Asianet Suvarna News Asianet Suvarna News

ಗುಡ್ ನ್ಯೂಸ್: ಜಿಎಸ್ ಟಿ ಶ್ರೇಣಿ 4 ರಿಂದ 3ಕ್ಕೆ ಇಳಿಕೆ?

ಜಿಎಸ್ ಟಿ 4 ಶ್ರೇಣಿಗಳ ತೆರಿಗೆ ದರಗಳು 3ಕ್ಕೆ ಇಳಿಕೆಯಾಗುವ ಸಾಧ್ಯತೆ! ಪ್ರಧಾನಿ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೇಕ್ ದೇಬ್ ರಾಯ್‌ ಮಾಹಿತಿ! ಶ್ರೇಣಿಗಳ ತೆರಿಗೆ ಪದ್ಧತಿ ಜಿಎಸ್ ಟಿಯನ್ನು ಸಂಕೀರ್ಣಗೊಳಿಸುತ್ತದೆ ಎಂದ ರಾಯ್! ಪರೋಕ್ಷ ತೆರಿಗೆಯನ್ನು ಮತ್ತಷ್ಟು ಸುಧಾರಣೆಗೊಳಿಸುವ ಅವಶ್ಯಕತೆ ಇದೆ ಎಂದ ರಾಯ್

GST likely to have 3-rate structure in future
Author
Bengaluru, First Published Oct 28, 2018, 5:00 PM IST
  • Facebook
  • Twitter
  • Whatsapp

ನವದೆಹಲಿ(ಅ.28): ಜಿಎಸ್ ಟಿ ಅಡಿಯಲ್ಲಿ ಈಗಿನ 4 ಶ್ರೇಣಿಗಳ ತೆರಿಗೆ ದರಗಳು 3ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೇಕ್ ದೇಬ್ ರಾಯ್‌ ತಿಳಿಸಿದ್ದಾರೆ. 

ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿಯ ಮಾಜಿ ಅಧ್ಯಕ್ಷ ಸುಮಿತ್ ದತ್‌ ಮುಜುಂದಾರ್ ಅವರ ಜಿಎಸ್ ಟಿ : ಎಕ್ಸ್‌ಪ್ಲೈನ್ಡ್ ಫಾರ್‌ ಕಾಮನ್‌ ಮ್ಯಾನ್‌ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಬಿಬೇಕ್ ದೇಬ್ ರಾಯ್‌, ಆರ್ಥಿಕ ತಜ್ಞರ ದೃಷ್ಟಿಕೋನದಿಂದ ಜಿಎಸ್ ಟಿಯಲ್ಲಿ ಒಂದೇ ತರಿಗೆ ಪದ್ಧತಿ ಇರಬೇಕು. ಭಾರತ, ಕೆನಡಾ, ಆಸ್ಪ್ರೇಲಿಯಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಜಿಎಸ್ ಟಿಯಡಿಯಲ್ಲಿ ಶ್ರೇಣಿಗಳು ಇವೆ ಎಂದರು.

ಜಿಎಸ್ ಟಿ ಜಾರಿಯಲ್ಲಿರುವ ಹಲವು ರಾಷ್ಟ್ರಗಳಲ್ಲಿ ಒಂದೇ ತೆರಿಗೆ ಇದ್ದು, ಹಲವು ಶ್ರೇಣಿಗಳ ತೆರಿಗೆ ಪದ್ಧತಿ ಜಿಎಸ್ ಟಿಯನ್ನು ಸಂಕೀರ್ಣಗೊಳಿಸುತ್ತದೆ ಎಂದು ರಾಯ್ ಹೇಳಿದರು.

ಭಾರತದಲ್ಲೂ ಈ ಪರೋಕ್ಷ ತೆರಿಗೆಯನ್ನು ಮತ್ತಷ್ಟು ಸುಧಾರಣೆಗೊಳಿಸಬೇಕಾಗಿದೆ. ಸಾಮಾನ್ಯವಾಗಿ ಜಿಎಸ್ ಟಿಯಲ್ಲಿ ಸ್ಥಿರತೆ ಕಂಡುಕೊಳ್ಳಲು ಹಲವು ರಾಷ್ಟ್ರಗಳು 10 ವರ್ಷ ತೆಗೆದುಕೊಂಡಿವೆ ಎಂಧು ಅವರು ಮಾಹಿತಿ ನೀಡಿದರು.

ಭಾರತದಲ್ಲಿ 4ರಿಂದ 3ಕ್ಕೆ ಜಿಎಸ್ ಟಿ ತೆರಿಗೆ ಶ್ರೇಣಿ ಇಳಿಯುವ ನಿರೀಕ್ಷೆ ಇದೆ ಎಂದ ರಾಯ್, ಈಗ ಶೇ.5, ಶೇ.12, ಶೇ.18 ಮತ್ತು ಶೇ.28 ಎಂದು ನಾಲ್ಕು ಬಗೆಯ ಜಿಎಸ್ ಟಿ ತೆರಿಗೆಯ ಶ್ರೇಣಿ ಇದೆ ಎಂದು ತಿಳಿಸಿದರು.

Follow Us:
Download App:
  • android
  • ios