1994ರಲ್ಲಿ 500 ರೂ ಷೇರು ಖರೀದಿಸಿ ಮರತೇಬಿಟ್ಟಿದ್ದ ಡಾಕ್ಟರ್, ಮೊಮ್ಮಗನಿಗೆ ಜಾಕ್‌ಪಾಟ್ ಮೊತ್ತ!
1994ರಲ್ಲಿ ಎಸ್‌ಬಿಐನ 500 ರೂಪಾಯಿ ಷೇರು ಖರೀದಿಸಲಾಗಿತ್ತು. ಬಳಿಕ ಮರೆತು ಬಿಟ್ಟಿದ್ದರು. 3 ದಶಕಗಳ ಬಳಿಕ ಮೊಮ್ಮನಿಗೆ ಈ ದಾಖಲೆ ಪತ್ರ ಸಿಕ್ಕಿದೆ. ಇದೀಗ 500 ರೂಪಾಯಿಯ ಷೇರು ಮೊತ್ತ ನೋಡಿ ಮೊಮ್ಮಗ ಹೌಹಾರಿದ್ದಾನೆ.
ಚಂಡಿಘಡ(ಏ.02) ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಪ್ರತಿದಿನ ಟ್ರೆಡಿಂಗ್ ಮೂಲಕ ಆದಾಯಗಳಿಸುವವರ ಸಂಖ್ಯೆ ಹೆಚ್ಚಿದೆ. ಇದರಲ್ಲಿ ಹಲವರು ಕೈಸುಟ್ಟುಕೊಂಡ ಉದಾಹರಣೆಗಳು ಇವೆ. ಕೆಲವರು ಸುದೀರ್ಘ ದಿನಗಳ ಹೂಡಿಕೆ ಮಾಡಿ ಕೋಟಿ ರೂಪಾಯಿ ಗಳಿಸಿದ್ದಾರೆ. ಇದೀಗ ಹಳೇ ಷೇರೊಂದು ಪತ್ತೆಯಾಗಿ ಮೊಮ್ಮನಿಗೆ ಜಾಕ್‌ಪಾಟ್ ಹೊಡೆದಿದೆ. 1994ರಲ್ಲಿ ಚಂಡೀಘಡದಲ್ಲಿನ ವೈದ್ಯರೊಬ್ಬರು 500 ರೂಪಾಯಿಗೆ ಎಸ್‌ಬಿಐ ಷೇರು ಖರೀದಿಸಿದಲಾಗಿದೆ. ಬಳಿಕ ಈ ಷೇರಿನ ಕುರಿತು ಮರೆತೇ ಬಿಟ್ಟಿದ್ದಾರೆ. ಇತ್ತ ಷೇರು ಸರ್ಟಿಫಿಕೇಟ್ ಎಲ್ಲಿಟ್ಟಿದ್ದಾರೆ ಅನ್ನೋದು ಮರೆತಿದ್ದಾರೆ. 3 ದಶಕಗಳ ಬಳಿಕ ಷೇರು ಪ್ರಮಾಣಪತ್ರ ಮೊಮ್ಮನ ಕೈಗೆ ಸಿಕ್ಕಿದೆ. ಪರಿಶೀಲಿಸಿದಾಗ 500 ರೂಪಾಯಿ ಷೇರು ಮೊತ್ತ ಇದೀಗ 3.75 ಲಕ್ಷ ರೂಪಾಯಿ ಆಗಿದೆ.
ಚಂಡೀಘಡದಲ್ಲಿ ಸರ್ಜನ್ ಆಗಿರುವ ಡಾ. ತನ್ಮಯ್ ಮೊತಿವಾಲ ಈ ಮಾಹಿತಿ ಹಂಚಿಕೊಂಡಿದ್ದಾರೆ. 1994ರಲ್ಲಿ ತನ್ಮಯ್ ಮೋತಿವಾಲ 500 ರೂಪಾಯಿ ಮೌಲ್ಯದ ಎಸ್‌ಬಿಐ ಷೇರು ಖರೀದಿಸಿದ್ದರು. ಸರಿಸುಮಾರು 30 ವರ್ಷಗಳಲ್ಲಿ ಈ ಷೇರಿನ ಮೊತ್ತ 750 ಪಟ್ಟು ಹೆಚ್ಚಾಗಿದೆ. ಈ ಷೇರಿನ ಮೊತ್ತ 3.75 ಲಕ್ಷ ರೂಪಾಯಿ ಆಗಿದೆ.
ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಹೊಸ ದಾಖಲೆ, ಒಂದೇ ದಿನದಲ್ಲಿ ಗಳಿಸಿದ ಲಾಭ ಊಹೆಗೂ ಮೀರಿದ್ದು!
ನನ್ನ ತಾತ 1994ರಲ್ಲಿ ಎಸ್‌ಬಿಐ ಷೇರು ಖರೀದಿಸಿದ್ದಾರೆ. 500 ರೂಪಾಯಿ ಮೌಲ್ಯದ ಈ ಷೇರು ಖರೀದಿಸಿ ಮರೆತಿದ್ದಾರೆ. ಈ ಪ್ರಮಾಣಪತ್ರವನ್ನು ಎಲ್ಲಿಟ್ಟಿದ್ದಾರೆ ಅನ್ನೋದು ಮರೆತು ಹೋಗಿದೆ. ಈ ರೀತಿ ಷೇರಿನಲ್ಲಿ ಹೂಡಿಕೆ ಮಾಡಿರುವುದನ್ನೇ ತಾತ ಮರೆತಿದ್ದಾರೆ. ಇತ್ತೀಚೆಗೆ ಕುಟುಂಬದ ಕೆಲ ವಸ್ತುಗಲ ವಿಲೇವಾರಿ ಮಾಡುತ್ತಿದ್ದ ವೇಳೆ ಈ ಪತ್ರ ಕಾಣಿಸಿದೆ. ಡಿಮ್ಯಾಟ್ ಖಾತೆಗೆ ಪರಿವರ್ತಿಸಲು ಈ ಷೇರು ಪ್ರಮಾಣಪತ್ರ ಕಳುಹಿಸಲಾಗಿದೆ ಎಂದು ತನ್ಮಯ್ ಮೋತಿವಾಲ ಹೇಳಿದ್ದಾರೆ.
ಹಲವರು ಸಾಮಾಜಿಕ ಮಾಧ್ಯಮದಲ್ಲಿ ಈಗಿನ ಮೊತ್ತ ಎಷ್ಟು ಎಂದು ಪ್ರಶ್ನಿಸಿದ್ದಾರೆ. ಡಿವಿಡೆಂಟ್ ಹೊರತುಪಡಿಸಿ ಈ ಷೇರಿನ ಈಗಿನ ಮೊತ್ತ 3.75 ಲಕ್ಷ ರೂಪಾಯಿ. ಆದರೆ ಈ ಮೊತ್ತವನ್ನು ಡಿಮ್ಯಾಟ್ ಖಾತೆಯಿಂದ ಪರಿವರ್ತಿಸಲು ಸಾಕಾಗಿ ಹೋಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಷೇರು ಮಾರುಕಟ್ಟೆ ಸಲಹೆಗಾರರು, ತಜ್ಞರ ಜೊತೆ ಸಮಾಲೋಚಿಸಿ ಷೇರು ಹಣ ಪರಿವರ್ತಿಸಲು ಅರ್ಜಿ ಸಲ್ಲಿಸಿದ್ದೇವು. ಆದರೆ ಅಕ್ಷರಗಳಲ್ಲಿನ ತಪ್ಪು, ಸಹಿಯಲ್ಲಿನ ಗೊಂದಲ ಸೇರಿದಂತೆ ಹಲವು ಕಾರಣಳಿಂದ ಈ ಷೇರು ಮೊತ್ತವನ್ನು ಪರಿವರ್ತಿಸಲು ಹರಹಸಾಸ ಪಡಬೇಕಾಯಿತು ಎಂದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಮಾಹಿತಿ ಹರಿದಾಡುತ್ತಿದ್ದಂತೆ ಹಲವರು ಇದೇ ರೀತಿಯ ಮಾಹಿತಿ ಹಂಚಿಕೊಂಡಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ನನ್ನ ತಂದೆ 17 ವರ್ಷಗಳ ಹಿಂದೆ ಷೇರು ಖರೀದಿಸಿದ್ದರು. ಎಸ್‌ಬಿಐ ಷೇರು ಖರೀದಿಸಿ ಮರೆತಿದ್ದರು. ತಂದೆ ನಿಧನದ ಬಳಿಕ ಈ ಷೇರು ಮಾಹಿತಿ ತಿಳಿದಿತ್ತು. ಇದನ್ನು ಪರಿವರ್ತಿಸಲು ಸಾಧ್ಯವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.