ಹಾಲ್ಮಾರ್ಕ್ ಇರದ ಚಿನ್ನದ ಮಾರಾಟವನ್ನು ನಿಷೇಧಿಸಲು ಮುಂದಾದ ಕೇಂದ್ರ|ಹಾಲ್ಮಾರ್ಕ್ ಇರದ ಚಿನ್ನದ ಮಾರಾಟ 2021ರಿಂದ ಸಂಪೂರ್ಣವಾಗಿ ನಿಷೇಧ| ಕೇಂದ್ರ ಗ್ರಾಹಕ ವ್ಯವಹಾರ ಖಾತೆ ಸಚಿವೆ ರಾಮ್ ವಿಲಾಸ್ ಪಾಸ್ವಾನ್ ಮಾಹಿತಿ| 2011ರ ಜನೆವರಿ 15ರ ಬಳಿಕ ಹಾಲ್ಮಾರ್ಕ್ ಇರದ ಚಿನ್ನದ ಮಾರಾಟ ರದ್ದು| ಚಿನ್ನದ ಮಾರಾಟಕ್ಕೆ ಬಿಐಎಸ್ ನೀಡುವ ಹಾಲ್ಮಾರ್ಕ್ ಸರ್ಟಿಫಿಕೆಟ್ ಕಡ್ಡಾಯ| ಹಾಲ್ಮಾರ್ಕ್ ಇರದ ಚಿನ್ನದ ಮಾರಾಟ ಮಾಡಿದರೆ 1 ಲಕ್ಷ ರೂ. ದಂಡ, 1 ವರ್ಷ ಜೈಲುಶಿಕ್ಷೆ| 

ನವದೆಹಲಿ(ನ.30): ಹಾಲ್ಮಾರ್ಕ್ ಇರದ ಚಿನ್ನದ ಮಾರಾಟವನ್ನು 2021ರಿಂದ ಸಂಪೂರ್ಣವಾಗಿ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 2011ರ ಜನೆವರಿ 15ರ ಬಳಿಕ ಹಾಲ್ಮಾರ್ಕ್ ಇರದ ಚಿನ್ನದ ಮಾರಾಟ ರದ್ದಾಗಲಿದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಗ್ರಾಹಕ ವ್ಯವಹಾರ ಖಾತೆ ಸಚಿವೆ ರಾಮ್ ವಿಲಾಸ್ ಪಾಸ್ವಾನ್, ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಸ್'ನಲ್ಲಿ ರೆಜಿಸ್ಟರ್ ಮಾಡುವ ಮೂಲಕ ಹಾಲ್ಮಾರ್ಕ್ ಸರ್ಟಿಫಿಕೆಟ್ ಪಡೆಯುವುದು ಕಡ್ಡಾಯ ಎಂದು ಹೇಳಿದ್ದಾರೆ.

Scroll to load tweet…

ದೇಶದ ಸಣ್ಣ ನಗರಗಳಲ್ಲಿರುವ ಗ್ರಾಹಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈ ನಿರ್ಣಯ ಕೈಗೊಳ್ಳಾಲಾಗಿದೆ ಎಂದು ರಾಮ್ ವಿಲಾಸ್ ಪಾಸ್ವಾನ್ ಸ್ಪಷ್ಟಪಡಿಸಿದ್ದಾರೆ.

Scroll to load tweet…

2020ರ ಜನೆವರಿಯಲ್ಲಿ ಈ ಕುರಿತು ಅಧಿಕೃತ ಆದೇಶ ಪ್ರಕಟವಾಗಲಿದ್ದು, 2021ರ ಜನೆವರಿ 15 ರ ಬಳಿಕ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಪಾಸ್ವಾನ್ ಮಾಹಿತಿ ನೀಡಿದ್ದಾರೆ.

ಹೊಸ ನಿಯಮದ ಪ್ರಕಾರ ಬಿಐಎಸ್ 14 ಕ್ಯಾರೆಟ್, 18 ಕ್ಯಾರೆಟ್ ಹಾಗೂ 22 ಕ್ಯಾರೆಟ್ ಗುಣಮಟ್ಟದ ಹಾಲ್ಮಾರ್ಕ್ ನೀಡುತ್ತದೆ. ಈ ಹಾಲ್ಮಾರ್ಕ್ ಅಡಿಯಲ್ಲೇ ಚಿನ್ನದ ಮಾರಾಟ ಮಾಡುವುದು ವ್ಯಾಪಾರಿಗಳಿಗೆ ಅನಿವಾರ್ಯವಾಗಲಿದೆ.

ಚಿನ್ನದ ಬೆಲೆ ಲೆಕ್ಕ ಹಾಕೋದ್ಹೇಗೆ?

ಸದ್ಯ ದೇಶದಲ್ಲಿ ಕೇವಲ ಶೇ.40ರಷ್ಟು ಹಾಲ್ಮಾರ್ಕ್ ಇರುವ ಚಿನ್ನದ ವಹಿವಾಟು ನಡೆಯುತ್ತಿದ್ದು, ಹೊಸ ಆದೇಶದ ತರುವಾಯ ಹಾಲ್ಮಾರ್ಕ್ ಇರದ ಚಿನ್ನದ ಮಾರಾಟ ಮಾಡಿದರೆ 1 ಲಕ್ಷ ರೂ. ದಂಡ ಹಾಗೂ ಒಂದು ವರ್ಷದ ವರೆಗೆ ಜೈಲುಶಿಕ್ಷೆ ವಿಧಿಸಬಹುದಾಗಿದೆ.

ನವೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: