* ಅಡುಗೆ ಅನಿಲ, ಎಣ್ಣೆ ಬೆಲೆ ಏರಿಕೆ ಹಿನ್ನೆಲೆ* ತಿಂಡಿ-ತಿನಿಸುಗಳ ಬೆಲೆ ಏರಿಕೆಗೆ ನಿರ್ಧಾರ* ಹೋಟಲ್ ತಿಂಡಿ, ತಿನಿಸು, ಊಟದ ದರ ಏರಿಕೆ ಅನಿವಾರ್ಯ
ಬೆಂಗಳೂರು(ಮಾ.31): ಅಡುಗೆ ಅನಿಲ, ಎಣ್ಣೆ(Edible Oil), ಹಾಗೂ ತೈಲ ದರ(Fuel Price) ಹೆಚ್ಚಾದ ಹಿನ್ನೆಲೆಯಲ್ಲಿ ಹೋಟಲ್(Hotel) ತಿಂಡಿ ತಿನಿಸುಗಳ ಬೆಲೆ ಏಪ್ರಿಲ್ ಮೊದಲ ವಾರದಲ್ಲಿ ಹೆಚ್ಚಾಗಲಿದೆ ಎಂದು ಬೆಂಗಳೂರು ಹೋಟಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದರು.
ಕೋವಿಡ್(Covid-19) ಆರ್ಥಿಕ ಸಂಕಷ್ಟದಿಂದಾಗಿ ಹೋಟಲ್‌ಗೆ ಬರುವ ಗ್ರಾಹಕರು(Customers) ಸಂಖ್ಯೆ ಕಡಿಮೆಯಾಗುವ ಆತಂಕದಿಂದ ತಿಂಡಿ-ತಿನಿಸು ದರ ಏರಿಕೆ ಮಾಡಿರಲಿಲ್ಲ. ಸದ್ಯ ಅಡುಗೆ ಎಣ್ಣೆ (ಲೀಟರ್‌ಗೆ .200), ಅಡುಗೆ ಅನಿಲ (.50 ಹೆಚ್ಚಳ) ಬೆಲೆ ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ದರವು ಅಲ್ಪ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಇದರಿಂದ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಲಿವೆ.
ಇಂಧನ ಬೆಲೆ ಏರಿಕೆಗೆ ಏನು ಕಾರಣ? ಸಚಿವೆ ನಿರ್ಮಲಾ ಕೊಟ್ಟ ಉತ್ತರವಿದು
ಹೀಗಾಗಿ ಸಂಘ ಈ ಮೊದಲೇ ತೀರ್ಮಾನಿಸಿದಂತೆ ಏ.1ರಿಂದ ಕರಿದ ಪೂರಿ, ವಡೆ, ಹಪ್ಪಳ, ಬನ್ಸ್, ಬಜ್ಜಿ ಇನ್ನಿತರ ತಿಂಡಿ ತಿನಿಸುಗಳು ಹಾಗೂ ಊಟದ ದರದಲ್ಲಿ ಶೇ.10ರಷ್ಟು ಹೆಚ್ಚಿಸುವ ಚಿಂತನೆಯಲ್ಲಿದ್ದೇವೆ. ಆಗ .40ನ ಪ್ಲೇಟ್ ಪೂರಿ .45, .20 ಒಂದು ಉದ್ದಿನ ವಡೆ .25 ಆಗಲಿವೆ. ದರ ಏರಿಕೆ ಬಳಿಕ ನಾಲ್ಕು ದಿನದ ವ್ಯಾಪಾರ, ವಹಿವಾಟು ನೋಡಿಕೊಂಡು ಪುನಃ ಏ.4ರಂದು ಸಂಘದ ಸದಸ್ಯರ ಜತೆಗೆ ಸಭೆ ನಡೆಸಿ ಚರ್ಚಿಸಲಿದ್ದೇವೆ. ಈ ಮೂಲಕ ವಿವಿಧ ವಸ್ತುಗಳ ಬೆಲೆ ಏರಿಕೆ ಕಾರಣದಿಂದ ಹೋಟಲ್ ಪದಾರ್ಥಗಳ ಬೆಲೆ ಸಹ ಏರಿಕೆಯಾಗುವುದು ನಿಶ್ಚಿತ ಎಂಬುದನ್ನು ಅವರು ಖಚಿತಪಡಿಸಿದರು.
