Night, Weekend Curfew ಧಿಕ್ಕರಿಸಲು ಹೋಟೆಲ್‌ಗಳು ಸಜ್ಜು
* ಕರ್ಫ್ಯೂದಿಂದ ಕೋವಿಡ್ ನಿಯಂತ್ರಣ ಅಸಾಧ್ಯ
* ಸರ್ಕಾರದ ನಿಯಮದಿಂದ ಉದ್ದಿಮೆಗಳಿಗೆ ಸಂಕಷ್ಟ
* ಹೋಟೆಲ್, ಬಾರ್, ಚೌಲ್ಟ್ರಿ ಮಾಲೀಕರ ಸಂಘ ಆಕ್ರೋಶ
ಬೆಂಗಳೂರು(ಜ.14): ಮುಂದಿನ ವಾರದಿಂದ ನೈಟ್ ಕರ್ಫ್ಯೂ(Night Curfew) ಮತ್ತು ವಾರಾಂತ್ಯದ ಕರ್ಫ್ಯೂ(Weekend Curfew) ಬಹಿಷ್ಕರಿಸಲು ಹೋಟೆಲ್, ಬಾರ್ ಮತ್ತು ಕಲ್ಯಾಣ ಮಂಟಪಗಳ ಮಾಲಿಕರ ಸಂಘಗಳ ಒಕ್ಕೂಟ ತೀರ್ಮಾನಿಸಿದೆ.
ಗುರುವಾರ ಈ ಕುರಿತು ಕನ್ನಡಪ್ರಭದೊಂದಿಗೆ(Kananda Prabha) ಮಾತನಾಡಿದ ಹೋಟೆಲ್ ಮಾಲೀಕರ ಸಂಘದ(Hotel Owners Association) ಅಧ್ಯಕ್ಷ ಪಿ.ಸಿ.ರಾವ್, ನೈಟ್ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂವಿನಿಂದ ಕೋವಿಡ್ ನಿಯಂತ್ರಣಕ್ಕೆ ಬರುತ್ತದೆ ಎಂಬುದು ಅ ವೈಜ್ಞಾನಿಕ. ಹೋಟೆಲ್ ಉದ್ಯಮಕ್ಕೆ ಸರ್ಕಾರದ ನಿಯಮಗಳಿಂದ ಅನ್ಯಾಯವಾಗುತ್ತಿದೆ. ಕೋವಿಡ್ ನಿಯಮಾವಳಿಗಳನ್ನೆಲ್ಲ ಪಾಲನೆ ಮಾಡಿದರೂ ಬಂದ್ ಮಾಡಿಸುವಂತ ಕಾರ್ಯವನ್ನು ಮಾಡಿಸಲಾಗುತ್ತಿದ್ದು ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿದರು.
"
Weekend Curfew: ರಾಜ್ಯಾದ್ಯಂತ ಉತ್ತಮ ಬೆಂಬಲ: ವ್ಯಾಪಾರವಿಲ್ಲದೆ ಕಂಗಾಲಾದ ಹೋಟೆಲ್ ಮಾಲೀಕರು..!
ಕೋವಿಡ್-19(Covid-19) ಮೂರನೇ ಅಲೆ ಹಾನಿಕಾರವಲ್ಲ. ಹೆಚ್ಚಿನ ಸಾವು ನೋವು ಉಂಟಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಅದು ನಮಗೂ ಕೂಡ ಅನುಭವಕ್ಕೆ ಬಂದಿದೆ. ಸೋಂಕಿತ ಪ್ರಕರಣಗಳು ಹೇಗೆ ಹೆಚ್ಚಾಗುತ್ತದೆಯೋ ಅದೇ ರೀತಿ ಕಡಿಮೆಯೂ ಆಗುತ್ತದೆ. ವಾರಾಂತ್ಯದ ಮತ್ತು ರಾತ್ರಿ ಕರ್ಫ್ಯೂವನ್ನು ಮುಂದುವರೆಸುವುದು ಅನ್ಯಾಯದ ನಿರ್ಣಯ. ಹೋಟೆಲ್, ಬಾರ್ ಅ್ಯಂಡ್ ರೆಸ್ಟೋರೆಂಟ್ ಮತ್ತು ಪ್ರವಾಸೋದ್ಯಮ ವಾರಾಂತ್ಯದ ವ್ಯಾಪಾರ(Business), ವಹಿವಾಟನ್ನೆ ನಂಬಿಕೊಂಡಿದೆ. ಕಳೆದ ಎರಡು ಅಲೆಯಲ್ಲಿ ಉದ್ಯಮ ಹದಗೆಟ್ಟು ಹೋಗಿತ್ತು. ಈಗ ಪುನಃ ಲಾಕ್‌ಡೌನ್(Lockdown), ಕರ್ಫ್ಯೂ ಹೇರುವಂತದ್ದು ಸಮಂಜಸವಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕೋವಿಡ್ ಚಿಕಿತ್ಸೆ(Covid Treatment) ಪಡೆದು ಬಂದ ನಂತರ ಅವರನ್ನು ಮುಂದಿನ ವಾರ ಭೇಟಿಯಾಗಿ ಈ ಬಗ್ಗೆ ಪುನಃ ಮನವಿಯನ್ನು ಸಲ್ಲಿಸುತ್ತೇವೆ. ಒಂದು ವೇಳೆ ಒಪ್ಪದಿದ್ದರೆ ಹೇಗೂ ಬೀದಿ ವ್ಯಾಪಾರಕ್ಕೆ ಈಗಾಗಲೇ ಸರ್ಕಾರ ಅನುಮತಿ ಕೊಟ್ಟಿರುವುದರಿಂದ ಹೋಟೆಲ್‌ಗಳನ್ನು ಬಂದ್ ಮಾಡಿ ಬೀದಿ ವ್ಯಾಪಾರಕ್ಕೆ ಇಳಿದು ಪ್ರತಿಭಟಿಸುತ್ತೇವೆ. ಜೊತೆಗೆ ಕಾನೂನು ಹೋರಾಟವನ್ನು ಕೂಡ ಮಾಡಲು ಸಿದ್ಧತೆ ನಡೆಸಿದ್ದೇವೆ ಎಂದರು.
ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಕಲ್ಯಾಣ ಮಂಟಪ ಮಾಲೀಕರ ಅಸೋಸಿಯೇಷನ್ ಸೇರಿದಂತೆ ಇತರೆ ಉದ್ಯಮದವನ್ನು ಕೂಡ ನಮ್ಮೊಂದಿಗೆ ಸೇರಿಸಿಕೊಂಡು ಒಕ್ಕೂಟ ರಚಿಸಿ ಸರ್ಕಾರದ(Government of Karnataka) ಈ ನಿರ್ಣಯಗಳ ವಿರುದ್ಧ ಹೋರಾಟ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಸರ್ಕಾರ ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಮುಂದುವರೆಸಬಾರದು. ಹೋಟೆಲ್ ಉದ್ಯಮ ಸುಗಮವಾಗಿ ನಡೆಯಲು ಅನುಕೂಲ ಒದಗಿಸಬೇಕು ಎಂದು ಒತ್ತಾಯಿಸಿದರು.
Weekend Curfew ಶಿವಮೊಗಗ್ಗದಲ್ಲಿ ಕೊರೋನಾ, ವೀಕೆಂಡ್ ಕರ್ಫ್ಯೂ ನಗೆಪಾಟಲಿಗೆ
ಮುಂದಿನ ವಾರ 3ನೇ ಅಲೆ ಗರಿಷ್ಠಕ್ಕೆ: ಲಾಕ್ಡೌನ್ ಭೀತಿಯಿಂದ ಮತ್ತೆ ವಲಸಿಗರ ಗುಳೆ ಶುರು!
ಕಳೆದೆರಡು ಕೋವಿಡ್ ಅಲೆಗಳ (Covid 19) ವೇಳೆ ಲಾಕ್‌ಡೌನ್ ಸಮಯದಲ್ಲಿ ದೇಶಾದ್ಯಂತ ಮಹಾನಗರಗಳಿಂದ ತಮ್ಮ ಊರುಗಳಿಗೆ ಭಾರಿ ಪ್ರಮಾಣದಲ್ಲಿ ಮರುವಲಸೆ ಹೋಗಿದ್ದ ಕಾರ್ಮಿಕರು (Migrant Workers) ಮತ್ತೆ ಈಗ ಲಾಕ್‌ಡೌನ್ ಭೀತಿಯಿಂದ ಊರುಗಳಿಗೆ ಮರಳತೊಡಗಿದ್ದಾರೆ. ವಿಶೇಷವಾಗಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಕೋವಿಡ್ ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ ವಿಧಿಸುತ್ತಿದ್ದಂತೆ ಇದು ಕ್ರಮೇಣ ಲಾಕ್‌ಡೌನ್ ಆಗಿ ಬದಲಾಗಬಹುದು ಎಂಬ ಭೀತಿಯಿಂದ ಕಾರ್ಮಿಕರು ಗುಳೆ ಆರಂಭಿಸಿದ್ದಾರೆ.
ಕೊರೋನಾದ ಮೊದಲೆರಡು ಅಲೆಗಳ ವೇಳೆ ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರು ಆಹಾರವಿಲ್ಲದೆ, ಆರೋಗ್ಯ ಸೌಕರ್ಯಗಳಿಲ್ಲದೆ ಹಾಗೂ ಜೀವನ ನಡೆಸಲು ಹಣವೂ ಇಲ್ಲದೆ ಪಡಬಾರದ ಪಾಡು ಪಟ್ಟಿದ್ದರು. ಲಕ್ಷಾಂತರ ಕಾರ್ಮಿಕರು ಸಿಕ್ಕಸಿಕ್ಕ ವಾಹನ ಏರಿ, ಕೆಲವರು ಕಾಲ್ನಡಿಗೆಯಲ್ಲಿ, ಇನ್ನು ಕೆಲವರು ಬೈಕು, ಸೈಕಲ್‌ಗಳಲ್ಲೂ ಊರುಗಳಿಗೆ ಮರಳಿದ್ದರು. ಅನೇಕರು ದಾರಿ ಮಧ್ಯೆ ಅಸುನೀಗಿದ ದಾರುಣ ಘಟನೆಗಳೂ ನಡೆದಿದ್ದವು. ಆ ಸಮಯದಲ್ಲಿ ನಗರಗಳಲ್ಲೇ ಉಳಿದು ಕಷ್ಟಅನುಭವಿಸಿದವರು ಹಾಗೂ ಕೋವಿಡ್ ಜಾಸ್ತಿಯಾದಂತೆ ಸಾರಿಗೆ ಸೌಕರ್ಯಗಳು ಸಿಗದೆಹೋಗಬಹುದು ಎಂದು ಭಯಕ್ಕೆ ಬಿದ್ದವರು ಈಗಲೇ ಊರುಗಳಿಗೆ ಧಾವಿಸತೊಡಗಿದ್ದಾರೆ.