ಡಿಎಲ್​, ಆಧಾರ್​, ಪ್ಯಾನ್, ಮಾರ್ಕ್ಸ್​ ​​ ಕಾರ್ಡ್​... ವಾಟ್ಸ್​ಆ್ಯಪ್​ನಿಂದ್ಲೇ ಡೌನ್​ಲೋಡ್​ ಮಾಡೋದು ಹೇಗೆ? ಇಲ್ಲಿದೆ ಡಿಟೇಲ್ಸ್​

ವಾಟ್ಸ್​ಆ್ಯಪ್​ ಮೂಲಕವೇ ಡಿಎಲ್​, ಆಧಾರ್​, ಪ್ಯಾನ್, ಮಾರ್ಕ್​​ ಕಾರ್ಡ್​ ಸೇರಿದಂತೆ ಎಲ್ಲಾ ದಾಖಲೆಗಳನ್ನು ಡೌನ್​ಲೋಡ್​ ಮಾಡುವುದು ಹೇಗೆ? ಇಲ್ಲಿದೆ ಹಂತ ಹಂತದ ಡಿಟೇಲ್ಸ್​.
 

How to download Aadhaar PAN card Driving Licence marksheets on your phone using WhatsApp

ಇದು ತಂತ್ರಜ್ಞಾನದ ಯುಗ. ಎಲ್ಲವೂ ಕುಳಿತದಲ್ಲಿಯೇ ಬೆರಳುಗಳ ತುದಿಯಲ್ಲಿಯೇ ಸಿಗುವಂಥ ಕಾಲವಾಗಿದೆ. ಕರೆಂಟ್​ ಬಿಲ್​, ವಾಟರ್​ ಬಿಲ್​ ಆ ಬಿಲ್ಲು, ಈ ಬಿಲ್ಲು ಎಂದು ಕ್ಯೂಗಟ್ಟಲೆ ನಿಲ್ಲುವ ಅಗತ್ಯವಿಲ್ಲ. ಯಾವುದಾದರೂ ಅಪ್ಲಿಕೇಷನ್​ ಬೇಕಾದ್ರೂ ಕ್ಷಣ ಮಾತ್ರದಲ್ಲಿ ಮೊಬೈಲ್​ನಲ್ಲಿ ಭರ್ತಿ ಮಾಡಬಹುದು. ಅದರಿಂದಲೇ ಡೌನ್​ಲೋಡ್​ ಮಾಡಿಕೊಳ್ಳಬಹುದು. ಅಂಥದ್ದರಲ್ಲೇ ಒಂದು ಡಿಎಲ್​, ಆಧಾರ್​ ಕಾರ್ಡ್​, ಪ್ಯಾನ್​ ಕಾರ್ಡ್​, ವಿಮಾ ಪಾಲಿಸಿ ಇತ್ಯಾದಿ ಇತ್ಯಾದಿ ದಾಖಲೆಗಳು. ಇವುಗಳನ್ನೆಲ್ಲ ವಾಟ್ಸ್​ಆ್ಯಪ್​ನಲ್ಲಿಯೇ ಸುಲಭದಲ್ಲಿ ಡೌನ್​ಲೋಡ್​ ಮಾಡಿಕೊಳ್ಳಬಹುದು ಎನ್ನುವುದು ನಿಮಗೆ ಗೊತ್ತಾ? ಕಳೆದೊಂದು ವರ್ಷದಿಂದ ಈ ಸೌಲಭ್ಯ ವಾಟ್ಸ್​ಆ್ಯಪ್​ನಲ್ಲಿ ಸಿಗುತ್ತಿದ್ದು, ಇದೀಗ ಮತ್ತಷ್ಟು ಅಪ್​ಡೇಟ್​ ಮಾಡಲಾಗಿದೆ. ನಿಮಗೆ ದಿನನಿತ್ಯವೂ ಉಪಯೋಗಕ್ಕೆ ಬರುವ ಹಲವು ದಾಖಲೆಗಳನ್ನು ವಾಟ್ಸ್ಆ್ಯಪ್​ ಮೂಲಕವೇ ಡೌನ್​ಲೋಡ್​ ಮಾಡಿಕೊಳ್ಳುವುದು ಸುಲಭವಾಗಿದೆ.

