ಚಿನ್ನದ ಬೆಲೆ ಗಗನಕ್ಕೆ, ಆದ್ರೆ ಇದನ್ನ ಟ್ರೈ ಮಾಡಿ ಕನಿಷ್ಠ ಶೇ.20-25ರಷ್ಟು ಕಡಿಮೆ ಬೆಲೆಗೆ ಸಿಗುತ್ತೆ ಗೋಲ್ಡ್!

Synopsis
ಆನ್‌ಲೈನ್ ವೇದಿಕೆಯಲ್ಲಿ ಚಿನ್ನವನ್ನು ಖರೀದಿಸುವ ಮೂಲಕ 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನವನ್ನು 6500 ರೂಪಾಯಿಗೆ ಪಡೆಯುವ ತಂತ್ರವನ್ನು ತಿಳಿಯಿರಿ. ಮಿಂತ್ರಾ, ಅಮೆಜಾನ್ ಪೇ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ರಿಯಾಯಿತಿ ಪಡೆಯುವ ವಿಧಾನ ಇಲ್ಲಿದೆ.
ಬೆಂಗಳೂರು (ಏ.16): ಚಿನ್ನದ ಬೆಲೆ ಗಗನಕ್ಕೇರಿದೆ. ಈ ವರ್ಷವೇ 24 ಕ್ಯಾರಟ್‌ನ 10 ಗ್ರಾಮ್ ಚಿನ್ನದ ಬೆಲೆ 95 ಸಾವಿರದ ಗಡಿ ದಾಟುವ ನಿರೀಕ್ಷೆ ಇದೆ.ಬಡ ಜನರು ಚಿನ್ನವನ್ನು ಖರೀದಿ ಮಾಡುವುದೇ ಕಷ್ಟಕರವಾಗಿದೆ. ಇದರ ನಡುವೆ, ನಿಮಗೆ ಆನ್‌ಲೈನ್ ವೇದಿಕೆಯಲ್ಲಿ ಚಿನ್ನವನ್ನು ಖರೀದಿ ಮಾಡುವ ತಂತ್ರವನ್ನು ತಿಳಿದಿದ್ದರೆ ಖಂಡಿತವಾಗಿ 9500ಕ್ಕೆ ಸಿಗುವ 24 ಕ್ಯಾರಟ್‌ನ ಒಂದು ಗ್ರಾಮ್ ಚಿನ್ನವನ್ನು ನೀವು ಅಂದಾಜು 6 ಸಾವಿರ ಅಥವಾ 6500 ರೂಪಾಯಿಗೆ ಪಡೆಯಬಹುದು. ಅದು ಹೇಗೆ ಅನ್ನೋದನ್ನ ಇಲ್ಲಿ ತಿಳಿಸಿದ್ದೇವೆ. ಇದಕ್ಕಾಗಿ ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇರೋದು ಬಹಳ ಮುಖ್ಯವಾಗುತ್ತದೆ.
ಈ ಹ್ಯಾಕ್ ಬಳಸಿದಲ್ಲಿ ನೀವು 25% ರಿಯಾಯಿತಿಯಲ್ಲಿ ಚಿನ್ನವನ್ನು ಖರೀದಿಸಬಹುದು!
ಮೊದಲಿಗೆ ನೀವು ಮಾಡಬೇಕಾಗಿರೋದು, ಮಿಂತ್ರಾ ಇಕಾಮರ್ಸ್ ವೆಬ್‌ಸೈಟ್. ಸಾಮಾನ್ಯವಾಗಿ ಮಿಂತ್ರಾ ಪ್ರತಿ ಕೆಲವು ವಾರಗಳಲ್ಲಿ ಮಿಡ್‌ನೈಟ್ ಸೇಲ್‌ಅನ್ನು ನಡೆಸುತ್ತದೆ. ಈ ವೇಳೆ ನಿರ್ದಿಷ್ಟ ಡಿಸ್ಕಂಟ್ ಕೋಡ್ ಬಳಸಿಕೊಂಡು ನೀವು ಚಿನ್ನದ ನಾಣ್ಯವನ್ನು ಖರೀದಿ ಮಾಡಬಹುದು. ಅವರು ಚಿನ್ನದ ನಾಣ್ಯದ ಮೇಲೆ ಡಿಸ್ಕೌಂಟ್ ಕೋಡ್‌ನೊಂದಿಗೆ ಶೇ. 4 ರಿಂದ 5ರಷ್ಟು ರಿಯಾಯಿತಿ ನೀಡುತ್ತಾರೆ.
