ನವದೆಹಲಿ(ಆ.4):ರುಪೇ, ಭೀಮ್ ಮತ್ತು ಯುಎಸ್‌ಎಸ್‌ಡಿ ಮೂಲಕ ವ್ಯವಹಾರ ನಡೆಸುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ನವದೆಹಲಿಯಲ್ಲಿ ಇಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ, ರುಪೇ, ಭೀಮ್ ಮತ್ತು ಯುಎಸ್ಎಸ್‌ಡಿ ಮೂಲಕ ವ್ಯವಹಾರ ನಡೆಸುವವರಿಗೆ ಜಿಎಸ್‌ಟಿಯ ಶೇ.20 ರಷ್ಟು ಕ್ಯಾಶ್ ಬ್ಯಾಕ್ ನೀಡಲು ನಿರ್ಧರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಕೇಂದ್ರ ವಿತ್ತ ಸಚಿವ ಪಿಯೂಷ್ ಗೋಯಲ್, ಡಿಜಿಟಲ್ ಬ್ಯಾಂಕಿಂಗ್ ಗೆ ಉತ್ತೇಜನ ನೀಡಲು ರುಪೇ ಡೆಬಿಟ್ ಕಾರ್ಡ್, ಭೀಮ್  ಮತ್ತು ಯುಎಸ್‌ಎಸ್‌ಡಿಗಳ ಮೂಲಕ ವ್ಯವಹಾರ ನಡೆಸಿದೆ ಜಿಎಸ್ ಟಿಯ ಶೇ. 20 ರಷ್ಟು ಕ್ಯಾಶ್ ಬ್ಯಾಕ್ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ತಿಳಿಸಿದ್ದಾರೆ.

ಆದರೆ ಈ ವ್ಯವಸ್ಥೆ ಸದ್ಯ ದೇಶದ ಕೆಲವೇ ರಾಜ್ಯಗಳಿಗೆ ಸಿಮೀತವಾಗಿರಲಿದ್ದು, ಹಂತ ಹಂತವಾಗಿ ಈ ಯೋಜನೆಯನ್ನು ಇಡೀ ದೇಶಕ್ಕೆ ಅನ್ವಯಿಸಲಾಗುವುದು ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ.