Corona ಸಂಕಟದಲ್ಲಿದ್ದ ಹೊಟೇಲ್ ಉದ್ಯಮಿಗಳು ಈಗ ಫುಲ್ ಖುಷ್!
ಕೊರೊನಾ ಸಂದರ್ಭದಲ್ಲಿ ಹೊಟೇಲ್ ಉದ್ಯಮಿಗಳು ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಒಂದು ರೂಮ್ ಕೂಡ ಬುಕ್ ಆಗ್ತಿರಲಿಲ್ಲ. ಆದ್ರೀಗ ರೂಮ್ ಬೇಕೆಂದ್ರೂ ಕೊಡೋಕೆ ರೂಮ್ ಇಲ್ಲ. ಹೊಟೇಲ್ ಉದ್ಯಮ ಮತ್ತೆ ಚೇತರಿಸಿಕೊಂಡಿದೆ.
ಕೊರೊನಾ (Corona) ಮಹಾಮಾರಿ ಇಡೀ ವಿಶ್ವ (World) ದ ಚಿತ್ರಣವನ್ನು ಬದಲಿಸಿತ್ತು. ಕೊರೊನಾ ಹಾಗೂ ಲಾಕ್ ಡೌನ್ (Lockdown) ಕಾರಣಕ್ಕೆ ಜನರು ಮನೆಯಿಂದ ಹೊರ ಬೀಳಲು ಹೆದರುತ್ತಿದ್ದರು. ಇದ್ರಿಂದಾಗಿ ಅನೇಕ ಕ್ಷೇತ್ರಗಳು ವಿಪರೀತ ನಷ್ಟವನ್ನನುಭವಿಸಿದ್ದವು. ಅದ್ರಲ್ಲಿ ಹೋಟೆಲ್ ಉದ್ಯಮ (Hotel Industry) ಕೂಡ ಸೇರಿದೆ. ಕೊರೊನಾ ಸಂದರ್ಭದಲ್ಲಿ ಪ್ರವಾಸೋದ್ಯಮ (Tourism) ಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಪ್ರವಾಸೋದ್ಯಮ ನಂಬಿದ್ದ ಜನರು ಬೀದಿಗೆ ಬಿದ್ದಿದ್ದರು. ಹೊಟೇಲ್ ಗಳು ಖಾಲಿ ಹೊಡೆಯುತ್ತಿದ್ದವು. ಹೊಟೇಲ್ ರೂಮು (Room) ಗಳ ಬುಕ್ಕಿಂಗ್ (Booking ) ಸಂಪೂರ್ಣ ಬಂದಾಗಿತ್ತು. ಈ ಸಂದರ್ಭದಲ್ಲಿ ಅನೇಕ ಹೊಟೇಲ್ ಗಳು ಬಾಗಿಲು ಮುಚ್ಚಿದ್ದವು. ಆದ್ರೆ ಕೊರೊನಾ ನಿಯಂತ್ರಣಕ್ಕೆ ಬರ್ತಿದ್ದಂತೆ ಸರ್ಕಾರ ಅನೇಕ ನಿರ್ಬಂಧಗಳನ್ನು ಸಡಿಲಗೊಳಿಸಿತು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡ್ತಿದೆ. ಇದ್ರಿಂದಾಗಿ ಹೊಟೇಲ್ ಉದ್ಯಮವು ಮತ್ತೆ ಚೇತರಿಕೆ ಕಂಡಿದೆ. ಕೊರೊನಾ ಪೂರ್ವಕ್ಕಿಂತ ಕೊರೊನಾ ನಂತ್ರ ಹೊಟೇಲ್ ಗಳಲ್ಲಿ ಹೆಚ್ಚಿನ ಜನರನ್ನು ನೋಡ್ಬಹುದು. ಇತ್ತೀಚಿನ ದಿನಗಳಲ್ಲಿ ಪ್ರವಾಸಕ್ಕೆ ಹೋಗ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಪ್ರವಾಸಿ ತಾಣಗಳಲ್ಲಿ ಹೊಟೇಲ್ ರೂಮ್ ಗಳು ಸಿಗ್ತಿಲ್ಲ. ರೂಮ್ ಬುಕ್ಕಿಂಗ್ (Room Booking ) ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ. ಇದು ಹೊಟೇಲ್ ಉದ್ಯಮಿಗಳಿಗೆ ದೊಡ್ಡ ಮಟ್ಟದಲ್ಲಿ ಲಾಭ ತಂದುಕೊಡ್ತಿದೆ.
ವರದಿ (Report) ಏನು ಹೇಳುತ್ತೆ ? : ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ವರದಿಯ ಪ್ರಕಾರ, ಏಪ್ರಿಲ್ 2022 ರಲ್ಲಿ ಹೋಟೆಲ್ ಆಕ್ಯುಪೆನ್ಸಿ ಶೇಕಡಾ 65 ಕ್ಕಿಂತ ಹೆಚ್ಚಾಗಿದೆ. ಇದು ಏಪ್ರಿಲ್ 2019 ರ ಅಂಕಿ ಅಂಶಗಳಿಗಿಂತ ಶೇಕಡಾ ಒಂದರಷ್ಟು ಹೆಚ್ಚು. ಹೋಟೆಲ್ ಕೊಠಡಿಗಳ ಬುಕಿಂಗ್ ಕೂಡ ಕೋವಿಡ್-19 ಪೂರ್ವದ ಮಟ್ಟವನ್ನು ದಾಟಿದೆ. ಅಂದ್ರೆ ಕೊರೊನಾ ಪೂರ್ವಕ್ಕಿಂತ ಈಗ ಹೊಟೇಲ್ ಬುಕ್ಕಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ವಾಣಿಜ್ಯ ನಗರಿ ಮುಂಬೈ ಇದ್ರಲ್ಲಿ ಮುಂದಿದೆ. ಅಲ್ಲಿನ ಎಲ್ಲ ಹೊಟೇಲ್ ರೂಮ್ ಗಳು ಸದಾ ತುಂಬಿರುತ್ತವೆ.
