Asianet Suvarna News Asianet Suvarna News

ಮುಂಗಡ ಪಾವತಿಸಿದ ಕೆಲವೇ ಗಂಟೆಗಳಲ್ಲಿ ಸ್ಪೆಕ್ಟ್ರಂ ಹಂಚಿಕೆ ಪತ್ರ ಕೈಗೆ; ಟೆಲಿಕಾಂ ಇಲಾಖೆ ಕಾರ್ಯವೈಖರಿಗೆ ಮಿತ್ತಲ್ ಪ್ರಶಂಸೆ

*ಟೆಲಿಕಾಂ ಇಲಾಖೆಗೆ 8,312.4 ಕೋಟಿ ರೂ. ಪಾವತಿಸಿರುವ ಭಾರ್ತಿ ಏರ್ ಟೆಲ್ ಕಂಪನಿ
*ಕೆಲವೇ ಗಂಟೆಗಳಲ್ಲಿ 5ಜಿ ಸ್ಪೆಕ್ಟ್ರಂ ಹಂಚಿಕೆ ಪತ್ರವನ್ನು ಭಾರ್ತಿ ಏರ್ ಟೆಲ್ ಗೆ ನೀಡಿದ ಟೆಲಿಕಾಂ ಇಲಾಖೆ
*20 ವಾರ್ಷಿಕ ಕಂತುಗಳಲ್ಲಿ ಟೆಲಿಕಾಂ ಇಲಾಖೆಗೆ ಹಣ ಪಾವತಿಸಲಿರುವ ಕಂಪನಿಗಳು
 

Airtel gets spectrum allocation letter Sunil Mittal hails ease of doing business
Author
Bangalore, First Published Aug 18, 2022, 8:47 PM IST

ನವದೆಹಲಿ (ಆ.18): ಟೆಲಿಕಾಂ ಇಲಾಖೆಗೆ ಮುಂಗಡ ಪಾವತಿ ಮಾಡಿದ ಕೆಲವೇ ಗಂಟೆಗಳಲ್ಲಿ ಸ್ಪೆಕ್ಟ್ರಂ ಹಂಚಿಕೆ ಪತ್ರವನ್ನು ಭಾರ್ತಿ ಏರ್ ಟೆಲ್ ಸ್ವೀಕರಿಸಿದೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯಸ್ಥ ಸುನಿಲ್ ಭಾರ್ತಿ ಮಿತ್ತಲ್ ಗುರುವಾರ ತಿಳಿಸಿದ್ದಾರೆ. ಟೆಲಿಕಾಂ ಇಲಾಖೆ ಸ್ಪೆಕ್ಟ್ರಂ ಹಂಚಿಕೆ  ಪತ್ರವನ್ನು ಮುಂಗಡ ಪಾವತಿ ಮಾಡಿದ ದಿನವೇ ಹಸ್ತಾಂತರಿಸಿರೋದು ಇದೇ ಮೊದಲು. 'ಸ್ಪೆಕ್ಟ್ರಂ ಬಾಕಿಗೆ ಸಂಬಂಧಿಸಿ ಏರ್ ಟೆಲ್ 8,312.4 ಕೋಟಿ ರೂ. ಪಾವತಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ನಿಗದಿತ ಫ್ರಿಕ್ವೆನ್ಸಿ ಬ್ಯಾಂಡ್ ಗಳ ಹಂಚಿಕೆ ಪತ್ರ ನೀಡಲಾಯಿತು. ಭರವಸೆ ನೀಡಿರುವ ಸ್ಪೆಕ್ಟ್ರಂ ಜೊತೆಗೆ ಇ-ಬ್ಯಾಂಡ್ ಹಂಚಿಕೆ ನೀಡಲಾಯಿತು. ಯಾವುದೇ  ಗಡಿಬಿಡಿ ಇಲ್ಲ, ಫಾಲೋಅಪ್ ಇಲ್ಲ, ಕಾರಿಡರ್ ತುಂಬಾ ಓಡಬೇಕಾಗಿಲ್ಲ. ಇದು ಪೂರ್ಣ ಘನತೆಯಿಂದ ಉದ್ಯಮ ನಡೆಸುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ' ಎಂದು ಹೇಳಿಕೆಯೊಂದರಲ್ಲಿ ಮಿತ್ತಲ್ ತಿಳಿಸಿದ್ದಾರೆ. 

