ನವ​ದೆ​ಹ​ಲಿ(ಫೆ.24): ಕಳೆದ ಮೇ ತಿಂಗಳ ಬಳಿಕ ಎಲ್‌ಪಿಜಿ ಗ್ರಾಹಕರಿಗೆ ಸಬ್ಸಿಡಿ ಸಲ್ಲಿಸಿದ್ದ ಕೇಂದ್ರ ಸರ್ಕಾರ, ಸಬ್ಸಿಡಿ ರದ್ದು ಮಾಡಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ. ಎಎನ್‌ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದ ವೇಳೆ ಪೆಟ್ರೋಲಿಯಂ ಖಾತೆ ಸಚಿವ ಧಮೇಂದ್ರ ಪ್ರಧಾನ್‌ ಈ ಸುಳಿವು ನೀಡಿದ್ದಾರೆ.

‘ನಾವು ಎಲ್‌ಪಿಜಿ ಸಬ್ಸಿಡಿ ನಿಲ್ಲಿಸಿದ್ದೇವೆ ಎಂಬುದು ತಪ್ಪು. ‘ಕೊರೋನಾ ಲಾಕ್‌​ಡೌನ್‌ ಅವ​ಧಿ​ಯಲ್ಲಿ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜ​ನೆ​ಯಡಿ 8 ಕೋಟಿ ಬಡ​ವ​ರಿಗೆ 14 ಕೋಟಿ ಎಲ್‌​ಪಿಜಿ ಸಿಲಿಂಡ​ರ್‌​ಗ​ಳನ್ನು ಉಚಿ​ತ​ವಾಗಿ ಪೂರೈ​ಸಿ​ದ್ದೇವೆ. ತನ್ಮೂ​ಲಕ ಸರ್ಕಾ​ರವು ಬಡ​ವರ ಪರ ನಿಂತಿ​ದೆ’ ಎನ್ನುವ ಮೂಲಕ ಕೇವಲ ಬಡವರಿಗೆ ಮಾತ್ರ ಸಬ್ಸಿಡಿ ನೀಡುತ್ತಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

2 ದಿನದ ಬಳಿಕ ಮತ್ತೆ ಪೆಟ್ರೋಲ್‌, ಡೀಸೆ​ಲ್‌ ದರ 35 ಪೈಸೆ ಏರಿ​ಕೆ

2 ದಿನ​ಗಳ ಬಳಿಕ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ತಲಾ 35 ಪೈಸೆ​ಯಷ್ಟುಏರಿಕೆ ಮಾಡಿವೆ. ಇದ​ರಿಂದಾಗಿ ಮುಂಬೈ​ನಲ್ಲಿ ಪೆಟ್ರೋಲ್‌ ದರವು ಅತಿ​ಹೆಚ್ಚು ಅಂದರೆ 97.34 ರು.ನೊಂದಿಗೆ ಶತ​ಕ​ದತ್ತ ಮುನ್ನು​ಗ್ಗು​ತ್ತಿದೆ. ಇನ್ನು ಡೀಸೆಲ್‌ ಬೆಲೆಯು 88.44 ರು. ಆಗಿ​ದೆ.

ಕರ್ನಾ​ಟ​ಕ​ದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರವು ತಲಾ 37 ಪೈಸೆ​ಯಷ್ಟುಏರಿ​ಕೆ​ಯಾ​ಗಿದ್ದು, ಲೀ. ಪೆಟ್ರೋಲ್‌ ದರ 93.98 ರು. ಮತ್ತು ಡೀಸೆ​ಲ್‌ಗೆ 86.21 ರು.ಗೆ ಮುಟ್ಟಿದೆ.

ಇನ್ನು ದಿಲ್ಲಿ​ಯಲ್ಲಿ ಲೀಟರ್‌ ಪೆಟ್ರೋ​ಲ್‌ಗೆ 90.93 ರು.ಗೆ ಏರಿ​ಕೆ​ಯಾ​ಗಿದ್ದು, ಡೀಸೆಲ್‌ ದರ 81.32 ರು.ಗೆ ತಲು​ಪಿದೆ. ಇದ​ರೊಂದಿಗೆ 2021ರ ಆರಂಭದಿಂದ ಈವರೆಗೆ ಪೆಟ್ರೋಲ್‌ ದರವು 7.22 ರು.ನಷ್ಟು ಏರಿ​ದ್ದರೆ, ಡೀಸೆಲ್‌ ಬೆಲೆ 7.45 ರು.ನಷ್ಟುಏರಿ​ಕೆ​ಯಾ​ಗಿದೆ.