ಆ ಬಳಿಕ ಅಮೆಜಾನ್ ಪೇ ವೋಚರ್‌ಗಳನ್ನು ಖರೀದಿ ಮಾಡಬೇಕು. ಖರೀದಿಸುವಾಗ ನಿಮಗೆ ಪಾಯಿಂಟ್ಸ್‌ಗಳನ್ನು ನೀಡುವ ಯಾವುದೇ ಕ್ರೆಡಿಟ್ ಕಾರ್ಡ್ ಅನ್ನು ಬಳಸಿ. ಉದಾಹರಣೆಗೆ ಅಮೆಕ್ಸ್ ಪ್ಲಾಟ್ ಟ್ರಾವೆಲ್ ಗೋಲ್ಡ್ ಚಾರ್ಜ್, ಪ್ಲಾಟಿನಂ, ಆಕ್ಸಿಸ್ ಮ್ಯಾಗ್ನಸ್ ಬರ್ಗಂಡಿ, ಎಚ್‌ಡಿಎಫ್‌ಸಿ ಇನ್ಫಿನಿಯಾ, ಐಸಿಐಸಿಐ ಇಪಿಎಂ, ಟೈಮ್ಸ್ ಬ್ಲ್ಯಾಕ್, ಅಥವಾ ಎಸ್‌ಬಿಐ ಕ್ಯಾಶ್‌ಬ್ಯಾಕ್‌ನಂತಹ ಕ್ಯಾಶ್‌ಬ್ಯಾಕ್ ಕಾರ್ಡ್‌ಗಳನ್ನು ಬಳಸಿ ಮತ್ತು ಅಮೆಜಾನ್‌ನಿಂದ ನೇರವಾಗಿ 5% ಕ್ಯಾಶ್‌ಬ್ಯಾಕ್‌ಗಾಗಿ ವೋಚರ್‌ಗಳನ್ನು ಖರೀದಿಸಿ.
ಉದಾಹರಣೆಗೆ ಐಸಿಐಸಿಐ ಎಮರಾಲ್ಡ್ ಪ್ರೈವೇಟ್ ಕಾರ್ಡ್ ಮೂಲಕ ಅಮೆಜಾನ್ ಪೇ ವೋಚರ್‌ಗಳನ್ನು ಖರೀದಿ ಮಾಡಿದಲ್ಲಿ ನಿಮಗೆ ಅಂದಾಜು ಶೇ. 18ರಷ್ಟು ಹಣ ಪಾಯಿಂಟ್ಸ್ ರೂಪದಲ್ಲಿ ವಾಪಸಾಗುತ್ತದೆ. 10 ಸಾವಿರ ರೂಪಾಯಿಯ ವೋಚರ್ ಖರೀದಿ ಮಾಡಿದರೆ, 1800 ಪಾಯಿಂಟ್ಸ್ ನಿಮ್ಮ ಖಾತೆಗೆ ಬರುತ್ತದೆ.
ನಂತರ ಆ ಅಮೆಜಾನ್ ಪೇ ವೋಚರ್‌ಗಳನ್ನು ಬಳಸಿ Maximize.money ನಿಂದ Myntra ವೋಚರ್‌ಗಳನ್ನು ಖರೀದಿಸಿ, ಅಲ್ಲಿ ನೀವು ಅಮೆಜಾನ್ ಪೇ ವೋಚರ್‌ಗಳೊಂದಿಗೆ ಪಾವತಿಸಬಹುದು ಮತ್ತು ಹೆಚ್ಚುವರಿ 5.5% ರಿಯಾಯಿತಿಯನ್ನು ಪಡೆಯಬಹುದು. Maximize.money ಅನ್ನೋದು ಗಿಫ್ಟ್ ಕಾರ್ಡ್‌ಗಳನ್ನು ಡಿಸ್ಕೌಂಟ್ ರೂಪದಲ್ಲಿ ಖರೀದಿ ಮಾಡುವ ವೆಬ್‌ಸೈಟ್ ಆಗಿದೆ.
ಆ ಬಳಿಕ ನೀವು ಖರೀದಿ ಮಾಡಿದ 10 ಸಾವಿರದ ಅಮೆಜಾನ್ ಪೇ ವೋಚರ್‌ನಿಂದ ಮಿಂತ್ರಾದ 10 ಸಾವಿರ ರೂಪಾಯಿಯ ಗಿಫ್ಟ್ ಕಾರ್ಡ್‌ಅನ್ನು ಶೇ.5.5 ಡಿಸ್ಕೌಂಟ್‌ನಲ್ಲಿ ಖರೀದಿ ಮಾಡಿ. ಅಮೆಜಾನ್ ಪೇ ಬ್ಯಾಲೆನ್ಸ್‌ನಿಂದ ಇದನ್ನು ಖರೀದಿ ಮಾಡಬಹುದು.
ಇದರಿಂದ ಒಟ್ಟಾರೆ ಲೆಕ್ಕಾಚಾರ ಮಾಡುವುದಾದರೆ,
- ಮಿಂತ್ರಾದಲ್ಲಿ ಮೂಲ ಚಿನ್ನದ ಬೆಲೆ: 9508
- ಮಿಂತ್ರಾ ಮಿಡ್‌ನೈಟ್ ಸೇಲ್ ಡಿಸ್ಕೌಂಟ್ (ಶೇ.4): -475
- ಐಶಾಪ್ ಡಿಸ್ಕೌಂಟ್ (ಶೇ.18):-1700
- ಮ್ಯಾಕ್ಸಿಮೈಜ್ ಡಿಸ್ಕೌಂಟ್ (ಶೇ.5.5): -523
- ಇದರಿಂದ 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 9508 ರಿಂದ 6810 ರೂಪಾಯಿ ಆಗಲಿದೆ.
ಸೂಚನೆ: ಈ ವಹಿವಾಟಿನಲ್ಲಿ ವೇಳೆ ನೀವು ಮಿಂತ್ರಾ ಸೂಪರ್ ಕಾಯಿನ್‌ಗಳನ್ನೂ ಪಡೆಯುತ್ತೀರಿ. ಇವುಗಳನ್ನು ಮಿಂತ್ರಾ ವೋಚರ್‌ಗಳಿಗೆ ರಿಡೀಮ್ ಮಾಡಿಕೊಂಡರೆ ರೂ.200-300 ಮೌಲ್ಯದ್ದಾಗಿರುತ್ತವೆ.
ಚಿನ್ನದ ಬೆಲೆಯಲ್ಲಿ 700 ರೂ.ವರೆಗೆ ಇಳಿಕೆ; ಚಿನ್ನದಂಥಾ ಅವಕಾಶ ಮಿಸ್ ಮಾಡ್ಕೊಂಡು ನಿರಾಶರಾಗಬೇಡಿ
ಅಲ್ಲದೆ, ಇದನ್ನು ಸಣ್ಣ ಪ್ರಮಾಣದಲ್ಲಿ ಮಾತ್ರ ಮಾಡಬಹುದು (ನಿಮ್ಮಲ್ಲಿ ಎಷ್ಟು ಕ್ರೆಡಿಟ್ ಕಾರ್ಡ್‌ಗಳಿವೆ ಎಂಬುದರ ಆಧಾರದ ಮೇಲೆ) ಏಕೆಂದರೆ Gyftr, Smartbuy ಮತ್ತು iShop ನಂತಹ ಅಕ್ಸಲರೇಟೆಡ್ ಪ್ಲಾಟ್‌ಫಾರ್ಮ್‌ಗಳ ಮೂಲಕ Amazon Pay ವೋಚರ್‌ಗಳನ್ನು ಖರೀದಿಸುವುದರಿಂದ ತಿಂಗಳಿಗೆ ಪ್ರತಿ ಕಾರ್ಡ್‌ಗೆ 10-12k ವರೆಗೆ ಮಿತಿಗೊಳಿಸಲಾಗುತ್ತದೆ.
ಅಕ್ಷಯ ತೃತೀಯಗೆ ಖರೀದಿಸಿ 3-5 ಗ್ರಾಂ ಚಿನ್ನದ ಮಂಗಳಸೂತ್ರದ ಲಾಕೆಟ್