ಚಿಲ್ಲರೆ ವ್ಯಾಪಾರಿಗಳು 2 ಟನ್‌ಗಿಂತ ಅಧಿಕ ಈರುಳ್ಳಿ ಇಡುವಂತಿಲ್ಲ!
ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಗಗನಕ್ಕೇರಿರುವ ಹಿನ್ನೆಲೆ| ಚಿಲ್ಲರೆ ವ್ಯಾಪಾರಿಗಳು 2 ಟನ್‌ಗಿಂತ ಅಧಿಕ ಈರುಳ್ಳಿ ಇಡುವಂತಿಲ್ಲ
ನವದೆಹಲಿ(ಅ.24): ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳು ಹೊಂದುವ ಈರುಳ್ಳಿ ದಾಸ್ತಾನಿನ ಮೇಲೆ ಮಿತಿ ಹೇರಿದೆ.
ಚಿಲ್ಲರೆ ವ್ಯಾಪಾರಿಗಳು 2 ಟನ್‌ವರೆಗೆ ಮತ್ತು ಸಗಟು ವ್ಯಾಪಾರಿಗಳು ಗರಿಷ್ಠ 25 ಟನ್‌ವರೆಗೆ ಮಾತ್ರ ದಾಸ್ತಾನು ಇಟ್ಟುಕೊಳ್ಳಬಹುದು. ಈ ನಿಯಮ ಡಿಸೆಂಬರ್ 31ರವರೆಗೂ ಚಾಲ್ತಿಯಲ್ಲಿರಲಿದೆ ಎಂದು ಗ್ರಾಹಕ ಸಚಿವಾಲಯ ಕಾರ‍್ಯದರ್ಶಿ ಲೀನಾ ನಂದನ್ ಶುಕ್ರವಾರ ತಿಳಿಸಿದ್ದಾರೆ.
ಬಳಿಕ ಕೇಂದ್ರ ಸಚಿವ ಪೀಯೂಷ್ ಗೋಯಲ್ ಸಹ ಟ್ವೀಟ್ ಮಾಡಿ, ‘ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ನಿಯಂತ್ರಿಸಲು ಮೋದಿ ನೇತೃತ್ವದ ಸರ್ಕಾರ ಈರುಳ್ಳಿ ದಾಸ್ತಾನಿನ ಮೇಲೆ ಮಿತಿ ಹೇರಿದೆ’ ಎಂದು ತಿಳಿಸಿದ್ದಾರೆ.