ಎಟಿಎಂ ಬಳಕೆಯು ಕಡಿಮೆಯಾಗುತ್ತಿದ್ದರೂ, ಎಟಿಎಂ ಮಾಲೀಕರು ಇಂಟರ್‌ಚೇಂಜ್ ಶುಲ್ಕ, ಸರ್ವಿಸ್ ಚಾರ್ಜ್ ಮತ್ತು ಜಾಹೀರಾತುಗಳ ಮೂಲಕ ಆದಾಯ ಗಳಿಸಬಹುದು. ಗ್ರಾಹಕರು ಬೇರೆ ಬ್ಯಾಂಕ್ ಎಟಿಎಂ ಬಳಸಿದಾಗ ಮತ್ತು ಉಚಿತ ವಹಿವಾಟು ಮೀರಿದಾಗ ಶುಲ್ಕ ವಿಧಿಸಲಾಗುತ್ತದೆ. ಡಿಜಿಟಲ್ ವಹಿವಾಟು ಹೆಚ್ಚಳದಿಂದ ಎಟಿಎಂ ಸಂಖ್ಯೆ ಕಡಿಮೆಯಾಗುತ್ತಿದೆ.  

ಸುಮಾರು ಎರಡು ದಶಕಗಳ ಹಿಂದಿನ ಕಥೆ. ನನ್ನ ಮನೆ ಎಟಿಎಂ (ATM) ಪಕ್ಕದಲ್ಲಿದೆ, ನಮ್ಮ ಮನೆ ದಾರಿಯಲ್ಲಿ ಎಟಿಎಂ ಇದೆ ಅಂತ ಜನರು ಹೇಳ್ತಿದ್ದರು. ಕೊರೊನಾ ಹಾಗೂ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಮಹತ್ವ ಸಿಗ್ತಿದ್ದಂತೆ ಜನರು ಎಟಿಎಂ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಈಗಿನ ದಿನಗಳಲ್ಲಿ ಎಟಿಎಂಗೆ ಹೋಗುವವರ ಸಂಖ್ಯೆ ಬಹಳ ಕಡಿಮೆ ಆಗಿದೆ. ಎಟಿಎಂ ಸಂಖ್ಯೆ ಕೂಡ ಕಡಿಮೆ ಆಗ್ತಿದೆ. ಅನೇಕ ಎಟಿಎಂಗಳು ಬಾಗಿಲು ಮುಚ್ಚಿವೆ. ಪೋಸ್ಟ್ ಆಫೀಸ್ ಕೂಡ ಒಂದು ಸಮಯದಲ್ಲಿ ಅಳಿವಿನಂಚಿನಲ್ಲಿತ್ತು. ಆದ್ರೆ ಕೇಂದ್ರ ಸರ್ಕಾರ, ಪೋಸ್ಟ್ ಆಫೀಸ್ (Post Office) ಗಳನ್ನು ಮತ್ತೆ ಜೀವಂತಗೊಳಿಸಿದೆ. ಹೊಸ ಹೊಸ ಯೋಜನೆಗಳ ಮೂಲಕ ಜನರಿಗೆ ಮತ್ತೆ ಹತ್ತಿರ ಆಗ್ತಿದೆ. ಅದೇ ರೀತಿ ಎಟಿಎಂನಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ನಾವಿಂದು ಎಟಿಎಂನಿಂದ ಹೇಗೆಲ್ಲ ಹಣ ಸಂಪಾದನೆ ಮಾಡಬಹುದು ಎಂಬುದನ್ನು ಹೇಳ್ತೇವೆ.

ಎಟಿಎಂನಿಂದ ಗಳಿಕೆ ಹೇಗೆ? : ಈಗಿನ ದಿನಗಳಲ್ಲಿ ಎಟಿಎಂ ಸಂಖ್ಯೆ ಹಾಗೂ ಬಳಕೆದಾರರ ಸಂಖ್ಯೆ ಕೂಡ ಕಡಿಮೆ ಆಗಿದೆ. ಆದ್ರೆ ಈಗಾಗಲೇ ಎಟಿಎಂ ಹೊಂದಿರುವವರು ಅನೇಕ ರೀತಿಯಲ್ಲಿ ಹಣ ಸಂಪಾದನೆ ಮಾಡ್ತಿದ್ದಾರೆ. 

ತನ್ನ ಕಂಪನಿಯಲ್ಲಿ ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಬೇರೆ ಕಡೆ ಕೆಲಸ ಕೊಡಿಸಿದ ಬೆಂಗಳೂರಿನ ಕಂಪನಿ CEO!

• ಇಂಟರ್ ಚೇಂಜ್ ಶುಲ್ಕ : ಗ್ರಾಹಕರು ತಮ್ಮ ಬ್ಯಾಂಕ್ ಎಟಿಎಂ ಬದಲು ಬೇರೆ ಬ್ಯಾಂಕ್ ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದಾಗ, ಎಟಿಎಂ ಮಾಲೀಕರಿಗೆ ಸಣ್ಣ ಮೊತ್ತ ಸಿಗುತ್ತದೆ. ಆರ್ ಬಿಐ ಪ್ರಕಾರ, ಪ್ರತಿ ನಗದು ಹಿಂಪಡೆಯುವಿಕೆಗೆ 17 ರೂ. ಮತ್ತು ನಗದುರಹಿತ ವಹಿವಾಟಿಗೆ 6 ರೂಪಾಯಿ ಶುಲ್ಕವನ್ನು ಎಟಿಎಂ ಆಪರೇಟರ್ಗೆ ಪಾವತಿಸಲಾಗುತ್ತದೆ. ಒಂದು ತಿಂಗಳಲ್ಲಿ ಸಾವಿರ ಮಂದಿ ಬೇರೆ ಬ್ಯಾಂಕ್ ಎಟಿಎಂನಲ್ಲಿ ವ್ಯವಹಾರ ನಡೆಸಿದ್ರೆ ಆ ಎಟಿಎಂ ಮಾಲೀಕನಿಗೆ 17 ಸಾವಿರ ರೂಪಾಯಿ ಸಿಗುತ್ತದೆ.

