Home Loan Rate Hike: ಗೃಹಸಾಲದ ತಿಂಗಳ ಇಎಂಐ ಹೊರೆ ತಗ್ಗಿಸಲು ಇರುವ ಮಾರ್ಗಗಳೇನು?ಇಲ್ಲಿದೆ ಮಾಹಿತಿ

ಆರ್ ಬಿಐ ರೆಪೋ ದರ ಏರಿಕೆ ಮಾಡಿದ ಬೆನ್ನಲ್ಲೇ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಲು ಮುಂದಾಗಿವೆ. ಇದ್ರಿಂದ ಗೃಹಸಾಲದ ಇಎಂಐ ಹೆಚ್ಚಳವಾಗೋ ಮೂಲಕ ಸಾಲಗಾರರ ಜೇಬಿಗೆ ಹೆಚ್ಚಿನ ಹೊರೆಯಾಗಲಿದೆ. ಇಂಥ ಸಂದರ್ಭದಲ್ಲಿ ಇಎಂಐ ಹೊರೆ ತಗ್ಗಿಸಲು ಇರುವ ಆಯ್ಕೆಗಳೇನು? ಇಲ್ಲಿದೆ ಮಾಹಿತಿ.
 

Home loan rate hikes Should you increase EMI or tenure of the home loan details here

Business Desk:ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ರೆಪೋ ದರವನ್ನು (Repo rate) ಶೇ.4ರಿಂದ ಶೇ.4.40ಕ್ಕೆ ಏರಿಕೆ ಮಾಡುವ ಮೂಲಕ ಬ್ಯಾಂಕುಗಳಿಂದ ಗೃಹ, ವಾಹನ ಸಾಲ ಪಡೆದಿರುವ ಗ್ರಾಹಕರಿಗೆ ಶಾಕ್ ನೀಡಿದೆ. ರೆಪೋ ದರ ಏರಿಕೆ ಹಿನ್ನೆಲೆಯಲ್ಲಿ ಈಗಾಗಲೇ ಕೆಲವು ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಏರಿಕೆ ಮಾಡಿದ್ದು, ಉಳಿದ ಬ್ಯಾಂಕುಗಳು ಕೂಡ ಹೆಚ್ಚಳ ಮಾಡುವುದು ಖಚಿತ. ಹೀಗಾಗಿ ರೆಪೋ ದರ ಆಧಾರಿತ  ಗೃಹ, ವಾಹನ ಸಾಲಗಳ ಇಎಂಐ ಹೊರೆ ಹೆಚ್ಚಾಗಲಿದೆ. ಅದರಲ್ಲೂ ಗೃಹಸಾಲ ದೀರ್ಘಾವಧಿಯದ್ದಾಗಿರುವ ಕಾರಣ ಇಎಂಐ  ಹೆಚ್ಚಳ ಸಾಲ ಪಡೆದವರ ಮೇಲೆ ಜಾಸ್ತಿ  ಪರಿಣಾಮ ಬೀರುತ್ತದೆ. ಇಂಥ ಸಮಯದಲ್ಲಿ ತಿಂಗಳ ಇಎಂಐ ಹೊರೆ ತಗ್ಗಿಸಲು  ಇರುವ ಮಾರ್ಗಗಳೇನು? ಇಲ್ಲಿದೆ ಮಾಹಿತಿ. 