 ಎಲ್ಲಾ ದಾಖಲೆಗಳನ್ನು ಸಂಗ್ರಹ ಮಾಡಿ ಇಡುವ ಡಿಜಿಲಾಕರ್ ವ್ಯವಸ್ಥೆ ಬಂದು ಕೆಲ ವರ್ಷಗಳೇ ಕಳೆದಿವೆ. ಇದೀಗ  ಡಿಜಿಲಾಕರ್ ಖಾತೆಯನ್ನು ಸುಲಭವಾಗಿ ಪ್ರವೇಶಿಸಲು ಸರ್ಕಾರವು ವಾಟ್ಸ್​ಆ್ಯಪ್​ ಜೊತೆ ಸಹಯೋಗ ಹೊಂದಿದೆ. ಇದರಿಂದ ಪ್ಯಾನ್ ಕಾರ್ಡ್, ಆಧಾರ್​ ಕಾರ್ಡ್​ ಚಾಲನಾ ಪರವಾನಗಿ, 10 ಮತ್ತು 12 ನೇ ತರಗತಿಯ ಅಂಕಪಟ್ಟಿಗಳು ಮತ್ತು ವಾಹನ ಆರ್‌ಸಿಯಂತಹ ಪ್ರಮುಖ ದಾಖಲೆಗಳನ್ನು ವಾಟ್ಸ್​ಆ್ಯಪ್​ ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. 

ಇನ್ಮುಂದೆ ಮಕ್ಕಳ ಇನ್​ಸ್ಟಾ, ಎಫ್​ಬಿ... ಎಲ್ಲಾ ಖಾತೆಗಳಿಗೆ ಬ್ರೇಕ್​! ಏನಿದು ಹೊಸ ರೂಲ್ಸ್​? ಡಿಟೇಲ್ಸ್​ ಇಲ್ಲಿದೆ

