ಸಾಲದ ಬಡ್ಡಿದರ ಹೆಚ್ಚಿಸಿದ HDFC: ಗೃಹಸಾಲದ ಪ್ರಾರಂಭಿಕ ಬಡ್ಡಿದರ ಶೇ. 8.65

ಆರ್ ಬಿಐ ರೆಪೋ ದರ ಏರಿಕೆ ಮಾಡಿದ ಬೆನ್ನಲ್ಲೇ ಬ್ಯಾಂಕ್ ಗಳು ಸಾಲದ ಮೇಲಿನ ಬಡ್ಡಿದರ ಹೆಚ್ಚಳ ಮಾಡುತ್ತಿವೆ. ಎಚ್ ಡಿಎಫ್ ಸಿ ಕೂಡ ಡಿ.20ರಿಂದ ಅನ್ವಯವಾಗುವಂತೆ ಸಾಲದ ಬಡ್ಡಿದರವನ್ನು 35 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ.
 

HDFC hikes loan rates by 35 basis points

ಮುಂಬೈ (ಡಿ.20): ಆರ್ ಬಿಐ ಇತ್ತೀಚೆಗೆ ಮತ್ತೊಮ್ಮೆ ರೆಪೋ ದರ ಏರಿಕೆ ಮಾಡಿದ ಬೆನ್ನಲ್ಲೇ ಬ್ಯಾಂಕ್ ಗಳು ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡುತ್ತಿವೆ. ಈಗ ಎಚ್ ಡಿಎಫ್ ಸಿ ಬ್ಯಾಂಕ್ ಕೂಡ ಗೃಹಸಾಲಗಳ ಮೇಲಿನ ರಿಟೇಲ್ ಪ್ರೈಮ್ ಲೆಂಡಿಂಗ್ ದರವನ್ನು 35 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ. ಈ ಪರಿಷ್ಕೃತ ದರ ಇಂದಿನಿಂದಲೇ (ಡಿ.20) ಜಾರಿಗೆ ಬರಲಿದೆ. ಈ ಏರಿಕೆ ಮಾಡಿದ ಬಳಿಕ ಕೂಡ ಪ್ರಮುಖ ಬ್ಯಾಂಕ್ ಗಳಿಗೆ ಹೋಲಿಸಿದರೆ ಎಚ್ ಡಿಎಫ್ ಸಿ ಗೃಹ ಸಾಲದ ಬಡ್ಡಿದರ ಕಡಿಮೆ ಇದೆ. ಎಚ್ ಡಿಎಫ್ ಸಿ ಗೃಹಸಾಲಗಳ ಬಡ್ಡಿದರ ಶೇ. 8.65ರಿಂದ ಪ್ರಾರಂಭವಾಗುತ್ತದೆ. 800 ಹಾಗೂ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ ಎಚ್ ಡಿಎಫ್ ಸಿ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ಒದಗಿಸುತ್ತದೆ. ಇನ್ನು ದೇಶದ ಅತೀದೊಡ್ಡ ಬ್ಯಾಂಕ್ ಎಂಬ ಖ್ಯಾತಿ ಗಳಿಸಿರುವ ಎಸ್ ಬಿಐ 700 ಹಾಗೂ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ ಶೇ.8.75 ಬಡ್ಡಿದರದಲ್ಲಿ ಗೃಹಸಾಲ ಒದಗಿಸುತ್ತದೆ. ಇನ್ನು ಐಸಿಐಸಿಐ ಬ್ಯಾಂಕ್ ಕೂಡ ಇದೇ ದರದಲ್ಲಿ ಗೃಹಸಾಲ ಒದಗಿಸುತ್ತದೆ. ಆದರೆ, ಕನಿಷ್ಠ ಕ್ರೆಡಿಟ್ ಸ್ಕೋರ್ 750 ಆಗಿರಬೇಕು. 

ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಆರ್ ಬಿಐ ಈ ವರ್ಷದ ಪ್ರಾರಂಭದಿಂದ ಇಲ್ಲಿಯ ತನಕ ಒಟ್ಟು ಐದು ಬಾರಿ ರೆಪೋ ದರ ಏರಿಕೆ ಮಾಡಿದೆ. 10 ತಿಂಗಳ ಅವಧಿಯಲ್ಲಿ ರೆಪೋ ದರ ಶೇ.2.25ರಷ್ಟು ಏರಿಕೆಯಾಗಿದ್ದು, ಪ್ರಸ್ತುತ  ಶೇ.6.25ರಷ್ಟಿದೆ. ರೆಪೋ ದರ ಏರಿಕೆಯಿಂದ ಗೃಹ, ವಾಹನ, ವೈಯಕ್ತಿಕ ಸಾಲಗಳು ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರವನ್ನು ಬ್ಯಾಂಕ್ ಗಳು ಹೆಚ್ಚಳ ಮಾಡುತ್ತಿವೆ. ಎಚ್ ಡಿಎಫ್ ಸಿ ಬ್ಯಾಂಕ್ ಗೃಹಸಾದ ಬಡ್ಡಿದರ ಕಳೆದ ವರ್ಷ ಶೇ.6.7ರಷ್ಟಿತ್ತು. ಆದರೆ, ಈಗ ಶೇ. 8.65ಕ್ಕೆ ಏರಿಕೆಯಾಗಿದೆ. ಆದರೆ, ಹೊಸದಾಗಿ ಗೃಹಸಾಲ ಪಡೆಯುವರಿಗೆ ಬಡ್ಡಿದರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಮಾಡಲಾಗುತ್ತದೆ.