Gold and Silver Price: ಚಿನ್ನ ಇಂದು ಅಗ್ಗ, ಹೀಗಿದೆ ಇಂದಿನ ಬಂಗಾರ, ಬೆಳ್ಳಿ ದರ!
ಬುಕಿಂಗ್ ಹೆಚ್ಚಳದಿಂದ ಆದಾಯದಲ್ಲಿ ಹೆಚ್ಚಳ : ಎ ಆರ್ ಆರ್ (ARR ) ಸಹ ಏಪ್ರಿಲ್ 2019 ಕ್ಕೆ ಹೋಲಿಸಿದರೆ ಶೇಕಡಾ 4 ಅಂದ್ರೆ 5,850 ಕ್ಕೆ ಏರಿಕೆಯಾಗಿದೆ. ಹೋಟೆಲ್ ಕೊಠಡಿ ಬುಕಿಂಗ್ ಶೇಕಡಾ 65 ಕ್ಕೆ ತಲುಪಿದೆ. ಈ ಕಾರಣದಿಂದಾಗಿ ಲಭ್ಯವಿರುವ ಕೋಣೆಗೆ ಆದಾಯ (Income) ವು ಏಪ್ರಿಲ್ 2019 ಕ್ಕೆ ಹೋಲಿಸಿದರೆ ಶೇಕಡಾ ಐದು ರಷ್ಟು ಹೆಚ್ಚಾಗಿ 3,804 ರೂಪಾಯಿಗೆ ತಲುಪಿದೆ. ಈಸ್ಟ್ ಇಂಡಿಯಾ ಹೋಟೆಲ್ (East India Hotel ) ಹೆಚ್ಚು ಬೆಳವಣಿಗೆ ಕಂಡಿದೆ. ಎರಡನೇ ಸ್ಥಾನದಲ್ಲಿ ಇಂಡಿಯನ್ ಹೊಟೇಲ್ಸ್ ಇದೆ. ಇನ್ನು ಮೂರನೇ ಸ್ಥಾನದಲ್ಲಿ ಚಾಲೆಟ್ ಇದ್ರೆ ಲೆಮನ್ ಟ್ರೀ ಕ್ರಮವಾಗಿ ನಾಲ್ಕನೇ ಸ್ಥಾನದಲ್ಲಿದೆ.
GOLD AND SILVER PRICE: ಹೇಗಿದೆ ಇಂದಿನ ಚಿನ್ನ, ಬೆಳ್ಳಿ ದರ? ಇಲ್ಲಿದೆ ಇಂದಿನ ದರ
ಮುಂದುವರೆದಿದೆ ಹೊಟೇಲ್ ಉದ್ಯಮದ ಬೆಳವಣಿಗೆ : ಕೊರೊನಾ ನಂತ್ರ ಹೊಟೇಲ್ ಬೆಳವಣಿಗೆ ನಿರಂತರವಾಗಿ ಏರಿಕೆ ಕಾಣ್ತಿದೆ. ಚಾಲೆಟ್, ಈಸ್ಟ್ ಇಂಡಿಯಾ ಹೋಟೆಲ್‌ಗಳು, ಲೆಮನ್ ಟ್ರೀ ಮತ್ತು ಇಂಡಿಯನ್ ಹೋಟೆಲ್‌ಗಳ ಒಟ್ಟು ಆದಾಯವು ತ್ರೈಮಾಸಿಕ ಆಧಾರದ ಮೇಲೆ ಶೇಕಡಾ 19 ರಷ್ಟು ಕಡಿಮೆಯಾಗಿದೆ. ಆದರೆ ವಾರ್ಷಿಕ ಆಧಾರದ ಮೇಲೆ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 41 ರಷ್ಟು ಬೆಳವಣಿಗೆಯಾಗಿದೆ. ವಾರ್ಷಿಕ ಆಧಾರದ ಮೇಲೆ ಚಾಲೆಟ್ ಶೇಕಡಾ 51 ಹೆಚ್ಚು ಆದಾಯವನ್ನು ಗಳಿಸಿದೆ. ಇಂಡಿಯನ್ ಹೋಟೆಲ್ಸ್ ಶೇಕಡಾ 42 ರಷ್ಟು ಆದಾಯವನ್ನು ಗಳಿಸಿದೆ. ಇನ್ನು ಈಸ್ಟ್ ಇಂಡಿಯಾ ಹೋಟೆಲ್ಸ್ ಶೇಕಡಾ 40ರಷ್ಟು ಆದಾಯವನ್ನು ಗಳಿಸಿದೆ.