ನವದೆಹಲಿ(ಫೆ.20): ಕೇಂದ್ರ ಸರ್ಕಾರ ಮರು ಬಂಡವಾಳ ಕ್ರೂಡೀಕರಣಕ್ಕಾಗಿ 12 ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ 48,239 ಕೋಟಿ ರೂ. ತೊಡಗಿಸಲು ಮುಂದಾಗಿದೆ.

ಕಾರ್ಪೋರೇಷನ್‍ ಬ್ಯಾಂಕ್‍ 9,086 ಕೋಟಿ ರೂ. ಗರಿಷ್ಟ ಮೊತ್ತ ಪಡೆಯಲಿದ್ದು, ಅಲಹಾಬಾದ್ ಬ್ಯಾಂಕ್‍ 6,896 ಕೋಟಿ ರೂ. ಪಡೆಯಲಿದೆ ಎಂದು ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ರಾಜೀವ್ ಕುಮಾರ್ ತಿಳಿಸಿದ್ದಾರೆ.

ಇನ್ನುಳಿದಂತೆ ಪಂಜಾಬ್ ನ್ಯಾಷನಲ್‍ ಬ್ಯಾಂಕ್‍ 5,908 ಕೋಟಿ ರೂ. ಬ್ಯಾಂಕ್‍ ಆಫ್‍ ಇಂಡಿಯಾ 4,638 ಕೋಟಿ ರೂ. ಯೂನಿಯನ್‍ ಬ್ಯಾಂಕ್‍ 4,112 ಕೋಟಿ ರೂ. ಆಂಧ್ರಾ ಬ್ಯಾಂಕ್‍ 3,256 ಕೋಟಿ ರೂ. ಸಿಂಡಿಕೇಟ್‍ ಬ್ಯಾಂಕ್‍ 1,603 ಕೋಟಿ ರೂ. ಹಾಗೂ ಬ್ಯಾಂಕ್‍ ಆಫ್‍ ಮಹಾರಾಷ್ಟ್ರ 205 ಕೋಟಿ ರೂ. ಪಡೆಯಲಿವೆ.