ನವದೆಹಲಿ(ಸೆ.17): ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಗೃಹ ಉಳಿತಾಯ ಪ್ರಮಾಣ ಇಳಿಕೆಯಾಗಿದ್ದು, 2018 ರ ಆರ್ಥಿಕ ವರ್ಷದಲ್ಲಿ ಗೃಹ ಉಳಿತಾಯ ಶೇ.25 ಕ್ಕೆ ಕುಸಿದಿದೆ. 

ಕಳೆದ ವರ್ಷ ಇದ್ದ ಶೇ.67 ರಷ್ಟು ಗೃಹ ಉಳಿತಾಯ ಈ ಬಾರಿ ಶೇ.25 ಕ್ಕೆ ಉಳಿಸಿದ್ದು, ಸಣ್ಣ ಉಳಿತಾಯವನ್ನು ಹೊರತುಪಡಿಸಿ, ಪಿಎಫ್ ಖಾತೆಯನ್ನೂ ಒಳಗೊಂಡ, ಗೃಹ ಉಳಿತಾಯದ ಪ್ರಮಾಣ  ಕಳೆದ ನಾಲ್ಕು ದಶಕದಲ್ಲೇ ಅತಿ ಹೆಚ್ಚಿನ ಕುಸಿತ ಎಂದು ವಿಶ್ಲೇಷಿಸಲಾಗುತ್ತಿದೆ. 

ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಎನ್‌ಪಿಎ ಸುಳಿಯಲ್ಲಿ ಸಿಲುಕಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ಆರ್‌ಬಿಐ ನ ಹ್ಯಾಂಡ್ ಬುಕ್ ಆಫ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ, 2017 ರಲ್ಲಿ 9.4 ಲಕ್ಷ ರೂಪಾಯಿಯಷ್ಟಿದ್ದ ಬ್ಯಾಂಕ್ ಠೇವಣಿ, 2018 ರಲ್ಲಿ 4.7 ಲಕ್ಷ ರೂಪಾಯಿಗಳಿಗೆ ಇಳಿದಿದೆ. 

ಗೃಹ ಉಳಿತಾಯ ಪ್ರಮಾಣ 90 ಹಾಗೂ 92 ರಲ್ಲಿ ಅನುಕ್ರಮವಾಗಿ ಶೇ.29 ಹಾಗೂ ಶೇ.26 ಕ್ಕೆ ಕುಸಿದಿತ್ತು.