ನವದೆಹಲಿ[ಜ.27]: ವಿದೇಶಿ ಷೇರುಪೇಟೆಯಲ್ಲಿ ನೋಂದಾಯಿಸಿಕೊಳ್ಳಲು ಭಾರತೀಯ ಕಂಪನಿಗಳಿಗೆ ಅನುಮತಿ ನೀಡುವ ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಿ‘ಪಬ್ಲಿಕ್’ ಸಂತಸ: ಪೆಟ್ರೋಲ್ ಬೆಲೆ ಗಣನೀಯ ಇಳಿಕೆ!

ಈ ಕ್ರಮದಿಂದ ಕಾರ್ಪೋರೆಟ್‌ ಕಂಪನಿಗಳಿಗೆ ಬಂಡವಾಳ ಸಂಗ್ರಹಿಸಲು ಅನುಕೂಲವಾಗಲಿದ್ದು, ಉದ್ಯಮ ಚಟುವಟಿಕೆಗೆ ಉತ್ತೇಜಿಸಿದಂತಾಗುತ್ತದೆ. ಜತೆಗೆ ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳವೂ ಹರಿದು ಬರಲಿದೆ ಎಂಬ ಲೆಕ್ಕಾಚಾರ ಸರ್ಕಾರದ್ದಾಗಿದೆ.

ಸದ್ಯ ಕೆಲವು ಭಾರತೀಯ ಕಂಪನಿಗಳು ಅಮೆರಿಕನ್‌ ಡೆಪಾಸಿಟರಿ ರಿಸೀಪ್ಟ್ಸ್ ಮೂಲಕ ಅಮೆರಿಕ ಷೇರುಪೇಟೆಯಲ್ಲಿ ವಹಿವಾಟು ನಡೆಸಿವೆ. ಇದೀಗ ಸಾಗರದಿಂದಾಚೆಗಿನ ದೇಶಗಳ ಷೇರುಪೇಟೆಯಲ್ಲಿ ನೋಂದಣಿಗೆ ಸರ್ಕಾರವೇ ಅನುಮತಿ ನೀಡುವ ಚಿಂತನೆ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಚಿನ್ನ ಹಾಗೂ ಬೆಳ್ಳಿಗೆ ತಾಗದ ‘ಶನಿ: ವಾರ’ದಲ್ಲಿ ಮೊದಲ ಬಾರಿಗೆ ಇಳಿಕೆ!

ಜನವರಿ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