂಡ್ರೆ ಕಡಿಮೆ ಹೂಡಿಕೆ ಜೊತೆಗೆ ತಿಂಗಳಿಗೆ ಉತ್ತಮ ಆದಾಯ ಕೂಡ ಗಳಿಸಬಹುದು. ಅದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು? ಎಸ್ ಬಿಐ ಎಟಿಎಂ ಕಂಡ ತಕ್ಷಣ ಇದನ್ನು ಬ್ಯಾಂಕ್ ಸ್ಥಾಪಿಸಿರುತ್ತದೆ ಎಂದು ನಾವೆಲ್ಲ ಭಾವಿಸುತ್ತೇವೆ. ಆದರೆ, ಹಾಗಲ್ಲ. ಈ ಎಟಿಎಂಗಳನ್ನು ಸ್ಥಾಪಿಸೋದು ಎಸ್ ಬಿಐ ನೇಮಿಸಿಕೊಂಡಿರುವ ಗುತ್ತಿಗೆದಾರರು. ಇವರು ವಿವಿಧ ಸ್ಥಳಗಳಲ್ಲಿ ಎಟಿಎಂ ಸ್ಥಾಪಿಸುವ ಕಾರ್ಯವನ್ನು ಮಾಡುತ್ತಿರುತ್ತಾರೆ. ದೇಶಾದ್ಯಂತ ಎಟಿಎಂ ಯಂತ್ರಗಳನ್ನು ಸ್ಥಾಪಿಸಲು ಎಸ್ ಬಿಐಯು ಟಾಟಾ ಇಂಡಿಕ್ಯಾಷ್, ಮುತ್ತೂಟ್ ಎಟಿಎಂ ಹಾಗೂ ಇಂಡಿಯ ಒನ್ ಎಟಿಎಂ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಹಾಗಿದ್ರೆ ಎಸ್ ಬಿಐ ಎಟಿಎಂ ಪ್ರಾಂಚೈಸಿ ಪಡೆಯೋದು ಹೇಗೆ?
ಎಲ್ಲಿ ಅರ್ಜಿ ಸಲ್ಲಿಸಬೇಕು?
ನೀವು ಎಸ್ ಬಿಐ ಎಟಿಎಂ ಫ್ರಾಂಚೈಸಿ ಹೊಂದಲು ಬಯಸಿದ್ರೆ ಈ ಮೇಲೆ ತಿಳಿಸಿರುವ ಕಂಪನಿಗಳ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ, ಎಚ್ಚರ, ಕಂಪನಿಗಳ ಅಧಿಕೃತ ವೆಬ್ ಸೈಟ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಿ. ಏಕೆಂದ್ರೆ ಎಟಿಎಂ ಫ್ರಾಂಚೈಸಿ ನೀಡುವ ಹೆಸರಿನಲ್ಲಿ ಅನೇಕ ನಕಲಿ ವೆಬ್ ಸೈಟ್ ಗಳನ್ನು ಸೃಷ್ಟಿಸಿ ಗ್ರಾಹಕರನ್ನು ವಂಚಿಸಿದ ಅನೇಕ ಪ್ರಕರಣಗಳು ಈ ಹಿಂದೆ ನಡೆದಿವೆ.
Government Schemes: ಹಿರಿಯ ನಾಗರಿಕರಿಗೆ ಈ ಯೋಜನೆ ಅಡಿ ಸರ್ಕಾರ ನೀಡುತ್ತೆ ಪಿಂಚಣಿ
ಎಸ್ ಬಿಐ ಎಟಿಎಂ ಫ್ರಾಂಚೈಸಿ ಪಡೆಯಲು ಇರುವ ಷರತ್ತುಗಳೇನು?
*ಮೊದಲಿಗೆ ಎಟಿಎಂ ಕ್ಯಾಬಿನ್ ಸಿದ್ಧಪಡಿಸಲು 50 ಹಾಗೂ 80 ಚದರ ಅಡಿ ಸ್ಥಳಾವಕಾಶ ಇರಬೇಕು.
*ಈ ಸ್ಥಳ ಇತರ ಎಟಿಎಂಗಳಿಂದ ಕನಿಷ್ಠ 100 ಮೀಟರ್ ದೂರದಲ್ಲಿರಬೇಕು.
