ನವದೆಹಲಿ[ಜ.06]: ಷೇರುಪೇಟೆಯಲ್ಲಿ ನೊಂದಾಯಿತವಲ್ಲದ ಕಂಪನಿಗಳು ತಮ್ಮ ಹಣಕಾಸು ತಮ್ಮ ಹಣಕಾಸು ವಹಿವಾಟು ಪತ್ರಗಳನ್ನು ಸರ್ಕಾರಕ್ಕೆ ತ್ರೈಮಾಸಿಕ ಅವಧಿಗೊಮ್ಮೆ ಅಥವಾ ಅರ್ಧವಾರ್ಷಿಕ ಅವಧಿಗೊಮ್ಮೆ ಸಲ್ಲಿಸಬೇಕು ಎಂಬ ನಿಯಮವನ್ನು ಜಾರಿಯಾಗುವ ಸಾಧ್ಯತೆ ಇದೆ.

ಸದ್ಯ ದೇಶದಲ್ಲಿ 11 ಲಕ್ಷ ಲಿಸ್ಟ್‌ ಆಗದ ಕಂಪನಿಗಳಿವೆ. ಇವು ವರ್ಷಕ್ಕೊಮ್ಮೆ ಸರ್ಕಾರಕ್ಕೆ ಮಾಹಿತಿ ನೀಡಿದರೆ ಸಾಕು. ಆದರೆ ಇವುಗಳಲ್ಲಿ ಸಾಕಷ್ಟುಅವ್ಯವಹಾರ ನಡೆದರೂ ಅದು ತಕ್ಷಣಕ್ಕೆ ಬೆಳಕಿಗೆ ಬರುತ್ತಿಲ್ಲ. ಹೀಗಾಗಿ ಪ್ರತಿ 3 ತಿಂಗಳಿಗೊಮ್ಮೆ ಅಥವಾ 6 ತಿಂಗಳಿಗೊಮ್ಮೆ ಈ ಕಂಪನಿಗಳು ಸರ್ಕಾರಕ್ಕೆ ತಮ್ಮ ಹಣಕಾಸು ವಹಿವಾಟು ಪತ್ರಗಳನ್ನು ಸಲ್ಲಿಸಬೇಕು ಎಂಬ ನಿಯಮವನ್ನು ಕಂಪನಿ ವ್ಯವಹಾರಗಳ ಸಚಿವಾಲಯ ಆಲೋಚಿಸುತ್ತಿದೆ.

ಈಗಾಗಲೇ ಲಿಸ್ಟ್‌ ಆದ ಕಂಪನಿಗಳು ಪ್ರತಿ 3 ತಿಂಗಳಿಗೊಮ್ಮೆ ಹಣಕಾಸು ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೆಬಿ ನಿಯಮ ಹೇಳುತ್ತದೆ.