Asianet Suvarna News Asianet Suvarna News

ಜುಲೈನಲ್ಲಿ ಭರ್ಜರಿ 1.16 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹ!

* ಭರ್ಜರಿ 1.16 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹ

* ಈ ವಿತ್ತೀಯ ವರ್ಷದ 2ನೇ ಗರಿಷ್ಠ

* ಆರ್ಥಿಕ ಚೇತರಿಕೆಯ ಲಕ್ಷಣ ಇದು

GST collection recovers to a 3 month high of Rs 1 16 trn in July pod
Author
Bangalore, First Published Aug 2, 2021, 11:54 AM IST

ನವದೆಹಲಿ(ಆ.02): ಕೋವಿಡ್‌ 2ನೇ ಅಲೆ ಮುಗಿದು, ಆರ್ಥಿಕತೆ ಚೇತರಿಕೆ ಆಗುತ್ತಿರುವ ಲಕ್ಷಣಗಳನ್ನು ಸರಕು-ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ತೋರಿಸಿದೆ. ಜುಲೈ ತಿಂಗಳಲ್ಲಿ ಭರ್ಜರಿ 1.16 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹ ಆಗಿದ್ದು, ಇದು ಈ ವಿತ್ತೀಯ ವರ್ಷದಲ್ಲಿ 2ನೇ ಅತಿ ಗರಿಷ್ಠ ಜಿಎಸ್‌ಟಿ ಸಂಗ್ರಹವಾಗಿದೆ.

ಕಳೆದ ವರ್ಷ ಜುಲೈನಲ್ಲಿ ಮೊದಲನೇ ಕೋವಿಡ್‌ ಅಲೆ ವ್ಯಾಪಕವಾಗಿತ್ತು. ಆಗ 87,422 ಕೋಟಿ ರು. ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈಗಿನ ಸಂಗ್ರಹ ಶೇ.33ರಷ್ಟುಅಧಿಕ. ಇನ್ನು ಈ ವಿತ್ತೀಯ ವರ್ಷದ ಆರಂಭದ ಮಾಸವಾದ ಏಪ್ರಿಲ್‌ನಲ್ಲಿ ದಾಖಲೆಯ 1.41 ಲಕ್ಷ ಕೋಟಿ ರು. ಸಂಗ್ರಹವಾಗಿತ್ತು. ಇದಾದ ನಂತರದ ದಾಖಲೆ ಸಂಗ್ರಹ ಜುಲೈನಲ್ಲಾಗಿದೆ.

ಆದರೆ ಕೋವಿಡ್‌ 3ನೇ ಅಲೆ ತಾರಕಕ್ಕೇರಿದ್ದ ಜೂನ್‌ನಲ್ಲಿ 1 ಲಕ್ಷ ಕೋಟಿ ರು.ಗಿಂತ ಕೆಳಗೆ ಜಿಎಸ್‌ಟಿ ಸಂಗ್ರಹ ಇಳಿದಿತ್ತು.

ಈ ನಡುವೆ, ಮುಂದಿನ ತಿಂಗಳು ಕೂಡ ಜಿಎಸ್‌ಟಿ ಸಂಗ್ರಹ ಉತ್ತಮಗೊಳ್ಳಬಹುದು ಎಂದು ವಿತ್ತ ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ.

Follow Us:
Download App:
  • android
  • ios