ಅಡುಗೆ ಎಣ್ಣೆ ದರ ಏರಿಕೆ ತಾತ್ಕಾಲಿಕವಾಗಿದ್ದು, ಕೆಲವು ದಿನಗಳಲ್ಲಿ ಪುನಃ ಇಳಿಕೆಯಾಗಬಹುದು ಎಂದು ಭಾವಿಸಿದ್ದೆವು. ಆದರೆ ಅಂದುಕೊಂಡಂತೆ ಬೆಲೆ ಇಳಿಕೆ ಆಗಲಿಲ್ಲ. ಹೋಟಲ್ ಪದಾರ್ಥಗಳ ಈಗಿನ ಬೆಲೆಯಲ್ಲಿ ಆದಾಯ ಪಡೆಯುವುದು, ಅಗತ್ಯ ಸಾಮಗ್ರಿಗಳ ಖರ್ಚು ವೆಚ್ಚ, ಸಿಬ್ಬಂದಿ ವೇತನ, ವಿದ್ಯುತ್, ನೀರಿನ ಬಿಲ್ ಸೇರಿದಂತೆ ನಿರ್ವಹಣೆ ಕಷ್ಟವಾಗುತ್ತಿದೆ. ಪರಿಣಾಮ ಹೋಟಲ್ ತಿಂಡಿ, ತಿನಿಸು, ಊಟದ ದರ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದರು.
ಸಂಘದ ತೀರ್ಮಾನಕ್ಕೂ ಮುನ್ನವೇ ನಗರದ ಹಲವೆಡೆ ಹೋಟಲ್‌ಗಳಲ್ಲಿ ಕೆಲವು ದಿನಗಳ ಹಿಂದೆಯೇ ತಿಂಡಿಗಳ ದರ ಶೇ.10ರಷ್ಟುಏರಿಕೆ ಮಾಡಿರುವುದು ಕಂಡು ಬಂದಿದೆ. ಇದು ಗ್ರಾಹಕರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.
9 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 5.60 ರೂ ಏರಿಕೆ!
ನವದೆಹಲಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸತತ ಏರಿಕೆ ಕಂಡುಬರುತ್ತಿದ್ದು, ಬುಧವಾರ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರಿಗೆ 80 ಪೈಸೆಯಷ್ಟುಏರಿಕೆಯಾಗಿದೆ. ಈ ಮೂಲಕ ಕಳೆದ 9 ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ 5.60 ರು.ಗಳಷ್ಟುತುಟ್ಟಿಯಾಗಿದೆ. ಮಾಚ್‌ರ್ 22 ರಿಂದ ಈವರೆಗೆ ಒಟ್ಟು 9 ಬಾರಿ ಇಂಧನದ ಬೆಲೆಯನ್ನು ಪರಿಷ್ಕರಿಸಲಾಗಿದೆ.
Fuel Price Hike ವಾರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 4.80 ರು.ಏರಿಕೆ!
ಈ ಮೂಲಕ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 101.01 ರು. ಹಾಗೂ ಡೀಸೆಲ್ ಬೆಲೆಯು 92.27 ರು.ಗೆ ಏರಿಕೆಯಾಗಿದೆ. ಮುಂಬೈಯಲ್ಲಿ ಪೆಟ್ರೋಲ್ ಬೆಲೆ 155.88 ರು. ಹಾಗೂ ಡೀಸೆಲ್ ಬೆಲೆ 100.10 ರು. ರಷ್ಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 106.46 ರು. ಹಾೂ ಡೀಸೆಲ್ ಬೆಲೆ 90.49 ರು.ಗೆ ಏರಿಕೆಯಾಗಿದೆ.
ಬೆಲೆಯೇರಿಕೆ ವಿರುದ್ಧ ರಾಹುಲ್ ಕಿಡಿ
ಇಂಧನದ ಬೆಲೆಯೇರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಟ್ವೀಟರ್‌ನಲ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ರೋಜ್ ಸುಭಾ ಕೀ ಬಾತ್’ (ಪ್ರತಿ ಮುಂಜಾನೆಯ ಕೆಲಸ) ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ರಾಹುಲ್ ‘ಪ್ರಧಾನಿಯ ದೈನಂದಿನ ಕೆಲಸದ ಪಟ್ಟಿಯು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆಯನ್ನು ಏರಿಸುವುದು, ರೈತರನ್ನು ಮತ್ತಷ್ಟುಅಸಹಾಯಕರನ್ನಾಗಿ ಮಾಡುವುದು ಹಾಗೂ ಯುವಜನತೆಗೆ ಉದ್ಯೋಗದ ಸುಳ್ಳು ಭರವಸೆಯನ್ನು ನೀಡುವುದು, ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುವುದು ಮುಂತಾದ ಅಂಶಗಳನ್ನು ಒಳಗೊಂಡಿದೆ’ ಎಂದು ಟ್ವೀಟ್ ಮಾಡಿದ್ದಾರೆ.