ಟೆಲಿಕಾಂ ಇಲಾಖೆ (Telecom Department) ನೆಟ್ ವರ್ಕ್ ಸೇವಾ ಪೂರೈಕೆದಾರರಾದ ಭಾರ್ತಿ ಏರ್ ಟೆಲ್ (Bharti Airtel), ರಿಲಯನ್ಸ್ ಜಿಯೋ (Reliance Jio), ಅದಾನಿ ಡೇಟಾ ನೆಟ್ ವರ್ಕ್ಸ್ ಹಾಗೂ ವೊಡಾಫೋನ್ ಐಡಿಯಾದಿಂದ (Vodafone Idea) ಸುಮಾರು 17,876 ಕೋಟಿ ರೂ. ಪಾವತಿ ಸ್ವೀಕರಿಸಿದೆ. ಇತ್ತೀಚೆಗೆ ನಡೆದ ಸ್ಪೆಕ್ಟ್ರಂ ಹರಾಜಿನಲ್ಲಿ (Spectrum Auction) ಈ ಕಂಪನಿಗಳು ಗಳಿಸಿದ ಸ್ಪೆಕ್ಟ್ರಂಗೆ ಈ ಪಾವತಿ ಮಾಡಲಾಗಿದೆ.ಇನ್ನು ಎಲ್ಲ ಟೆಲಿಕಾಂ ನಿರ್ವಾಹಕರು 20 ವಾರ್ಷಿಕ ಕಂತುಗಳಲ್ಲಿ ಪಾವತಿ ಮಾಡಲು ನಿರ್ಧರಿಸಿವೆ. ಭಾರ್ತಿ ಏರ್ ಟೆಲ್ ನಾಲ್ಕು ವಾರ್ಷಿಕ ಕಂತುಗಳಿಗೆ ಸರಿಸಮನಾದ 8,312.4 ಕೋಟಿ ರೂ. ಪಾವತಿಸಿದೆ.'ಟೆಲಿಕಾಂ ಇಲಾಖೆಯೊಂದಿಗಿನ ನನ್ನ 30 ವರ್ಷಗಳಿಗೂ ಅಧಿಕ ಅನುಭವದಲ್ಲಿ ಇದೇ ಮೊದಲ ಬಾರಿಗೆ! ಕೆಲಸ ಅಂದ್ರೆ ಹೀಗಿರಬೇಕು. ಉನ್ನತ ಸ್ಥಾನದಲ್ಲಿ ಸರಿಯಾದ ನಾಯಕತ್ವ. ಎಂಥ ಬದಲಾವಣೆ! ಬದಲಾವಣೆ ಈ ದೇಶವನ್ನು ಪರಿವರ್ತಿಸಬಲ್ಲದು. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಕನಸಿಗೆ ಶಕ್ತಿ ತುಂಬಬಲ್ಲದು' ಎಂದು ಮಿತ್ತಲ್ ಹೇಳಿದ್ದಾರೆ.

ಆರ್‌ಬಿಐನಲ್ಲಿ ಕೊಳೆಯುತ್ತಿದೆ 48,262 ಕೋಟಿ ರೂಪಾಯಿ, ನಿಷ್ಕ್ರೀಯ ಬ್ಯಾಂಕ್ ಖಾತಗೆ ವಾರಸುದಾರರೇ ಇಲ್ಲ!

