ಹೊಸ ಆರ್ಥಿಕ ವರ್ಷ ಆರಂಭಕ್ಕೂ ಮುನ್ನವೇ ಈ ಕಂಪನಿ ತನ್ನ ನೌಕರರಿಗೆ ಬೋನಸ್ ಘೋಷಿಸಿದೆ. ಇದು ಬರೋಬ್ಬರಿ 4 ಲಕ್ಷ ರೂಪಾಯಿ. ಫೆಬ್ರವರಿ ವೇತನ ಜೊತೆಗೆ ನೌಕರರು 4 ಲಕ್ಷ ರೂಪಾಯಿ ಬೋನಸ್ ಪಡೆಯಲಿದ್ದಾರೆ. 

ದೀಪಾವಳಿ, ಹೊಸ ವರ್ಷ ಹೀಗೆ ಕೆಲ ಸಂದರ್ಭಗಳಲ್ಲಿ ಭಾರತದ ಕೆಲ ಕಂಪನಿಗಳು ಬೋನಸ್, ದುಬಾರಿ ಉಡುಗೊರೆ ನೀಡಿ ಸದ್ದು ಮಾಡಿದೆ. ಇದೀಗ ಫ್ಯಾಶನ್ ಬ್ರ್ಯಾಂಡ್ ಕಂಪನಿಯೊಂದು 20245ರಲ್ಲಿ ಲಾಭ ಗಳಿಸಿದೆ ಅನ್ನೋ ಕಾರಣಕ್ಕೆ ನೌಕರರಿಗೆ ಫೆಬ್ರವರಿ ಸಂಬಳ ಜೊತೆಗೆ ಬರೋಬ್ಬರಿ 4 ಲಕ್ಷ ರೂಪಾಯಿ ಬೋನಸ್ ನೀಡಲು ಮುಂದಾಗಿದೆ. ಕಂಪನಿ ಈ ಘೋಷಣೆ ಮಾಡುತ್ತಿದ್ದಂತೆ ನೌಕರರ ಸಂಭ್ರಮ ಡಬಲ್ ಆಗಿದೆ. ಕಂಪನಿ ಪ್ರಗತಿ ಹಾಗೂ ಲಾಭವನ್ನು ಉದ್ಯೋಗಿಗಳಿಗೆ ಹಂಚಲು ಕಂಪನಿ ನಿರ್ಧಾರ ಮಾಡಿದೆ.

ಇದು ಫ್ರಾನ್ಸ್ ಮೂಲದ ಹರ್ಮೆಸ್ ಫ್ಯಾಶನ್ ಬ್ರ್ಯಾಂಡ್ ಕಂಪನಿ. ಹಲವು ದೇಶಗಳಲ್ಲಿ ಹರ್ಮೆಸ್ ಬ್ರ್ಯಾಂಡ್ ಚಾಲ್ತಿಯಲ್ಲಿದೆ. ನೌಕರರಿದ್ದಾರೆ. ಇದೀಗ ತನ್ನ ಎಲ್ಲಾ ನೌಕರರಿಗೆ ಬೋನಸ್ ರೂಪದಲ್ಲಿ 4 ಲಕ್ಷ ರೂಪಾಯಿ ಘೋಷಿಸಿದೆ. ಫೆಬ್ರವರಿ ಅಂತ್ಯದಲ್ಲಿ ವೇತನ ಜೊತೆಗೆ 4 ಲಕ್ಷ ರೂಪಾಯಿ ಬೋನಸ್ ಪಡೆಯಲಿದ್ದಾರೆ. 2024ರಲ್ಲಿ ಹರ್ಮೆಸ್ 15.2 ಮಿಲಿಯನ್ ಯೂರೋ ಆದಾಯಗಳಿಸಿದೆ. ಅಂದರೆ ಶೇಕಡಾ 15ರಷ್ಟು ಆದಾಯ ಏರಿಕೆಯಾಗಿದೆ ಎಂದು ಹರ್ಮೆಸ್ ಹೇಳಿಕೊಂಡಿದೆ.