*ಇದು ಜನರಿಗೆ ಕಾಣಿಸುವಂತಹ ಸ್ಥಳವಾಗಿರಬೇಕು.
*ನಿರಂತರ ವಿದ್ಯುತ್ ಸರಬರಾಜು ಇರಬೇಕು. ಕನಿಷ್ಠ 1ಕೆಡಬ್ಲ್ಯು ವಿದ್ಯುತ್ ಸಂಪರ್ಕ ಅಗತ್ಯ.
*ಕ್ಯಾಬಿನ್ ಕಾಯಂ ಕಟ್ಟಡವಾಗಿದ್ದು, ಕಾಂಕ್ರೀಟ್ ಮೇಲ್ಛಾವಣಿ ಹಾಗೂ ಕಲ್ಲಿನ ಗೋಡೆಗಳನ್ನು ಹೊಂದಿರಬೇಕು.
*ವಿ-ಸ್ಯಾಟ್ ಅಳವಡಿಕೆಗೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು.
ಯಾವೆಲ್ಲ ದಾಖಲೆಗಳು ಅಗತ್ಯ?
*ಗುರುತು ದೃಢೀಕರಣಕ್ಕಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ
*ರೇಷನ್ ಕಾರ್ಡ್, ವಿದ್ಯುತ್ ಬಿಲ್
*ಬ್ಯಾಂಕ್ ಖಾತೆ ಹಾಗೂ ಪಾಸ್ ಪುಸ್ತಕ
*ಫೋಟೋ, ಇ-ಮೇಲ್ ಐಡಿ, ಫೋನ್ ನಂಬರ್
*ಜಿಎಸ್ ಟಿ ನಂಬರ್
*ಕಂಪನಿಗೆ ಅಗತ್ಯವಿರುವ ಹಣಕಾಸಿನ ದಾಖಲೆಗಳು
Personal Finance: ಸ್ಯಾಲರಿ ಖಾತೆಗೆ ಸಂಬಳ ಬರ್ತಿದ್ದರೆ ಇದನ್ನು ಗಮನಿಸಿ
ಎಷ್ಟು ಹೂಡಿಕೆ ಅಗತ್ಯ? ಆದಾಯ ಎಷ್ಟು ಬರುತ್ತೆ?
ಎಸ್ ಬಿಐ ಎಟಿಎಂ ಫ್ರಾಂಚೈಸ್ ಗಾಗಿ ಅರ್ಜಿ ಸಲ್ಲಿಸುವಾಗ ಭದ್ರತಾ ಠೇವಣಿಯಾಗಿ 2ಲಕ್ಷ ರೂ. ನೀಡಬೇಕು. ಆ ಬಳಿಕ 3ಲಕ್ಷ ರೂ. ವರ್ಕಿಂಗ್ ಕ್ಯಾಪಿಟಲ್ ನೀಡಬೇಕಾಗುತ್ತದೆ. ಅಂದ್ರೆ ಒಟ್ಟು 5ಲಕ್ಷ ರೂ. ಹೂಡಿಕೆ ಮಾಡಬೇಕಾಗುತ್ತದೆ. ಎಟಿಎಂ ಸ್ಥಾಪನೆಯಾದ ಬಳಿಕ ಜನರು ಹಣ ವಿತ್ ಡ್ರಾ ಮಾಡಲು ಪ್ರಾರಂಭಿಸಿದ ನಂತರ ಪ್ರತಿ ನಗದು ವಿತ್ ಡ್ರಾಗೆ 8ರೂ.ನಂತೆ ನಿಮಗೆ ಆದಾಯ ಬರುತ್ತದೆ. ಹಾಗೆಯೇ ನಗದುರಹಿತ ಅಂದ್ರೆ ಬ್ಯಾಲೆನ್ಸ್ ಚೆಕ್, ಹಣ ವರ್ಗಾವಣೆ ಮುಂತಾದ ಪ್ರತಿ ವಹಿವಾಟಿನ ಮೇಲೆ 2ರೂ. ಆದಾಯ ಗಳಿಸಬಹುದಾಗಿದೆ.