ಇಎಂಐ ಎಷ್ಟು ಹೆಚ್ಚಬಹುದು?
ಗೃಹಸಾಲ ಸೇರಿದಂತೆ ರೆಪೋದರ ಆಧಾರಿತ ಎಲ್ಲ ಸಾಲಗಳು ದುಬಾರಿಯಾಗಲಿವೆ. ಉದಾಹರಣೆಯೊಂದಿಗೆ ನೋಡುವುದಾದ್ರೆ ನೀವು 50 ಲಕ್ಷ ರೂ. ಗೃಹ ಸಾಲವನ್ನು 20 ವರ್ಷಗಳ ಅವಧಿಗೆ ಪ್ರಸ್ತುತ ಶೇ.6.7 ಬಡ್ಡಿದರದಲ್ಲಿ ಪಡೆದಿದ್ದರೆ, ನಿಮ್ಮ ಇಎಂಐಯಲ್ಲಿ ಸುಮಾರು  1,200 ರೂ. ಏರಿಕೆಯಾಗಲಿದೆ. ಹಾಗೆಯೇ ನಿಮ್ಮ ಗೃಹ ಸಾಲ 75ಲಕ್ಷ ರೂ. ಆಗಿದ್ರೆ ಇಎಂಐಯಲ್ಲಿ  1,800 ರೂ. ಹೆಚ್ಚಳವಾಗುತ್ತದೆ.  ದೇಶದಲ್ಲಿ ಹಣದುಬ್ಬರ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್ ಬಿಐಗೆ ರೆಪೋದರ ಏರಿಕೆ ಮಾಡುವುದು ಅನಿವಾರ್ಯವಾಗಿತ್ತು. ಹೀಗಾಗಿ ಗೃಹ ಸಾಲ ಸೇರಿದಂತೆ ರೆಪೋ ಆಧಾರಿತ  ಸಾಲಗಳ ದರ ((RLLR) ಹೆಚ್ಚಲಿದೆ. ಇದ್ರಿಂದ ಇಎಂಐ ಕೂಡ ಏರಿಕೆಯಾಗಲಿದೆ. 

Repo Rate:ರೆಪೋ ದರ ಹೆಚ್ಚಳದಿಂದ ಸಾಲಗಾರರಿಗೆ ಕಹಿ, ಠೇವಣಿದಾರರಿಗೆ ಸಿಹಿ; ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ಈ ಬ್ಯಾಂಕುಗಳು ಬಡ್ಡಿದರ ಹೆಚ್ಚಿಸಿವೆ
ರೆಪೋ ದರ (Repo rate) ಏರಿಕೆ ಮಾಡಿದ ಬೆನ್ನಲ್ಲೇ ಐಸಿಐಸಿಐ ಬ್ಯಾಂಕ್ (ICICI) ಹಾಗೂ ಬ್ಯಾಂಕ್ ಆಫ್ ಬರೋಡಾ  (Bank of Baroda) ರೆಪೋ ಆಧಾರಿತ ಗೃಹ ಹಾಗೂ ವಾಹನ ಸಾಲಗಳ ಮೇಲಿನ  ಬಡ್ಡಿದರ (Interest rate) ಹೆಚ್ಚಳ ಮಾಡಿವೆ. ಐಸಿಐಸಿಐ ಬ್ಯಾಂಕ್ ಮೇ 4ರಿಂದಲೇ ಜಾರಿಗೆ ಬರುವಂತೆ ಎಕ್ಸ್ ಟರ್ನಲ್ ಬೆಂಚ್ ಮಾರ್ಕ್ ಲೆಂಡಿಂಗ್ ರೇಟ್ (EBLR) ಅನ್ನು ಶೇ.8.10ಕ್ಕೆ ಏರಿಕೆ ಮಾಡಿದೆ. ಹಾಗೆಯೇ ಬ್ಯಾಂಕ್ ಆಫ್ ಬರೋಡಾ ಕೂಡ ರೆಪೋ ಆಧಾರಿತ ಸಾಲದ ದರವನ್ನು 40 ಬಿಪಿಎಸ್ ಗಳಷ್ಟು ಏರಿಕೆ ಮಾಡುವ ಮೂಲಕ ಶೇ.6.90 ಕ್ಕೆ ಹೆಚ್ಚಿಸಿದ್ದು, ಮೇ 5ರಿಂದಲೇ ಅನ್ವಯಿಸಲಿದೆ. ಬ್ಯಾಂಕ್ ಆಫ್ ಬರೋಡಾ  ಏಪ್ರಿಲ್ ನಲ್ಲಿ ಕೂಡ ಬಡ್ಡಿದರವನ್ನು ಶೇ.0.1ರಷ್ಟು ಹೆಚ್ಚಿಸಿತ್ತು. ವಿವಿಧ ಬ್ಯಾಂಕುಗಳು ಬಡ್ಡಿದರ ಶೇ.0.50ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. 