ವರ್ಷಾಂತ್ಯದ ಆಫರ್ ಗಳಿಗೆ ಮರುಳಾಗಿ ಆನ್ ಲೈನ್ ಖರೀದಿ ಮಾಡೋವಾಗ ಈ 5 ಟಿಪ್ಸ್ ಪಾಲಿಸಿ, ವಂಚನೆಯಿಂದ ಪಾರಾಗಿ!

ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆಯಾದ್ರೂ ಬ್ಯಾಂಕ್ ಗಳು ಅದನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ. ಆದರೆ, ಎಚ್ ಡಿಎಫ್ ಸಿ ಬ್ಯಾಂಕ್ ಗೆ ಗೃಹಸಾಲಗಳ ಬಡ್ಡಿದರವನ್ನು ನಿರ್ಧರಿಸುವ ಸ್ವಾತಂತ್ರ್ಯವಿದೆ. ಆದರೆ, ವಿಲೀನದ ಬಳಿಕ ಎಚ್ ಡಿಎಫ್ ಸಿ ಬ್ಯಾಂಕ್ ಕೂಡ ಹೊಸ ಸಾಲಗಾರರಿಗೆ ರೆಪೋ ದರ ಲಿಂಕ್ಡ್ ಸಾಲಗಳನ್ನೇ ಒದಗಿಸುತ್ತಿದೆ. 

ಇಎಂಐ ಹೆಚ್ಚಳ
ಗೃಹಸಾಲದ ಮೇಲಿನ ಬಡ್ಡಿದರ ಹೆಚ್ಚಳವಾದ್ರೆ ತಿಂಗಳ ಇಎಂಐ ಮೊತ್ತದಲ್ಲಿ ಕೂಡ ಏರಿಕೆಯಾಗುತ್ತದೆ. ಹೀಗಾಗಿ ಎಚ್ ಡಿಎಫ್ ಸಿ ಬ್ಯಾಂಕ್ ನಿಂದ ಗೃಹಸಾಲ ಪಡೆದವರಿಗೆ ತಿಂಗಳ ಇಎಂಐ ಹೊರೆ ಹೆಚ್ಚಲಿದೆ. ಬಡ್ಡಿದರವು ಎಲ್ಲ ಗ್ರಾಹಕರಿಗೂ ಒಂದೇ ರೀತಿ ಇರೋದಿಲ್ಲ. ಕ್ರೆಡಿಟ್ ಸ್ಕೋರ್, ರಿಸ್ಕ್ ಪ್ರೋಫೈಲ್ , ಸಾಲದ ಅವಧಿ, ಮರುಪಾವತಿ ಇತ್ಯಾದಿಯನ್ನು ಪರಿಶೀಲಿಸಿ ಅದರ ಅಧಾರದಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಗೃಹಸಾಲಗಳ ಮೇಲಿನ ಬಡ್ಡಿದರವನ್ನು ನಿರ್ಧರಿಸುತ್ತದೆ. 

ಯಸ್‌ ಬ್ಯಾಂಕ್‌ನ 48000 ಕೋಟಿ ಮೌಲ್ಯದ ಸಾಲ ವರ್ಗ

ಗೃಹಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಗಮನಿಸಿ
ಎಚ್ ಡಿಎಫ್ ಸಿ ಲಿಮಿಟೆಡ್ ಪ್ರಕಾರ ಗೃಹಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಕೆಲವೊಂದು ಅಂಶಗಳನ್ನು ಗಮನಿಸೋದು ಅಗತ್ಯ. ಹಾಗಾದ್ರೆ ಯಾವೆಲ್ಲ ವಿಚಾರಗಳನ್ನು ಗಮನಿಸಬೇಕು?
*ಗೃಹಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಸಾಲ ಪಡೆಯಲು ನಿಮಗೆ ಅರ್ಹತೆ ಇದೆಯಾ ಎಂಬುದನ್ನು ಪರಿಶೀಲಿಸಿ.
*ಗೃಹಸಾಲದ ಅರ್ಜಿ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ಯಾವೆಲ್ಲ ದಾಖಲೆಗಳು ಅಗತ್ಯ ಎಂಬುದನ್ನು ನೋಡಿ. ಅವು ನಿಮ್ಮ ಬಳಿ ಇವೆಯಾ ಎಂಬುದನ್ನು ಪರಿಶೀಲಿಸಿ. 
*ಯಾವ ವಿಧದ ಗೃಹಸಾಲ ನಿಮಗೆ ಅಗತ್ಯ ಎಂಬುದರ ಬಗ್ಗೆ ಸ್ಪಷ್ಟತೆ ಇರಲಿ (ಗೃಹಸಾಲ, ಮನೆ ಅಭಿವೃದ್ಧಿ ಸಾಲ, ನಿವೇಶನ ಸಾಲ ಇತ್ಯಾದಿ).  
 

Latest Videos
Follow Us:
Download App:
  • android
  • ios