Asianet Suvarna News Asianet Suvarna News

ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಇಳಿಕೆ ಸಾಧ್ಯತೆ; GST ಅಡಿಗೆ ತರಲು ಕೇಂದ್ರ ಸಭೆ!

  • ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಣಕ್ಕೆ ಕೇಂದ್ರ ನಿರ್ಧಾರ
  • 45ನೇ GST ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಈ ಕುರಿತು ಚರ್ಚೆಗೆ ನಿರ್ಧಾರ
  • ತೈಲ ಬೆಲೆ ಹೆಚ್ಚಳಕ್ಕೆ ಕಡಿವಾಣ ಹಾಕಲು ಕೇಂದ್ರದಿಂದ ಮಹತ್ವದ ಹೆಜ್ಜೆ
     
GST Council panel may consider tax on petroleum products under Goods and Services Tax  ckm
Author
Bengaluru, First Published Sep 14, 2021, 7:22 PM IST

ನವದೆಹಲಿ(ಸೆ.14): ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಜನಸಾಮಾನ್ಯರಿಗೆ ಇನ್ನಿಲ್ಲದ ಹೊಡೆತ ನೀಡಿದೆ. ಕಳೆದ ಹಲವು ವರ್ಷಗಲಿಂದ ಪೆಟ್ರೋಲ್, ಡೀಸೆಲ್ GST ಅಡಿಗೆ ತರಲು ಹಲವು ಚರ್ಚೆಗಳು ನಡೆದಿದೆ. ಇದಕ್ಕೆ ಪರ ವಿರೋಧಗಳು ಈಗಲೂ ಇದೆ. ಇದೀಗ ಬೆಲೆ ನಿಯಂತ್ರಣಕ್ಕೆ ದೇಶದಲ್ಲಿ ಒಂದೇ ರೂಪದ ತೆರೆಗೆ ಪದ್ದತಿಯಾಗಿರುವ  GST ಅಡಿಗೆ ತರಲು ಕೇಂದ್ರ ಮುಂದಾಗಿದೆ.

ಪೆಟ್ರೋಲ್‌, ಡೀಸೆಲ್‌ ತೆರಿಗೆಯಿಂದ ಕೇಂದ್ರಕ್ಕೆ 3.35 ಲಕ್ಷ ಕೋಟಿ ಆದಾಯ!

ಇದೇ ಶುಕ್ರವಾರ(ಸೆ.17) ಲಕ್ನೋದಲ್ಲಿ 45ನೇ ಜಿಎಸ್‌ಟಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬೆಲೆ ನಿಯಂತ್ರಣಕ್ಕೆ ಜಿಎಸ್‌ಟಿ ಅಡಿಯಲ್ಲಿ ತೈಲ ಬೆಲೆ ತರವು ಕುರಿತ ಪ್ರಸ್ತಾವನೆಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಲ್ಲಿಸಲಿದ್ದಾರೆ. ಈ ಕುರಿತು ಹಲವು ರಾಜ್ಯಗಳು ಸಮ್ಮತಿ ಸೂಚಿಸಿದರೆ, ಕೆಲ ರಾಜ್ಯಗಳು ವಿರೋಧ ವ್ಯಕ್ತಪಡಿಸಿದೆ. ಇನ್ನು ಜಿಎಸ್‌ಟಿ ಕೌನ್ಸಿಲ್ ಸದಸ್ಯರಲ್ಲಿ ಕೆಲವರು ಇದನ್ನು ವಿರೋಧಿಸಿದ್ದಾರೆ. ಸದ್ಯ ಕೇಂದ್ರ ಸರ್ಕಾರಕ್ಕಿರುವ ಅತೀ ದೊಡ್ಡ ಆದಾಯ ಮೂಲ ಇದಾಗಿದೆ. ಹೀಗಾಗಿ ದೇಶದಲ್ಲಿ ಆರ್ಥಿಕ ಕೊರತೆ ಎದುರಾಗಲಿದೆ ಅನ್ನೋ ಎಚ್ಚರಿಕೆಯನ್ನು ನೀಡಿದ್ದಾರೆ.

ಎಲ್ಲಾ ರಾಜ್ಯದ ಪ್ರತಿನಿಧಿಗಳನ್ನು ಹೊಂದಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮತಿ ಸಿಕ್ಕರೆ, ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಣನೀಯವಾಗಿ ಕಡಿಮೆಯಾಗಲಿದೆ.  ಈ ಕುರಿತು ಕೇಂದ್ರ ಸರ್ಕಾರ ಒಂದು ಸುತ್ತಿನ ಮಾತುಕತೆ ನಡೆಸಿದೆ. 

LPG ಗ್ಯಾಸ್‌ ಸಿಲಿಂಡರ್‌ ಮತ್ತಷ್ಟು 'ಭಾರ': 15 ದಿನದಲ್ಲಿ 2ನೇ ಬಾರಿ ಬೆಲೆ ಏರಿಕೆ!

ಕೊರೋನಾ ಹೊಡೆತದ ಬಳಿಕ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್‌ನಿಂದ ಬರುವ ಆದಾಯವೇ ಪ್ರಮುಖವಾಗಿದೆ. ಸರ್ಕಾರ ಕೂಡ ಇದನ್ನೇ ನೆಚ್ಚಿಕೊಂಡಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಸಂಗ್ರಹ 2021ರ ಎಪ್ರಿಲ್‌ನಿಂದ ಜುಲೈವರೆಗೆ 1 ಲಕ್ಷ ಕೋಟಿ ರೂಪಾಯಿ ಮೀರಿದೆ. ಕಳೆದ ಹಣಕಾಸು ವರ್ಷ ಇದೇ ಅವಧಿಯಲ್ಲಿ  67,895 ಕೋಟಿ ರೂಪಾಯಿ ಸಂಗ್ರಹವಾಗಿತ್ತು. 2020-21ರ ಆರ್ಥಿಕ ವರ್ಷದಲ್ಲಿ, ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸಂಗ್ರಹಿಸಿದ ತೆರಿಗೆಯಲ್ಲಿ ಶೇಕಡಾ 88 ರಷ್ಟು ಏರಿಕೆಯಾಗಿದೆ. 

Follow Us:
Download App:
  • android
  • ios