Interest Rate Hike:ಬಡ್ಡಿದರ ಏರಿಕೆ ಮಾಡಿದ ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ; ಹೆಚ್ಚಲಿದೆ ಗೃಹ, ವಾಹನ ಸಾಲಗಳ ಇಎಂಐ

ಇಎಂಐ ಹೊರೆ ತಗ್ಗಿಸುವುದು ಹೇಗೆ? 
ಗೃಹಸಾಲಗಳ ಮೇಲಿನ ಬಡ್ಡಿದರ ಹೆಚ್ಚಳದಿಂದ ತಿಂಗಳ ಇಎಂಐ ಪಾವತಿಯಲ್ಲಿ ಏರಿಕೆಯಾಗುವುದು ಸಹಜ. ಆದ್ರೆ ಇತ್ತೀಚಿನ ದಿನಗಳಲ್ಲಿ ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಈಗಾಗಲೇ ಜೀವನ ನಿರ್ವಹಣೆ ದುಬಾರಿಯಾಗಿದೆ. ತಿಂಗಳ ವೇತನದಲ್ಲಿ ನಿತ್ಯದ ಖರ್ಚು ವೆಚ್ಚಗಳನ್ನು ನಿಭಾಯಿಸುವುದೇ ಕಷ್ಟವಾಗಿದೆ. ಇಂಥ ಸಂದರ್ಭದಲ್ಲಿ ಇಎಂಐ ಹಚ್ಚಳ ಖಂಡಿತವಾಗಿಯೂ ಬಹುತೇಕರ ಜೇಬಿಗೆ ಹೊರೆಯಾಗಲಿದೆ. ಇಂಥ ಸಂದರ್ಭದಲ್ಲಿ ಇಎಂಐ ಹೊರೆ ತಗ್ಗಿಸಲು ಎರಡು ಆಯ್ಕೆಗಳಿವೆ. ಒಂದು ಸಾಲದ ಅವಧಿ ವಿಸ್ತರಣೆ. ಇನ್ನೊಂದು ಸಾಲದ ಸ್ವಲ್ಪ ಮೊತ್ತವನ್ನು ಅವಧಿಗೂ ಮುನ್ನವೇ ಪಾವತಿಸುವುದು. ಇದ್ರಿಂದ ಇಎಂಐ ಭಾರ ತಗ್ಗಲಿದೆ. ಗೃಹಸಾಲಗಳು ದೀರ್ಘಾವಧಿಯದ್ದಾಗಿರುವ ಕಾರಣ ಅವಧಿಗೂ ಮುನ್ನವೇ ಪಾವತಿ ಮಾಡುವ ಅವಕಾಶವಿದೆ. ಹೀಗಾಗಿ ಸಾಲವನ್ನು ಆದಷ್ಟು ಬೇಗನೇ ತೀರಿಸಲು ಪ್ರಯತ್ನಿಸಿ. ಇದು ಸಾಧ್ಯವಾಗದವರು ಪ್ರತಿ ವರ್ಷ ನಿಗದಿತ ಮೊತ್ತಕ್ಕಿಂತ ಸ್ವಲ್ಪ ಹೆಚ್ಚಿನ ಮೊತ್ತವನ್ನು ಸಾಲದ ಖಾತೆಗೆ ಹಾಕುವ ಮೂಲಕ ಇಎಂಐ ಹೊರೆಯನ್ನು ತುಸು ತಗ್ಗಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಪ್ರತಿ ತಿಂಗಳು ನಿಗದಿತ ಇಎಂಐಯಷ್ಟೇ ಪಾವತಿ ಸುಮ್ಮನಿರುವ ಬದಲು ಪ್ರತಿವರ್ಷ ಉಳಿತಾಯದಲ್ಲಿ ಒಂದಿಷ್ಟು ಮೊತ್ತವನ್ನು ಸಾಲಕ್ಕೆ ಮರುಪಾವತಿ ಮಾಡುವುದು ಉತ್ತಮ. ಇದು ಚಿಕ್ಕ ಮೊತ್ತವೇ ಆಗಿದ್ದರೂ ಇಎಂಐ ಹೊರೆ ತಗ್ಗಿಸುವಲ್ಲಿ ಇದರ ಪಾತ್ರ ಮಹತ್ವದಾಗಿರುತ್ತದೆ. 

Latest Videos
Follow Us:
Download App:
  • android
  • ios