ಆನ್‍ಲೈನ್‌ನಲ್ಲಿ e-Pan ಕಾರ್ಡ್ ಪಡೆಯುವುದು ಹೇಗೆ?! ಅತ್ಯಂತ ಸರಳ ಮತ್ತು ಸುಲಭ ವಿಧಾನದಿಂದ e-Pan ಪಡೆದುಕೊಳ್ಳಿ! 7 ಸುಲಭ ಹಂತಗಳಲ್ಲಿ e-Pan ನಿಮ್ಮದಾಗಲಿದೆ! e-Pan ಪಡೆಯಲು ಈ ಸುಲಭ ಟಿಪ್ಸ್‌ಗಳನ್ನು ಫಾಲೋ ಮಾಡಿ 

ಬೆಂಗಳೂರು(ಅ.23): ಪ್ಯಾನ್ ಕಾರ್ಡ್ ನಮ್ಮ ವ್ಯವಸ್ಥೆಯ ಅತ್ಯಂತ ಕ್ರಾಂತಿಕಾರಿ ಸಾಧನಗಳಲ್ಲೊಂದು. ಪ್ಯಾನ್ ಕಾರ್ಡ್ ಸಹಾಯದಿಂದ ವ್ಯಕ್ತಿ ಏನೆಲ್ಲಾ ಸೌಲಭ್ಯ ಪಡೆಯಬಹುದು ಎಂಬುದಕ್ಕೆ ಆದಿ ಮತ್ತು ಅಂತ್ಯವೇ ಇಲ್ಲ.

ಬ್ಯಾಂಕಿಂಗ್ ಸೇವೆಗಳು, ಸರ್ಕಾರಿ ಸೌಲಭ್ಯಗಳು, ತೆರಿಗೆ ಪಾವತಿ ಹೀಗೆ ಹತ್ತು ಹಲವು ಸಂಗತಿಗಳಿಗೆ ಪ್ಯಾನ್ ಕಾರ್ಡ್ ಮೂಲ ಆಧಾರ. ಅದರಂತೆ ಕೇಂದ್ರ ಸರ್ಕಾರ e-PAN ಸೌಲಭ್ಯ ಒದಗಿಸಿದ್ದು, ಜನ ಪ್ಯಾನ್ ಕಾರ್ಡ್ ಹಾರ್ಡ್ ಕಾಪಿ ಜೊತೆ e-PAN ಕಾರ್ಡ್ ಕೂಡ ಪಡೆಯಬಹುದಾಗಿದೆ.

ಆನ್‍ಲೈನ್‌ನಲ್ಲಿ ಅತ್ಯಂತ ಸರಳವಾಗಿ e-PAN ಪಡೆಯಬಹುದಾಗಿದೆ. ಭಾರತೀಯ ನಿವಾಸಿಗಳು(ಅಪ್ರಾಪ್ತರು ಹೊರತುಪಡಿಸಿ) ಇದನ್ನು ಪಡೆಯಬಹುದಾಗಿದೆ. ಹಿಂದೂ ಅವಿಭಕ್ತ ಕುಟುಂಬ, ಸಂಸ್ಥೆಗಳು, ಟ್ರಸ್ಟ್‌ಗಳು, ಕಂಪನಿಗಳು ಇತ್ಯಾದಿಗಳಿಗೆ e-PAN ಅನ್ವಯಿಸುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಆನ್‍ಲೈನ್‌ನಲ್ಲಿ e-PAN ಪಡೆಯುವ ವಿಧಾನ ಹೇಗೆ?:

1. ಆಧಾರ್‌ ಕಾರ್ಡ್ ನಲ್ಲಿರುವ ನಲ್ಲಿರುವ ನಿಮ್ಮ ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ ಮತ್ತು ಮೊಬೈಲ್ ಸಂಖ್ಯೆ ಆಧಾರದಲ್ಲಿ e-PAN ಜನರೇಟ್ ಆಗುತ್ತದೆ. ಆದರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಯನ್ನು ನೀವು ನವೀಕರಿಸಬೇಕಾಗಿದ್ದರೆ, ಮೊದಲು ನವೀಕರಣ ಮಾಡಿ ನಂತರ e-PANಗಾಗಿ ಅರ್ಜಿ ಸಲ್ಲಿಸುವುದು ಒಳಿತು.

2. ಮೊದಲು ಆದಾಯ ತೆರಿಗೆ ಇಲಾಖೆ ವೆಬ್‍ಸೈಟ್‌ಗೆ ಭೇಟಿ ಕೊಟ್ಟರೆ ಅದರಲ್ಲಿ ಕ್ವಿಕ್ ಲಿಂಕ್ ಆ್ಯಕ್ಷನ್ ವಿಭಾಗದಲ್ಲಿ ಇನ್ಸ್ಟಂಟ್ e-PAN ಲಿಂಕ್ ಕಾಣಿಸುತ್ತದೆ. ಈ ಲಿಂಕ್ ನ್ನು ನೀವು ಕ್ಲಿಕ್ ಮಾಡಬೇಕು. 

3. ನಂತರ ಅಪ್ಲೈ ಇನ್ಸ್ಟಂಟ್ e-PAN ಲಿಂಕ್ ಆಪ್ಶನ್ ಕ್ಲಿಕ್ ಮಾಡಿದರೆ ಅಲ್ಲಿ ಆಧಾರ್ ಓಟಿಪಿ ಆಧಾರಿಸಿ ನಿಮ್ಮ ಆಧಾರ್ e-KYC ಮಾಹಿತಿ ಪೂರ್ಣಗೊಳಿಸಬೇಕು. ನಂತರವಷ್ಟೇ e-PAN ಅರ್ಜಿ ತೆರೆಯುತ್ತದೆ.

4. ಅರ್ಜಿದಾರರು ಸ್ಕ್ಯಾನ್ ಮಾಡಿರುವ ಸಹಿ ಕಾಪಿಯನ್ನು ಅಪ್ಲೋಡ್ ಮಾಡಬೇಕು. ಇದೊಂದು ಸಂಪೂರ್ಣ ಕಾಗದರಹಿತ ಸೌಲಭ್ಯವಾಗಿದ್ದು, ಪ್ರತಿಯೊಂದನ್ನೂ ಎಲೆಕ್ಟ್ರಾನಿಕ್ ವಿಧಾನದಲ್ಲಿ ತುಂಬಬೇಕು. 

5. e-PAN ಅರ್ಜಿಯನ್ನು ಯಶಸ್ವಿಯಾಗಿ ಭರ್ತಿ ಮಾಡಿದ ಬಳಿಕ, 15 ಡಿಜಿಟ್ ಸ್ವೀಕೃತಿ ಸಂಖ್ಯೆ ಜನರೇಟ್ ಆಗಿ ಅರ್ಜಿಯಲ್ಲಿ ನೀಡಿರುವ ನಿಮ್ಮ ಮೊಬೈಲ್ ಸಂಖ್ಯೆ/ಇ-ಮೇಲ್ ಐಡಿಗೆ ರವನೆಯಾಗುತ್ತದೆ. 

6. ಈ ಹಂತಗಳು ಪೂರ್ಣವಾದ ಬಳಿಕ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಬೇಕಾದರೆ ಚೆಕ್ ಇನ್ಸ್ಟಂಟ್ e-PAN ಸ್ಟೇಟಸ್ ವೆಬ್‍ಪೇಜ್‌ನಲ್ಲಿ ಪರೀಕ್ಷಿಸಬಹುದು. 

7. ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಆ್ಯಕ್ಟೀವ್ ಮೊಬೈಲ್ ನಂಬರ್ ಗೆ ಒಟಿಪಿ ಆಧಾರವಾಗಿ ಹೊಸ PAN ಕಾರ್ಡ್ ಹಂಚಿಕೆ ಮಾಡಲಾಗುತ್ತದೆ.

ಈ ಮೇಲಿನ ಸರಳ ಹಂತಗಳನ್ನು ಅನುಕರಿಸಿ ಪ್ರತಿಯೊಬ್ಬರೂ ಆನ್‍ಲೈನ್‌ನಲ್ಲಿ ಅತ್ಯಂತ ಸರಳವಾಗಿ e-PAN ಪಡೆಯಬಹುದಾಗಿದೆ.