ಪ್ಯಾನ್ ಇಂಡಿಯಾ ಸ್ಪೆಕ್ಟ್ರಂ
ಏರ್ ಟೆಲ್ 19,867.8 MHz ಸ್ಪೆಕ್ಟ್ರಂ (Spectrum) ಪಡೆದಿದ್ದು, ಪ್ಯಾನ್ ಇಂಡಿಯಾ (PAN India) ಮಟ್ಟದಲ್ಲಿ ಸೇವೆ ನೀಡಲಿರುವ 3.5 GHz ಹಾಗೂ 26 GHz ಬ್ಯಾಂಡ್ ಗಳನ್ನು ಪಡೆದಿದೆ. ಕಡಿಮೆ ಹಾಗೂ ಮಧ್ಯಮ ಬ್ಯಾಂಡಿನ ಸ್ಪೆಕ್ಟ್ರಂ ರೆಡಿಯೋ ತರಂಗಾಂತರಗಳನ್ನು ಖರೀದಿ ಮಾಡಿದೆ. 

ಜಿಯೋಗೆ ಅತೀದೊಡ್ಡ ಪಾಲು
ದೇಶದ ಅತೀದೊಡ್ಡ ಟೆಲಿಕಾಂ ಸ್ಪೆಕ್ಟ್ರಂ (Spectru) ಹರಾಜಿನಲ್ಲಿ (Auction) 1.5ಲಕ್ಷ ಕೋಟಿ ರೂ. ಮೌಲ್ಯದ ಬಿಡ್ಸ್ ಸಲ್ಲಿಕೆಯಾಗಿತ್ತು. ಮುಖೇಶ್ ಅಂಬಾನಿಯ ಜಿಯೋ (Jio) ಎಲ್ಲ ತರಂಗಾಂತರಗಳಲ್ಲಿ ಅರ್ಧದಷ್ಟನ್ನು 87,946.93 ಕೋಟಿ ರೂ. ಬಿಡ್ ಗೆ ಜಯಿಸಿತ್ತು. ರಿಲಯನ್ಸ್ ಜಿಯೋ (Reliance Jio) 7,864.78 ಕೋಟಿ ರೂ., ವೋಡಾಫೋನ್ ಐಡಿಯಾ 1,679.98 ಕೋಟಿ ರೂ. ಹಾಗೂ ಅದಾನಿ (Adani) ಡೇಟಾ ನಟ್ ವರ್ಕಸ್ 18.94 ಕೋಟಿ ರೂ. ಪಾವತಿ (Pay) ಮಾಡಿದೆ. 

ಗುಡ್ ಫೆಲೋಸ್ ನಲ್ಲಿ ರತನ್ ಟಾಟಾ ಹೂಡಿಕೆ;ವೃದ್ಧರ ಒಂಟಿತನ ದೂರ ಮಾಡಲಿದೆ ಈ ವಿನೂತನ ಸ್ಟಾರ್ಟಪ್‌

ಭಾರತದ ನಂ.1 ಶ್ರೀಮಂತ ಗೌತಮ್ ಅದಾನಿ ಗ್ರೂಪ್ 400 MHz ಬ್ಯಾಂಡಿಗೆ 211.86 ಕೋಟಿ ರೂ. ಬಿಡ್ ಸಲ್ಲಿಕೆ ಮಾಡಿದೆ.ಅದರೆ, ಇದು ಸಾರ್ವಜನಿಕರಿಗೆ ದೂರಸಂಪರ್ಕ ಸೇವೆಗಳನ್ನು ನೀಡಲು ಬಳಕೆಯಾಗುತ್ತಿಲ್ಲ. ಭಾರ್ತಿ ಏರ್ ಟೆಲ್ 43,039.63ರೂ. ಬಿಡ್ ಯಶಸ್ವಿಯಾಗಿದ್ರೆ, ವೊಡಾಫೋನ್ ಐಡಿಯಾ ಲಿ. 18,786.25 ಕೋಟಿ ರೂ.ಗೆ ಸ್ಪೆಕ್ಟ್ರಂ ಖರೀದಿಸಿದೆ. 


 

Follow Us:
Download App:
  • android
  • ios