ಅದಕ್ಕೆ ಏನು ಮಾಡಬೇಕು ಎನ್ನುವುದನ್ನು ಇಲ್ಲಿ ಹಂತಹಂತವಾಗಿ ವಿವರಿಸಲಾಗಿದೆ:
ಈ ಸೇವೆ ಪಡೆಯಲು ಮೊದಲಿಗೆ ನೀವು ಗೂಗಲ್​ ಪ್ಲೇಸ್ಟೋರ್​ಗೆ ಹೋಗಿ ಡಿಜಿಲಾಕರ್​ (Digilocker) ಆ್ಯಪ್​ ಡೌನ್​ಲೋಡ್​ ಮಾಡಿಟ್ಟುಕೊಳ್ಳಬೇಕು. ಅದರಲ್ಲಿ ನಿಮ್ಮ ಎಲ್ಲಾ ದಾಖಲೆಗಳನ್ನು ಮೊದಲೇ ಸೇರಿಸಿಕೊಂಡಿರಬೇಕು. ಬಳಿಕ ವಾಟ್ಸ್​ಆ್ಯಪ್​ನಲ್ಲಿ ಡೌನ್​ಲೋಡ್​​ ಮಾಡಿಕೊಳ್ಳಲು ಮಾಡಬೇಕಿರುವುದು ಇಷ್ಟು: 
- ಮೊದಲಿಗೆ +91-9013151515 ಈ ಸಂಖ್ಯೆಯನ್ನು MyGov HelpDesk ಎಂದು ಫೋನಿನ ಕಾಂಟ್ಯಾಕ್ಟ್​ನಲ್ಲಿ ಸೇವ್​ ಮಾಡಿಕೊಳ್ಳಿ.
- ನಂತರ ವಾಟ್ಸ್​ಆ್ಯಪ್​ ಓಪನ್​ ಮಾಡಿ ಅದರಲ್ಲಿ ಈ ನಂಬರ್​ ಅನ್ನು ಸರ್ಚ್​ ಮಾಡಿ. ಹೊಸದಾಗಿ ಸೇವ್​  ಮಾಡಿಕೊಂಡಿರುವ ಕಾಂಟ್ಯಾಕ್ಟ್​ ನಂಬರ್​ಗೆ ಹೇಗೆ ವಾಟ್ಸ್​ಆ್ಯಪ್​ನಲ್ಲಿ ಮೊದಲ ಬಾರಿಗೆ ಮೆಸೇಜ್​ ಕಳಿಸ್ತೀರೋ ಅದೇ ರೀತಿ ಇಲ್ಲಿಯೂ ನಮಸ್ತೆ, ಹಾಯ್​ (Hi) ಹೀಗೆ ಏನಾದ್ರೂ ಮೊದಲಿಗೆ ಮೆಸೇಜ್​ ಕಳಿಸಿ.  
- ಕೂಡಲೇ ನಿಮಗೆ ಅಲ್ಲಿ ಎರಡು ಆಪ್ಷನ್​ ಬರುತ್ತವೆ. ಅವು ಡಿಜಿಲಾಕರ್ ಅಥವಾ ಕೋವಿನ್ ಸೇವೆ ಎಂದು. ನೀವು ಆಯ್ಕೆ ಮಾಡಬೇಕಿರುವುದು ಡಿಜಿಲಾಕರ್ ಸೇವೆಯನ್ನು (Digilocker services)
-  ನೀವು ಡಿಜಿಲಾಕರ್ ಖಾತೆಯನ್ನು ಹೊಂದಿದ್ದೀರಾ ಎಂದು ಚಾಟ್‌ಬಾಟ್ ಕೇಳಿದಾಗ ಹೌದು (yes) ಎಂಬುದರ ಮೇಲೆ ಕ್ಲಿಕ್‌ ಮಾಡಿ.   
- ಬಳಿಕ  ಡಿಜಿಲಾಕರ್ ಖಾತೆಯನ್ನು ಲಿಂಕ್ ಮಾಡಲು ಮತ್ತು ದೃಢೀಕರಿಸಲು  ಆಧಾರ್ ನಂಬರ್​ ಹಾಕಿ ಕಳುಹಿಸಿ
- ಆಧಾರ್​ಗೆ  ನೋಂದಣಿಯಾಗಿರುವ ಮೊಬೈಲ್​ಗೆ OTP ಬರುತ್ತದೆ. ಅದನ್ನು ಚಾಟ್‌ಬಾಕ್ಸ್‌ನಲ್ಲಿ ಟೈಪ್​ ಮಾಡಿ.
- ಚಾಟ್‌ಬಾಕ್ಸ್‌ ಪಟ್ಟಿಗಳು ನಿಮ್ಮ ಡಿಜಿಲಾಕರ್ ಖಾತೆಯೊಂದಿಗೆ ಲಿಂಕ್ ಮಾಡಲಾದ ಎಲ್ಲಾ ದಾಖಲೆಗಳನ್ನು ನಿಮಗೆ ತೋರಿಸುತ್ತದೆ. 
- ಅದನ್ನು ಡೌನ್‌ಲೋಡ್ ಮಾಡಲು, ಕಳುಹಿಸಲಾದ ದಾಖಲೆ ಸಂಖ್ಯೆಯನ್ನು ಟೈಪ್ ಮಾಡಿ ಮತ್ತು ಕಳುಹಿಸಿ. 
- ನಿಮ್ಮ ಡಾಕ್ಯುಮೆಂಟ್ ಪಿಡಿಎಫ್‌ನಲ್ಲಿ ಚಾಟ್ ಬಾಕ್ಸ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಟಿ.ವಿ ಪ್ರಿಯರಿಗೆ ಶಾಕ್​ ಕೊಟ್ಟ ಕೆಲ ಚಾನೆಲ್​ಗಳು: ಫೆ.1 ರಿಂದ ಟಿ.ವಿ ನೋಡುವುದು ಬಲು ದುಬಾರಿ- ಹೀಗಿವೆ ರೇಟ್​

Latest Videos
Follow Us:
Download App:
  • android
  • ios