ನನಗೆ ಒಂದು ರೂಪಾಯಿ ಸಂಬಳ ಬೇಡ, ಬೆಂಗ್ಳೂರು ಟೆಕ್ಕಿ ಮನವಿಯಿಂದ ಹೆಚ್ಚಿದ ಆತಂಕ

ಹರ್ಮೆಸ್ ಫ್ಯಾಶನ್ ಬ್ರ್ಯಾಂಡ್ ಕಂಪನಿಯಲ್ಲಿ ಒಟ್ಟು 25,000 ಉದ್ಯೋಗಿಗಳಿದ್ದಾರೆ. ಈ ಪೈಕಿ ಇತ್ತೀಚೆಗೆ 2,300 ಉದ್ಯೋಗಿಗಳು ಹೊಸದಾಗಿ ಸೇರಿಕೊಂಡಿದ್ದಾರೆ. ಈ ಹೊಸಬರಿಗೂ ಬೋನಸ್ ಘೋಷಣೆಯಾಗಿದೆ. ಇತ್ತೀಚೆಗೆ ಸೇರಿಕೊಂಡ ಉದ್ಯೋಗಿಗಳ ಸಂಭ್ರಮ ಜೋರಾಗಿದೆ. ಹೊಸದಾಗಿ ಕಂಪನಿ ನೇಮಕಮಾಡಿದ 2,300 ಮಂದಿಯಲ್ಲಿ 1,300 ಮಂದಿ ಫ್ರಾನ್ಸ್‌ನಲ್ಲೇ ನೇಮಕ ಮಾಡಲಾಗಿದೆ. 

ಕಂಪನಿ ಆದಾಯದಲ್ಲಿ ಉದ್ಯೋಗಿಗಳ ಪಾತ್ರವೇ ಪ್ರಮುಖವಾಗಿದೆ. ತಂಡವಾಗಿ ಕೆಲಸ ಮಾಡಿದ್ದಾರೆ. ಸತತ ಶ್ರಮವಹಿಸಿದ್ದಾರೆ. ಇದರ ಪರಿಣಾಮ ಆದಾಯದಲ್ಲಿ ಉತ್ತಮ ಏರಿಕೆಯಾಗಿದೆ. ಹೆರ್ಮೆಸ್ ಫ್ಯಾಶನ್ ಬ್ರ್ಯಾಂಡ್ ಹಲವು ಸವಾಲಗಳನ್ನು ಎದುರಿಸಿ ಈ ಮಟ್ಟಕ್ಕೆ ಬೆಳೆದು ನಿಂತಿದೆ. ಪ್ರತಿ ಸವಾಲುಗಳ ವೇಳೆ ಉದ್ಯೋಗಿಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಇದರಿಂದ ಕಂಪನಿಯ ಲಾಭದಲ್ಲೂ ಉದ್ಯೋಗಳಿಗೆ ಪಾಲಿದೆ ಎಂದು ಹರ್ಮೆಸ್ ಹೇಳಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಆದಾಯ ಹಾಗೂ ವಹಿವಾಟು ನಡೆಸಲು ಇದು ಪ್ರೇರಣೆಯಾಗಲಿದೆ ಎಂದಿದೆ.

ಹರ್ಮೆಸ್ ಫ್ಯಾಶನ್ ಬ್ರ್ಯಾಂಡ್‌ನಲ್ಲಿ ಚರ್ಮದ ಉತ್ಪನ್ನಗಳು, ಚಪ್ಪಲಿ, ಶೂ ಸೇರಿದಂತೆ ಹಲವು ಪಾದರಕ್ಷೆಗಳು, ರೆಡಿ ಟು ವೇರ್ ಆ್ಯಕ್ಸಸರಿ, ಪರ್ಫ್ಯೂಮ್, ಬ್ಯೂಟಿ ಸೆಕ್ಷನ್ ಬ್ರ್ಯಾಂಡ್ ಸೇರಿದಂತೆ ಬಹುತೇಕ ಫ್ಯಾಶನ್ ಜಗತ್ತಿನ ಎಲ್ಲಾ ಉತ್ಪನ್ನಗಳನ್ನು ಮಾರುಕಟ್ಟೆಗೆ ನೀಡುತ್ತಿದೆ.

ಇನ್ಫೋಸಿಸ್ ಉದ್ಯೋಗಿಗಳಿಗೆ ಗುಡ್ ನ್ಯೂಸ್, ತಿಂಗಳ ಸ್ಯಾಲರಿ ಹೆಚ್ಚಿಸಿ ಐಟಿ ಕಂಪನಿ ದಾಖಲೆ