• ಸರ್ವಿಸ್ ಚಾರ್ಜ್ : ಆರ್ಬಿಐ ಸುತ್ತೋಲೆಯ ಪ್ರಕಾರ, ಗ್ರಾಹಕರು ಪ್ರತಿ ತಿಂಗಳು ತಮ್ಮ ಬ್ಯಾಂಕಿನ ಎಟಿಎಂನಿಂದ 5 ಉಚಿತ ವಹಿವಾಟುಗಳನ್ನು ಮತ್ತು ಇತರ ಬ್ಯಾಂಕುಗಳ ಎಟಿಎಂಗಳಿಂದ 3 ಉಚಿತ ವಹಿವಾಟುಗಳನ್ನು ಪಡೆಯುತ್ತಾರೆ. ಇದಕ್ಕಿಂತ ಹೆಚ್ಚಿನ ವಹಿವಾಟಿಗೆ ಬ್ಯಾಂಕ್ ಶುಲ್ಕ ವಸೂಲಿ ಮಾಡುತ್ತದೆ. ಪ್ರತಿ ವಹಿವಾಟಿಗೆ ಇದು 20 ರಿಂದ 21 ರೂಪಾಯಿವರೆಗೆ ಇರುತ್ತದೆ.

• ಜಾಹೀರಾತಿನಿಂದ ಗಳಿಕೆ : ಎಟಿಎಂ ಸ್ಕ್ರೀನ್ ನಲ್ಲಿ ಇಲ್ಲವೆ ಎಟಿಎಂ ಹೊರಗೆ ಜಾಹೀರಾತುಗಳನ್ನು ಹಾಕುವ ಮೂಲಕ ನೀವು ಹಣ ಸಂಪಾದನೆ ಮಾಡಬಹುದು. ಎಟಿಎಂಗಳು ಮೊಬೈಲ್ ರೀಚಾರ್ಜ್, ಬಿಲ್ ಪಾವತಿ ಅಥವಾ ಮಿನಿ ಸ್ಟೇಟ್ಮೆಂಟ್ನಂತಹ ಸೇವೆಗಳನ್ನು ನೀಡುತ್ತವೆ, ಇವುಗಳ ಮೇಲೆ ಕಮಿಷನ್ ಗಳಿಸಲಾಗುತ್ತದೆ. ಇದು ಸೇವೆ ಮತ್ತು ವಹಿವಾಟುಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.

2030ರ ತನಕ ನೀವು ಇದೇ ಉದ್ಯೋಗದಲ್ಲಿದ್ದರೆ ಹೊಟ್ಟೆಗೆ ಹಿಟ್ಟು

ಯಾವುದೇ ವ್ಯವಹಾರದಲ್ಲಿ ಲಾಭ – ನಷ್ಟಗಳು ಇದ್ದೇ ಇರುತ್ವೆ. ಆದ್ರೆ ಸದ್ಯ ಎಟಿಎಂನಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಿದೆ. ಅದನ್ನು ಬಳಸುವವರ ಸಂಖ್ಯೆ ಕಡಿಮೆಯಾಗಿದ್ದು ಇದಕ್ಕೆ ಕಾರಣ. ಡಿಜಿಟಲ್ ವಹಿವಾಟಿನಿಂದಾಗಿ ಎಟಿಎಂ ಬಳಕೆ ಕಡಿಮೆಯಾಗುತ್ತಿದೆ. ಆದ್ದರಿಂದ ಅದಕ್ಕೆ ಸಂಬಂಧಿಸಿದ ಕಂಪನಿಗಳು ನಷ್ಟದಲ್ಲಿವೆ. ಆರ್ಬಿಐ ದತ್ತಾಂಶದ ಪ್ರಕಾರ, ಭಾರತದಲ್ಲಿ ಸೆಪ್ಟೆಂಬರ್ 2023 ರಲ್ಲಿ 2,19,000 ಎಟಿಎಂಗಳಿದ್ದವು, ಅದು ಸೆಪ್ಟೆಂಬರ್ 2024 ರಲ್ಲಿ 2,15,000 ಕ್ಕೆ ಇಳಿದಿದೆ. ಭಾರತದಲ್ಲಿ ಮೊದಲ ಎಟಿಎಂ ಅನ್ನು 1987 ರಲ್ಲಿ ಮುಂಬೈನಲ್ಲಿ ಎಚ್ಎಸ್ಬಿಸಿ ಸ್ಥಾಪಿಸಲಾಗಿತ್ತು. 10 ವರ್ಷಗಳಲ್ಲಿ ಅಂದ್ರೆ 1997 ರವರೆಗೆ, ದೇಶದಲ್ಲಿ ಸುಮಾರು 1500 ಎಟಿಎಂ ಶುರುವಾಗಿತ್ತು. ವಿಶ್ವದ ಮೊದಲ ಎಟಿಎಂ ಜೂನ್ 27, 1967 ರಂದು ಲಂಡನ್ನ ಎನ್ಫೀಲ್ಡ್ನಲ್ಲಿ ಶುರುವಾಗಿತ್ತು.