ಹೋಟೆಲ್ ರೂಮ್, ಬೃಹತ್ ವಾಹನದ ತೆರಿಗೆ ಇಳಿಕೆ!
ಹೋಟೆಲ್ ರೂಮ್, ಬೃಹತ್ ವಾಹನದ ತೆರಿಗೆ ಇಳಿಕೆ| 75000 ರು. ಒಳಗಿನ ಹೋಟಲ್ ರೂಂ ಜಿಎಸ್‌ಟಿ 12ಕ್ಕೆ ಇಳಿಕೆ| 1200, 1500 ಸಿಸಿವರೆಗಿನ ವಾಹನಗಳ ಸೆಸ್ ಶೇ.12ಕ್ಕೆ ಇಳಿಕೆ
ಪಣಜಿ[ಸೆ.21]: ದೇಶದ ಆರ್ಥಿಕತೆ ಉತ್ತೇಜನಕ್ಕೆ ಕಾರ್ಪೋರೆಟ್ ತೆರಿಗೆ ದರ ಇಳಿಕೆ ಮಾಡುವ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದ ಜಿಎಸ್‌ಟಿ ಮಂಡಳಿ ಇನ್ನಷ್ಟುವಸ್ತುಗಳ ತೆರಿಗೆ ದರಗಳಲ್ಲಿ ಏರಿಳಿತ ಮಾಡಿದೆ. ಇಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಶುಕ್ರವಾರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಒಂದು ದಿನಕ್ಕೆ 1000 ರು.ನಿಂದ 7500 ರು.ವರೆಗೆ ಶುಲ್ಕ ಇರುವ ಹೋಟೆಲ್ ರೂಂಗಳ ಜಿಎಸ್‌ಟಿ ದರವನ್ನು ಶೇ.18ರಿಂದ ಶೇ.12ಕ್ಕೆ ಇಳಿಸಲಾಗಿದೆ. 7500 ರು.ಗಳಿಗಿಂತ ಹೆಚ್ಚಿನ ದರ ಹೋಟೆಲ್ ರೂಂಗಳಿಗೆ ಶೇ.28ರ ಬದಲು ಶೇ.18ರಷ್ಟುಜಿಎಸ್‌ಟಿ ಅನ್ವಯವಾಗಲಿದೆ. ಔಟ್‌ಡೋರ್ ಕೇಟರಿಂಗ್ ಸೇವೆಗೆ ವಿಧಿಸುವ ತೆರಿಗೆಯನ್ನು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ನ ಜೊತೆ ಶೇ.18ರಿಂದ ಶೇ.5ಕ್ಕೆ ಇಳಿಸಲಾಗಿದೆ.
ಇಂದು ಲಕ್ಷ್ಮೀ ವಾರ: ನಿರ್ಮಲಾ ಸೀತಾರಾಮನ್ ಘೋಷಣೆ ಆಹ್ಲಾದಕರ!
10ರಿಂದ 13 ಜನರನ್ನು ಒಯ್ಯುವ ಸಾಮರ್ಥ್ಯದ 1,500 ಸಿ.ಸಿ. ಮೇಲ್ಪಟ್ಟಡೀಸೆಲ್ ಹಾಗೂ 1,200 ಪೆಟ್ರೋಲ್ ವಾಹನಗಳ ಮೇಲಿನ ಸೆಸ್ ಅನ್ನು ಶೇ.12ಕ್ಕೆ ಇಳಿಸಲಾಗಿದೆ. ಮೀನುಗಾರಿಕಾ ಬೋಟುಗಳಿಗೆ ಬಳಸುವ ಇಂಧನದ ಮೇಲಿನ ಜಿಎಸ್‌ಟಿ ದರವನ್ನು ಶೇ.5ಕ್ಕೆ ಇಳಿಕೆ ಮಾಡಲಾಗಿದೆ.
ಇದೇ ವೇಳೆ ಪ್ಲಾಸ್ಟಿಕ್ ಚೀಲಗಳು ಮತ್ತು ವಸ್ತುಗಳ ಪ್ಯಾಕ್ ಮಾಡಲು ಬಳಸುವ ಮೂಟೆಗಳಿಗೆ ಏಕರೀತಿಯ ಶೇ.12ರಷ್ಟುಜಿಎಸ್‌ಜಿ ವಿಧಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಶಕ್ತಿ ಕಾರಕ ತಂಪುಪಾನಿಯಗಳ ಬಾಟಲಿಗಳ ಮೇಲೆ ಈಗಿರುವ ಶೇ.18ರಷ್ಟುಜಿಎಸ್‌ಟಿಯ ಜೊತೆ ಶೇ.12ರಷ್ಟುಸೆಸ್ ಅನ್ನು ವಿಧಿಸಲಾಗುತ್ತದೆ. ಇನ್ನು ಡೈಮಂಡ್ ಜಾಬ್‌ವರ್ಕ್ಗೆ ವಿಧಿಸುತ್ತಿದ್ದ ತೆರಿಗೆಯನ್ನು ಶೇ.5ರಿಂದ ಶೇ.1.5ಕ್ಕೆ ಇಳಿಸಲಾಗಿದೆ. ರೈಲ್ವೆ ವ್ಯಾಗನ್, ಬೋಗಿಗಳ ಜಿಎಸ್‌ಟಿಯನ್ನು 5ರಿಂದ ಶೇ.12ಕ್ಕೆ ಏರಿಕೆ ಮಾಡಲಾಗಿದೆ.